Fact check: ಯುಪಿಯಲ್ಲಿ BJP ಗೆದ್ದರೆ ಯೋಗಿ ಮುಂದಿನ ಪ್ರಧಾನಿ ಆಗುತ್ತಾರೆ- ಅಖಿಲೇಶ್ ಯಾದವ್ ಹೇಳಿಕೆ ನಿಜವೇ?

ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಈ ಬಾರಿ ಗೆದ್ದರೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಈ ಹೇಳಿಕೆಗಳನ್ನು ಹಲವಾರು ಜನರು ಫೇಸ್‌ಬುಕ್‌ಗಳಲ್ಲಿ ಹಂಚಿಕೊಂಡಿದ್ದರೆ. ಅವುಗಳನ್ನು  ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ ಚೆಕ್ :

ಭಾರತೀಯ ಚುನಾವಣಾ ಆಯೋಗವು (EC) ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶನಿವಾರ ಪ್ರಕಟಿಸಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದ್ದು ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಆಡಳಿತದಲ್ಲಿರುವ ಬಿಜೆಪಿ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿಯವರ ಬಹುಜನ ಸಮಾಜ ಪಕ್ಷದ ನಡುವೆ ಚತುಷ್ಕೋನ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಹಲವಾರು ಮಾಧ್ಯಮಗಳು ರಾಜಕೀಯ ಮುಖಂಡರುಗಳ ಸಂದರ್ಶನ ನಡೆಸುತ್ತಿವೆ. ಅಂತೆಯೇ ಆಜ್ ತಕ್ ಟಿವಿ ವಾಹಿನಿಯ ನಿರೂಪಕಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಅವರನ್ನು ಸಂದರ್ಶಿಸಿದರು. ಆಗ ಈ ಬಾರಿ ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ತೊಡೆದುಹಾಕುತ್ತಾರೆ ಎಂದರು. ಆಗ ನಿರೂಪಕಿ ಅದು ಉಲ್ಟಾ ಆಗಿಬಿಟ್ಟರೆ ಏನು ಮಾಡುತ್ತೀರಿ? ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮನ್ನು 10 ವರ್ಷಗಳ ಕಾಲ ಅಧಿಕಾರಕ್ಕೆ ಹೊರಗಿಟ್ಟ ಹಾಗೆ ಆಗುತ್ತದೆ ಎಂಬ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಖಿಲೇಶ್ ಯಾದವ್, “ತೋ ಫಿರ್ ವೋ ಪ್ರಧಾನ್ ಮಂತ್ರಿ ಕೆ ದಾವೇದರ್ ಹೋ ಜಾಯೇಂಗೆ [ಅವರು ಪ್ರಧಾನಿ ಅಭ್ಯರ್ಥಿಯಾಗುತ್ತಾರೆ]” ಎಂದು ಹೇಳಿದರು, ಮತ್ತು ಮುಂದುವರಿದು “ಯೇ ಬಿಜೆಪಿ ವಾಲೇ ಸೋಚ್ ಲೈನ್” [ಬಿಜೆಪಿಯವರು ಹಾಗೆ ಯೋಚಿಸಬಹುದು]” ಎಂದು ಕೂಡ ಹೇಳಿದರು. ಆದರೆ ಅವರ ಹೇಳಿಕೆಯ ಮೊದಲ ಭಾಗವನ್ನು ಮಾತ್ರ ಪೋಸ್ಟರ್ ಮಾಡಿ ವೈರಲ್ ಮಾಡಲಾಗಿದೆ. ಹಾಗೆ ಬಿಜೆಪಿಯವರು ಯೋಚಿಸುತ್ತಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದನ್ನು ಕೈಬಿಟ್ಟು ಪ್ರಚಾರ ಮಾಡಲಾಗುತ್ತಿದೆ.

 

ಅಖಲೇಶ್ ಯಾದವ್ ಅವರ ಆಜ್ ತಕ್ ಮಾಧ್ಯಮದ ಜೊತೆ ಮಾತನಾಡಿದ್ದನ್ನು ಇಲ್ಲಿ ನೋಡಬಹುದು.

ಅಖಿಲೇಶ್ ಯಾದವ್ ಮಾತನಾಡುತ್ತಾ, “ರಾಜ್ಯದಲ್ಲಿ ಬಿಜೆಪಿ ಪಕ್ಷ ನಿರ್ಗಮಿಸುವ ಹಾದಿಯಲ್ಲಿದೆ. ಯುಪಿಯಲ್ಲಿ ಮಹಿಳೆಯರು ಹೆಚ್ಚು ಅಸುರಕ್ಷಿತರಾಗಿದ್ದಾರೆ. ಹತ್ರಾಸ್, ಉನ್ನಾವೋ ಘಟನೆಗಳನ್ನು ಮರೆಯಲಾಗುವುದೇ..?. ರಾಜ್ಯವು ಗಲಭೆಗಳು, ಹಿಂಸಾಚಾರ, ಅತ್ಯಾಚಾರ ಪ್ರಕರಣಗಳನ್ನು ವರದಿ ಮಾಡಿದೆ” ಎಂದು ಬಿಜೆಪಿ ಸರ್ಕಾರದ ಆಡಳಿತವನ್ನು ಟೀಕಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ‘ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಗೆದ್ದರೆ, ಯೋಗಿ ಪ್ರಧಾನಿಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂದು ಬಿಜೆಪಿ ಯೋಚಿಸುತ್ತಿದೆ’ ಎಂದು ಹೇಳಿದ್ದಾರೆ. ಅದರಲ್ಲಿ ಬಿಜೆಪಿ ಯೋಚಿಸುತ್ತಿದೆ ಎಂಬುದನ್ನು ಮರೆಮಾಚಿ ಮೊದಲ ಭಾಗವನ್ನು ಮಾತ್ರ ಹಂಚಿಕೊಂಡು ದಿಕ್ಕು ತಪ್ಪಿಸಲಾಗುತ್ತಿದೆ.


ಇದನ್ನೂ ಓದಿರಿ: Fact check: 1986 ರಲ್ಲಿ ರಾಜೀವ್ ಗಾಂಧಿಯನ್ನು ರಕ್ಷಿಸಲು SPG ಭಿಕ್ಷುಕನ ಮೇಲೆ ಗುಂಡು ಹಾರಿಸಿದ್ದು ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights