ಫ್ಯಾಕ್ಟ್‌ಚೆಕ್: ದುರ್ಗಾ ವಿಗ್ರಹ ಮೆರವಣಿಗೆ ವೇಳೆ ಹಿಂದೂ ಗುಂಪಿನ ಮೇಲೆ ದಾಳಿ ಮಾಡಿದ್ದು ಮುಸ್ಲಿಮರಲ್ಲ

ದುರ್ಗಾ ದೇವಿ ವಿಗ್ರಹದ ಮೆರವಣಿಗೆಯಲ್ಲಿ ಭಾಗವಹಿಸುವ ಜನರ ಮೇಲೆ ಭಯೋತ್ಪಾದಕ (ಮುಸ್ಲಿಮರಿಂದ) ದಾಳಿ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಮೆರವಣಿಗೆ ಸಾಗುತ್ತಿದ್ದ ವೇಳೆ ಅಳವಡಿಸಿದ್ದ ಧ್ವನಿ ವರ್ಧಕ( ಸೌಂಡ್‌ ಸಿಸ್ಟಮ್ಸ್) ಮತ್ತು ವಿದ್ಯುತ್ ಉಪಕರಣದ (ಲೈಟಿಂಗ್ಸ್) ವಾಹನಕ್ಕೆ ಕಲ್ಲು ತೂರಾಟ ನಡೆಸಿ ಹಿಂದೂಗಳ ಮೇಲೆ ದಾಳಿ ಮಾಡಲಾಗಿದ್ದು, ಇದು ಮುಸ್ಲಿಮರ ಕೃತ್ಯವೆಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಬಿಲಾಸ್‌ಪುರದಲ್ಲಿ ದುರ್ಗಾ ದೇವಿ ವಿಗ್ರಹದ ವಿಸರ್ಜನೆಯ ಮೆರವಣಿಗೆಯಲ್ಲಿ ಹಿಂದೂಗಳ ಮೇಲೆ ಕೋಮುವಾದಿ ದಾಳಿಯ ದೃಶ್ಯಗಳು ಎಂದು ಪೋಸ್ಟ್‌ಅನ್ನು ವೈರಲ್ ಮಾಡಲಾಗಿದೆ. ಈ ಘಟನೆ ನಡೆದರೂ ಪೊಲೀಸರು ದಾಳಿ ನಡೆಸಿದವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರಲು ಏನು ಕಾರಣ ಎಂಬ ಪ್ರಶ್ನೆಯೊಂದಿಗೆ ಪೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಅಂತರ್ಜಾಲದಲ್ಲಿ ಹುಡುಕಿದಾಗ ದುರ್ಗಾ ವಿಗ್ರಹ ವಿಸರ್ಜನೆಯ ಕುರಿತು ಬಿಲಾಸ್‌ಪುರದಲ್ಲಿ ನಡೆದ ಈ ಘಟನೆ ಕುರಿತು ಅನೇಕ ಸುದ್ದಿ ವರದಿಗಳು ಲಭ್ಯವಾಗಿವೆ. ಈ ಸುದ್ದಿ ಲೇಖನಗಳಲ್ಲಿ ಲಿಂಕ್ ಮಾಡಲಾದ ವೀಡಿಯೊ ವೈರಲ್ ವೀಡಿಯೊಗೆ ಸಂಬಂಧಿಸಿವೆ.

ಟೈಮ್ಸ್ ನೌ ವರದಿಯ ಪ್ರಕಾರ, ದುರ್ಗಾ ದೇವಿ ವಿಗ್ರಹದ ವಿಸರ್ಜನೆ ನಡೆಯುವ ಸಂದರ್ಭದಲ್ಲಿ ದುರ್ಗಾಪೂಜಾ ಸಮಿತಿಗಳ ಎರಡು ಹಿಂದೂ ಗುಂಪುಗಳ ಸದಸ್ಯರಲ್ಲಿ ಯಾರು ಮೊದಲು ಹೋಗುಬೇಕು ಎನ್ನುವ ಕಾರಣಕ್ಕೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ. ಇದು 07 ಅಕ್ಟೋಬರ್ 2022 ರಂದು ಬಿಲಾಸ್‌ಪುರದ ಸದರ್ ಬಜಾರ್‌ನಲ್ಲಿ ಸಂಭವಿಸಿದೆ.

ಪೊಲೀಸರು ಎರಡು ಗುಂಪುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ FIR ಪ್ರತಿ ಲಭ್ಯವಾಗಿದ್ದು, ಇದರಲ್ಲಿ ಆರೋಪಿಗಳು ಮತ್ತು ದೂರುದಾರರಿಬ್ಬರ ಹೆಸರುಗಳು ಹಿಂದೂಗಳದ್ದು ಎಂಬುದು ಗಮನಾರ್ಹ.

ಈ ಘಟನೆಯ ಕುರಿತು ಕೆಲವು ಇತರ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಸುದ್ದಿ ಸಂಸ್ಥೆ ANI ಕೂಡ ಪೊಲೀಸರ ಹೇಳಿಕೆಯೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದೆ, ಅದನ್ನು ಇಲ್ಲಿ ಓದಬಹುದು. ಈ ಪುರಾವೆಯು ಎರಡು ಹಿಂದೂ ಗುಂಪುಗಳ ನಡುವೆ ನಡೆದ ಗಲಾಟೆಯನ್ನು ವೈರಲ್ ಪೋಸ್ಟ್‌ನಲ್ಲಿ ಹಿಂದೂಗಳ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ದುರ್ಗಾ ದೇವಿ ವಿಗ್ರಹದ ವಿಸರ್ಜನೆ ನಡೆಯುವ ಸಂದರ್ಭದಲ್ಲಿ ದುರ್ಗಾಪೂಜಾ ಸಮಿತಿಗಳ ಎರಡು ಹಿಂದೂ ಗುಂಪುಗಳ ಸದಸ್ಯರಲ್ಲಿ ಯಾರು ಮೊದಲು ಹೋಗುಬೇಕು ಎನ್ನುವ ಕಾರಣಕ್ಕೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ. ಇದು 07 ಅಕ್ಟೋಬರ್ 2022 ರಂದು ಬಿಲಾಸ್‌ಪುರದ ಸದರ್ ಬಜಾರ್‌ನಲ್ಲಿ ಸಂಭವಿಸಿದೆ. ದುರ್ಗಾ ವಿಗ್ರಹ ವಿಸರ್ಜನೆಗೆ ಸಂಬಂಧಿಸಿದಂತೆ ಎರಡು ಹಿಂದೂ ಗುಂಪುಗಳ ನಡುವಿನ ಘರ್ಷಣೆಯ ವೀಡಿಯೊವನ್ನು ಕೋಮು ಹಿನ್ನಲೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: RSS ನವರನ್ನು ಮುಗಿಸುತ್ತೇವೆ ಎಂದು ಘೋಷಣೆ ಕೂಗಿದ್ದು ಉತ್ತರ ಪ್ರದೇಶದಲ್ಲಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights