ಫ್ಯಾಕ್ಟ್‌ಚೆಕ್‌: ಚೀನಾದಲ್ಲಿ ’ಕೃತಕಸೂರ್ಯ’ನನ್ನುಉಡಾಯಿಸಿದ್ದು ನಿಜವೇ?

ಚೀನಾದಲ್ಲಿ ಇತ್ತೀಚೆಗೆ “ಕೃತಕ ಸೂರ್ಯ”ನನ್ನು ಉಡಾಯಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ 0:30 ಸೆಕೆಂಡುಗಳ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ವಿಡಿಯೊವನ್ನು ಹೊರತುಪಡಿಸಿ ಯಾವ ಸಮಯದಲ್ಲಿ ಉಡಾವಣೆ ಮಾಡಲಾಗಿದೆ ಎಂದು ಉಲ್ಲೇಖಿಸಿಲ್ಲ.
ಈ ವಿಡಿಯೊವನ್ನು ಟ್ವಿಟ್ಟರ್‌‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಜನಪ್ರಿಯ ಖಾತೆಗಳಾದ RapTv, ಪಾಪ್ ಸಂಸ್ಕೃತಿ ಮತ್ತು ಕ್ರಿಪ್ಟೋ ಹೂಡಿಕೆದಾರ ಎಂದು ಹೇಳಿಕೊಳ್ಳುವ ಶ್ರೀ ವೇಲ್ ಖಾತೆಗಳಲ್ಲೂ ವಿಡಿಯೊ ಹಂಚಿಕೊಳ್ಳಲಾಗಿದೆ.

https://twitter.com/raptvcom/status/1480378657541705731?ref_src=twsrc%5Etfw%7Ctwcamp%5Etweetembed%7Ctwterm%5E1480378657541705731%7Ctwgr%5E%7Ctwcon%5Es1_c10&ref_url=https%3A%2F%2Fwww.altnews.in%2Fno-china-did-not-launch-an-artificial-sun-into-the-sky%2F

ಭಾರತೀಯ ಟಿವಿ ಪತ್ರಕರ್ತ ವಿವೇಕ್ ಬಾಜ್‌ಪೇಯ್ ಹಿಂದಿ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲೂ ಈ ವಿಡಿಯೋವನ್ನು ವ್ಯಾಪಕವಾಗಿ ಶೇರ್‍ ಮಾಡಲಾಗಿದೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ಆಲ್ಟ್‌ನ್ಯೂಸ್ ಬಯಲಿಗೆಳೆದಿದೆ.

ಫ್ಯಾಕ್ಟ್‌ಚೆಕ್: ವೀಡಿಯೊವನ್ನು ಗಮನಿಸಿದಾಗ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳು ಮಾತನಾಡುವುದನ್ನು ಗಮನಿಸಬಹುದು. ಇಲ್ಲಿನ ಸಂಭಾಷಣೆಯನ್ನು ಅರ್ಥಮಾಡಿಕೊಳ್ಳಲು ಚೀನಾದ ತಾಂತ್ರಿಕ ನವೋಮಿ ವೂ ಅವರನ್ನು alt news ಸಂಪರ್ಕಿಸಿದೆ. ಒಬ್ಬ ಪುರುಷ ಹಾಗೂ ಮಹಿಳೆ ಮಾತನಾಡಿರುವುದು ಏನೆಂದು ನವೋಮಿ ವೂ ವಿವರಿಸಿದ್ದಾರೆ. “ಇದು ಬೆಂಕಿಹೊತ್ತಿಸಲ್ಪಟ್ಟಿದೆ, ಅದು ಹೊತ್ತಿಕೊಂಡಿದೆ (ಹಲವು ಬಾರಿ ಹೀಗೆ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ) ರಾಕೆಟ್ ಇದೀಗ ಉಡಾವಣೆಯಾಗುತ್ತಿದೆ” ಎನ್ನುತ್ತಾರೆ ಮಹಿಳೆ. “ನಾನು ಮಾತನಾಡುವುದನ್ನು ನೀವು ಕೇಳುತ್ತಿದ್ದೀರಾ?” ಎಂದು ಕೇಳುತ್ತಿದ್ದಾರೆ. ಬಹುಶಃ ಫೋನ್‌ ಮೂಲಕ ಸಂಪರ್ಕದಲ್ಲಿರಬಹುದು ಎಂದು ಊಹಿಸಲಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮುಂದಿನ ತಿಂಗಳು ಹೈದ್ರಾಬಾದ್‍ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಮೋದಿ ನಿರ್ಮಿಸಿದ್ದಲ್ಲ!


 

ಈ ವಿಡಿಯೋವನ್ನು @BleuZ00m ಟ್ವೀಟ್ ಮಾಡಿದ್ದನ್ನು ಆಲ್ಟ್‌ನ್ಯೂಸ್‌ ಗಮನಿಸಿದೆ. ಈ ವೈರಲ್ ವೀಡಿಯೊ ಇತ್ತೀಚಿನಲ್ಲಿ ದಿನದಲ್ಲಿ ಉಡಾಯಿಸಲಾದ ರಾಕೆಟ್ ದಾಗಿದೆ ಎಂದು ಲೇಖನ ಬರೆದಿದ್ದಾರೆ. ಡಿಸೆಂಬರ್ 23, 2021 ರಂದು ಪ್ರಕಟವಾದ ಅವರ ಲೇಖನದಲ್ಲಿ , ” ಲಾಂಗ್ ಮಾರ್ಚ್ 7A ರಾಕೆಟ್‌ಅನ್ನು ಕರಾವಳಿ ತೀರದ ವೆನ್‌ಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ರಾಕೆಟ್‌ ಹಾರಿಸಲಾಗಿದೆ” ಎಂದು ಹೇಳಲಾಗಿದೆ. ‘ಕರಾವಳಿ’ ಎಂಬ ಕೀ ವರ್ಡ್ ಆಧಾರದಲ್ಲಿ ಮುಂದಿನ ವಿವರಗಳನ್ನು ಪರಿಶೀಲಿಸಲಾಗಿದೆ.

