BSY cabinet expansion : ಮುಹೂರ್ತ ಇಟ್ಟ CMಗೆ ಶುರುವಾಯ್ತು ನಾನಾ ಸಂಕಟ…

ತಿಂಗಳುಗಳ ನಂತರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಇಟ್ಟ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಈಗ ಸಖಟಪರ್ವ ಶುರುವಾಗಿದೆ. ಪಕ್ಷಾಂತರಿಗಳು ಹಾಗೂ ಮೂಲ ಬಿಜೆಪಿಗರು ಎಂಬ ಎರಡು ಪಾಳೆಯದಲ್ಲಿ ಇರುವ ಆಕಾಂಕ್ಷಿಗಳು ಸಿಎಂಗೆ ತಲೆನೋವು ತಂದಿದ್ದಾರೆ.


ಪಕ್ಷಾಂತರಿಗಳ ಪೈಕಿ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಇಲ್ಲ ಎಂಬುದು ಖಾತ್ರಿಯಾಗಿದೆ. ಹಾಗೆಯೇ ಸೋತವರನ್ನೂ ದೂರ ಇಡಲಾಗುತ್ತಿದೆ. ಇದು ಸಹಜವಾಗಿಯೇ ಭಿನ್ನ ದನಿಗಳಿಗೆ ಆಸ್ಪದ ನೀಡಿದೆ. ಉಪಸಮರ ಸೋತ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ತಮ್ಮನ್ನು ಕಡೆಗಣಿಸದಂತೆ ಎಚ್ಚರಿಕೆ ಮಿಶ್ರಿತ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಚನ್ನಪಟ್ಟಣದಲ್ಲಿ ಚುನಾವಣೆ ಸೋತಿರುವ ಸಿಪಿ ಯೋಗೇಶ್ವರಗೆ ಮಂತ್ರಿ ಸ್ಥಾನ ಸಿಗುವ ಬಗ್ಗೆ ವರದಿಗಳು ಹರಿದಾಡುತ್ತಿದ್ದು, ಇದು ಹಲವಾರಿ ಬಿಜೆಪಿಗರನ್ನು ಕೆರಳಿಸಿದೆ. ಈಗಾಗಲೇ ಸೋತ ಸವದಿಯನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಿಎಸ್ವೈ ಮತ್ತೆ ಸೋತವರಿಗೇ ಮಣೆ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಇನ್ನು ನೇರ ಹೈಕಮಾಂಡ್ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಯೋಗೇಶ್ವರ ಅಲ್ಲಿಂದಲೇ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದು ಬಿಎಸ್ವೈ ಅವರ ಕೈ ಕಟ್ಟಿಹಾಕಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಆದರೆ ಇದಕ್ಕೆ ಬಿಜೆಪಿಯ ಹಲವಾರು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಸ್ತರಣೆಗ ಘೋಷಣೆ ಆಗುತ್ತಿದ್ದಂತೆಯೇ ಎಂಟಿಬಿ ನಾಗರಾಜ್ ಸಿಎಂ ನಿವಾಸಕ್ಕೆ ಧಾವಿಸಿ ತಮಗೆ ಅನ್ಯಾಐ ಆಗದಂತೆ ನೋಡಿಕೊಳ್ಳಬೇಕು ಎಂದು ಃಏಳಿದರೇ, ಮೈಸೂರಿನಲ್ಲಿ ವಿಶ್ವನಾಥ್ ಪರೋಕ್ಷವಾಗಿ ಸಿಎಂಗೆ ಕಾನೂನಿನ ಪಾಠ ಮಾಡಿದ್ದಾರೆ.

ಇದೆಲ್ಲದರ ನಡುವೆ ಸಂಭಾವ್ಯ ಸಚಿವರು ತಮಗೆ ಇಂಥದೇ ಖಾತೆ ಬೇಕು ಎಂಬ ಬೇಡಿಕೆ ಇಟ್ಟಿರುವುದು ಸಿಎಂಗೆ ಮತ್ತೊಂದು ಸಮಸ್ಯೆ ಉಂಟುಮಾಡಿದೆ. ಜಲಸಂಪನ್ಮೂಲಕ್ಕೆ ರಮೇಶ್ ಮತ್ತು ಬೆಂಗಳೂರು ಅಭಿವೃದ್ಧಿಗೆ ಸೋಮಶೇಖರ್‍ ಪಟ್ಟು ಹಿಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights