ಹತ್ತು ರೂ ಭಿಕ್ಷೆ ಕೊಟ್ಟು ಬಾಲಕಿಗೆ ಮೆಣಸಿನಕಾಯಿ ತಿನ್ನಿಸುತ್ತಿದ್ದಾರೆ ಎಂಬ ವಿಡಿಯೋದ ಅಸಲಿ ಕಥೆಯೇನು?

ಇತ್ತೀಚಿನ ದಿನದಲ್ಲಿ ಹುಡುಗಿಯೊಬ್ಬಳ ಒಂದು ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡುತ್ತಿದೆ. ಆ ವಿಡಿಯೋ ಕಪ್ಪು ಬಿಳುಪು-ಬಣ್ಣದಲ್ಲಿ ‌ಇದ್ದು “ಉಪಕಾರ ಒಳ್ಳೆಯ ಮನಸ್ಸಿನಿಂದ ಮಾಡಿ, ಬಡತನದ ಮಗುವಿಗೆ ಹತ್ತು ರೂಪಾಯಿಯ ಆಸೆ ತೋರಿಸಿ ಮೆಣಸಿನಕಾಯಿ ತಿನ್ನಿಸುವ ಕಲ್ಲು ಹೃದಯವೇ ನಿಮ್ಮನ್ನು ದೇವರು {ಯಾರು} ಎಂದೂ ಮೆಚ್ಚಲ್ಲ” ಎಂಬ ಬರಹವು ವಿಡಿಯೋದ ಮೇಲೆ ಬರೆದಿದ್ದಾರೆ.

ಈ ವಿಡಿಯೋವನ್ನು ಹಲವಾರು ಮಂದಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಫೇಸ್ಬುಕ್ ಪೇಜ್‌ಗಳಲ್ಲಿ ಕೂಡ ಹರಿಯಬಿಟ್ಟಿದ್ದಾರೆ.  ವಿಡಿಯೋವನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.

ಫ್ಯಾಕ್ಟ್‌ಚೆಕ್:

ಈ ವಿಡಿಯೋ ವೈರಲ್ ಆದ ಕೆಲವೇ ಸಂದರ್ಭದಲ್ಲಿ ಆ ಕುಟುಂಬವು ಮತ್ತೊಂದು ವಿಡಿಯೋ ಮಾಡಿ ಇದು ಭಿಕ್ಷೆಯ ವಿಡಿಯೋ ಅಲ್ಲ, ತಮಾಷೆಯಾಗಿ ಮಾಡಿದ್ದು ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಅದೇ ಹೆಣ್ಣು ಮಗುವಿನ ಮತ್ತೊಂದು ವಿಡಿಯೋ ವನ್ನು ಬಿಡುಗಡೆ ಮಾಡಿದೆ. ಆ ವಿಡಿಯೋದ ಮೇಲೆ “ಇವಳು ಭಿಕ್ಷುಕಿ ಅಲ್ಲ, ಇವಳು ತನ್ನ ಚಿಕ್ಕಪ್ಪನೊಂದಿಗೆ ಮೆನಸಿನಕಾಯಿ ಜೊತೆ ಆಡುತ್ತಿದ್ದಾಳೆ” ಎಂದು ಬರೆದಿದೆ. ಮತ್ತು ಬೆರೇಯೆ  ವಸ್ತ್ರದೊಂದಿಗೆ ಹುಡುಗಿಯು ನಗುತ್ತಿರುವ ವಿಡಿಯೋವನ್ನು ಕೂಡ ಹಾಕಿದ್ದಾರೆ.  ಅವುಗಳನ್ನು ನೀವು ಕೆಳಗಡೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಹೆಣ್ಣು ಮಗುವಿಗೆ ಹತ್ತು ರೂಪಾಯಿ ಕೊಟ್ಟು  ಮೆಣಸಿನಕಾಯಿ ತಿನಿಸುವ ವಿಡಿಯೋವನ್ನು ತಮಾಷೆಯಾಗಿ ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿಲಾಗಿದ್ದು, ಅದಕ್ಕೆ ಬೇರೆ ಬೇರೆ ರೀತಿಯ ಬರಹಗಳೊಂದಿಗೆ ಷೇರ್ ಮಾಡಲಾಗಿದೆ. ಅದು ಭಿಕ್ಷೆಯ ವಿಡಿಯೋ ಅಲ್ಲ ಎಂದು ಸ್ವತಃ ಕುಟುಂಬ ಮತ್ತೊಂದು ವಿಡಿಯೋದ ಮೂಲಕ ಸ್ಪಷ್ಟಪಡಿಸಿದೆ.


ಇದನ್ನೂ ಓದಿ: Fact Check: ಪಂಜಾಬ್ ಸಿಎಂ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದು ನಿಜವೇ..?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಹತ್ತು ರೂ ಭಿಕ್ಷೆ ಕೊಟ್ಟು ಬಾಲಕಿಗೆ ಮೆಣಸಿನಕಾಯಿ ತಿನ್ನಿಸುತ್ತಿದ್ದಾರೆ ಎಂಬ ವಿಡಿಯೋದ ಅಸಲಿ ಕಥೆಯೇನು?

  • January 10, 2022 at 6:55 pm
    Permalink

    10 ರೂಪಾಯಿ ಗಾಗಿ ಮೆಣಸಿನಕಾಯಿ ಕೊಟ್ಟು ವಿಡಿಯೋ ಮಾಡಿಸಿದ್ದು ಒಂದು ವೇಳೆ ಸುಳ್ಳಾಗಿದ್ದರು ಆಮಿಷ ಕೊಟ್ಟು ಇಂತಹ ನೀಚ ಕೆಲಸ ಮಾಡಿಸುವವರು ಈ ಸಮಾಜದಲ್ಲಿ ಧಾರಾಳ ಮಂದಿ ಇದ್ದಾರೆ

    Reply

Leave a Reply

Your email address will not be published.

Verified by MonsterInsights