“ನಾವು TOR ಬ್ರೌಸರ್‌ನ ಸಹಾಯದಿಂದ ಚೈನೀಸ್ ಸರ್ಚ್ ಇಂಜಿನ್ ಪ್ಲಾಟ್‌ಫಾರ್ಮ್ ಬೈದುನಲ್ಲಿ ಕೀವರ್ಡ್ ಬಳಸಿ ಹುಡುಕಾಡಿದೆವು. ದಕ್ಷಿಣ ಚೀನಾದ ಕರಾವಳಿ ನಗರವಾದ ವೆನ್‌ಚಾಂಗ್‌ನಲ್ಲಿರುವ ’ಬಾಹ್ಯಾಕಾಶ ಪಟ್ಟಣ’ ಲೊಂಗ್ಲೋದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು 2020 ರ ಸುದ್ದಿ ವರದಿಯನ್ನು ಗಮನಿಸಲಾಗಿದೆ. ಹೈನಾನ್ ಪ್ರಾಂತ್ಯ ಕಡಲತೀರದ ಚಿತ್ರವನ್ನು ಸ್ಪಷ್ಟವಾಗಿ ತೋರಿಸುವ ಮತ್ತೊಂದು ವರದಿಯನ್ನು ಗಮನಿಸಲಾಯಿತು. ಈ ಎಲ್ಲಾ ಮಾಹಿತಿಯು ಫ್ಯಾಕ್ಟ್‌ಚೆಕ್‌ಗೆ ಸಹಕಾರಿಯಾಯಿತು” ಎಂದು ಆಲ್ಟ್‌ ನ್ಯೂಸ್ ತಿಳಿಸಿದೆ.

ವಿಡಿಯೊದ ಮೂಲವನ್ನು ಕಂಡುಹಿಡಿಯಲಾಗಿಲ್ಲ. ಆದರೆ YouTube ನಲ್ಲಿ ರಾಕೆಟ್ ಉಡಾವಣೆಯ ಮತ್ತೊಂದು ವಿಡಿಯೊವನ್ನು ಗಮನಿಸಲಾಗಿದೆ. ಈ ವಿಡಿಯೊವನ್ನು ಬೇರೆ ಬೇರೆ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. “ಲಾಂಗ್ ಮಾರ್ಚ್ 7A ರಾಕೆಟ್ ಜೋಡಿಯನ್ನು ವೆನ್‌ಚಾಂಗ್ ಉಡಾವಣಾ ಕೇಂದ್ರದಿಂದ ಸಂಜೆ 6.12 ನಿಮಿಷಕ್ಕೆ ಉಡಾವಣೆ ಮಾಡಿತು” ಎಂದು ವಿಡಿಯೊ ವಿವರಣೆ ಹೇಳುತ್ತದೆ.


ಇದನ್ನೂ ಓದಿ: ಹತ್ತು ರೂ ಭಿಕ್ಷೆ ಕೊಟ್ಟು ಬಾಲಕಿಗೆ ಮೆಣಸಿನಕಾಯಿ ತಿನ್ನಿಸುತ್ತಿದ್ದಾರೆ ಎಂಬ ವಿಡಿಯೋದ ಅಸಲಿ ಕಥೆಯೇನು?


 

ಆಕಾಶದಲ್ಲಿ ಸೂರ್ಯನಂತೆ ಏಕೆ ಕಾಣಿಸಿಕೊಳ್ಳುತ್ತದೆ?   

ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಚಿತ್ರೀಕರಣ ಮಾಡುವಾಗ ಬೆಳಕು ಅತಿಯಾಗಿ ತೆರೆದುಕೊಳ್ಳುವುದರಿಂದ ರಾಕೆಟ್ ಉಡಾವಣೆಗಳ ರೆಕಾರ್ಡಿಂಗ್‌ಗಳಲ್ಲಿ ಗೋಳದ ಆಕಾರವು ಕಾಣಿಸಿಕೊಳ್ಳುವುದು ತುಂಬಾ ಸಾಮಾನ್ಯವಾಗಿದೆ. ಉದಾಹರಣೆಯಾಗಿ ಕೆಳಗಿನ ವಿಡಿಯೊ ನೋಡಿ.

ಒಟ್ಟಾರೆಯಾಗಿ ಹೇಳುವುದಾದರೆ,. ಕೃತಕ ಸೂರ್ಯನ “ಉಡಾವಣೆ” ಎಂದು ಕರೆಯಲಾಗುತ್ತಿರುವ ವೀಡಿಯೊ ವಾಸ್ತವವಾಗಿ ದೂರದಿಂದ ರೆಕಾರ್ಡ್ ಮಾಡಿದ ರಾಕೆಟ್ ಉಡಾವಣೆಗೆ ಸಂಬಂಧಿಸಿದ್ದಾಗಿದೆ.

Spread the love

Leave a Reply

Your email address will not be published. Required fields are marked *