FACT CHECK | ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೆ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಈ ಮಧ್ಯೆ, ಕೆಲವರು ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡಿರುವ ಮತ್ತು ಕೆಲವರು ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಪ್ರಧಾನಿ ಮೋದಿಯವರ ಬಂಗಾಳ ಭೇಟಿಗೆ ಲಿಂಕ್ ಮಾಡುವ ಮೂಲಕ ಹಂಚಿಕೊಳ್ಳಲಾಗುತ್ತಿದೆ ಮತ್ತು ಇದು ಒಂದು ನಿರ್ದಿಷ್ಟ ಪಕ್ಷದ ಜನರು ರಸ್ತೆಯಲ್ಲಿ ಗದ್ದಲ ಸೃಷ್ಟಿಸಿರುವ ಇತ್ತೀಚಿನ ವೀಡಿಯೊ ಎಂದು ಹೇಳಿಕೊಳ್ಳಲಾಗುತ್ತಿದೆ.

ಆಗಸ್ಟ್ 7 ರಂದು ಫೇಸ್‌ಬುಕ್ ಬಳಕೆದಾರರು ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು ಮತ್ತು “ನಾನು ಏನಾದರೂ ಹೇಳಿದರೆ, ವಿವಾದ ಉಂಟಾಗುತ್ತದೆ ಆದರೆ ದುಷ್ಕರ್ಮಿಗಳ ಕೈಯಲ್ಲಿ #BJP ಧ್ವಜವಿದೆ. ಪಶ್ಚಿಮ ಬಂಗಾಳದಲ್ಲಿ ಈ ಗೂಂಡಾಗಳಿಂದ ಪೊಲೀಸ್ ಭದ್ರತಾ ಪಡೆಗಳು ಸುರಕ್ಷಿತವಾಗಿಲ್ಲ ಮತ್ತು ಅವರು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾರೆ” ಎಂದು ಬರೆದಿದ್ದಾರೆ.

ಇದೇ ರೀತಿಯ ಪೋಸ್ಟ್‌ಗಳನ್ನು ಹಲವು ಸಾಮಾಜಿಕ ಮಾಧ್ಯಮಗಳ  ಬಳಕೆದಾರರು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ,

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 13, 2022 ರಂದು ಯಾವುದೇ ಶೀರ್ಷಿಕೆ ಇಲ್ಲದೆ ಅಪ್‌ಲೋಡ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ.

Google Time Tool ಮತ್ತು ಕೀವರ್ಡ್‌ಗಳ ಸಹಾಯದಿಂದ, ಗೂಗಲ್ ಸರ್ಚ್ ಮಾಡಿದಾಗ, TV9 ಬಾಂಗ್ಲಾದ YouTube ಚಾನೆಲ್‌ನಲ್ಲಿ ಸುದ್ದಿ ಬುಲೆಟಿನ್ ಕಂಡುಬಂದಿತು. ಸೆಪ್ಟೆಂಬರ್ 14, 2022 ರ ಸುದ್ದಿಯ ಪ್ರಕಾರ, “ಬಿಜೆಪಿಯ ನಬನ್ನ ಅಭಿಯಾನವು ರಾಜ್ಯಾದ್ಯಂತ ಹರಡಿದೆ. ಈ ಘಟನೆಯಲ್ಲಿ ಒಟ್ಟು 6 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇವುಗಳ ಆಧಾರದ ಮೇಲೆ, ಪೊಲೀಸರು ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಬರಾಬಜಾರ್ ಪೊಲೀಸ್ ಠಾಣೆ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತರ ಮೇಲೆ ದಾಳಿ ಮಾಡಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆಯಲ್ಲಿ ಒಟ್ಟು 4 ಜನರನ್ನು ಬಂಧಿಸಿದ್ದಾರೆ.” ಎಂದು ವರದಿಯಾಗಿದೆ.

ಮತ್ತಷ್ಟು ಸರ್ಚ್ ಮಾಡಿದಾಗ, ಸೆಪ್ಟೆಂಬರ್ 14, 2022 ರ ವರದಿ ಲಭ್ಯವಾಗಿದ್ದು, ವರದಿಯ ಪ್ರಕಾರ, “ಮಂಗಳವಾರ ಬಿಜೆಪಿಯ ನವಣ್ಣ ಅಭಿಯಾನದ ಸಮಯದಲ್ಲಿ ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ, ದೇಬ್ಜಿತ್ ಎಂಜಿ ರಸ್ತೆಯಲ್ಲಿ ನಿಂತಿರುವುದು ಕಂಡುಬರುತ್ತದೆ. ಅವರು ಹೆಲ್ಮೆಟ್ ಧರಿಸಿದ್ದಾರೆ. ಇದ್ದಕ್ಕಿದ್ದಂತೆ, ಕೆಲವು ಪ್ರತಿಭಟನಾಕಾರರು ಅವರ ಮೇಲೆ ಕೋಲುಗಳು ಮತ್ತು ಕಲ್ಲುಗಳಿಂದ ದಾಳಿ ಮಾಡುತ್ತಾರೆ. ಅವರಲ್ಲಿ ಹಲವರು ಬಿಜೆಪಿ ಧ್ವಜಗಳನ್ನು ಹಿಡಿದಿದ್ದು, ಹಿಂಸಾಚಾರ ಪ್ರಾರಂಭವಾಗುತ್ತದೆ. ವೀಡಿಯೊದಲ್ಲಿ, ದೇಬ್ಜಿತ್ ಹಲ್ಲೆಕೋರರ ಗುಂಪಿನಿಂದ ತಪ್ಪಿಸಿಕೊಳ್ಳಲು ಓಡುತ್ತಿರುವುದನ್ನು ಕಾಣಬಹುದು. ಪ್ರತಿಭಟನಾಕಾರರು ಅವರನ್ನು ಬೆನ್ನಟ್ಟಿ ಹೊಡೆಯುತ್ತಿದ್ದಾರೆ. ಬಿಜೆಪಿ ಧವಜ ಹಿಡಿದ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಯನ್ನು ರಸ್ತೆಗೆ ತಳ್ಳಿ ಹೊಡೆಯಲು ಪ್ರಾರಂಭಿಸುತ್ತಾರೆ. ಇದರ ನಂತರ, ಇಬ್ಬರು ಪೊಲೀಸರು ಹೇಗೋ ದೇಬ್ಜಿತ್ ಅವರನ್ನು ಗುಂಪಿನಿಂದ ರಕ್ಷಿಸುತ್ತಾರೆ”

ವರದಿಗಳ ಪ್ರಕಾರ, ತೃಣಮೂಲ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ವಿರೋಧಿಸಲು ಬಿಜೆಪಿ ನಬನ್ನಾ (ಆಡಳಿತ ಕಟ್ಟಡ) ಗೆ ಮೆರವಣಿಗೆ ನಡೆಸಿತ್ತು. ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಪೊಲೀಸರು ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದರು ಮತ್ತು ಸುವೇಂದು ಅಧಿಕಾರಿಯಂತಹ ಅನೇಕ ಪ್ರಮುಖ ಬಿಜೆಪಿ ನಾಯಕರನ್ನು ಬಂಧಿಸಿದರು. ಸೆಪ್ಟೆಂಬರ್ 13 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು, ಇದಕ್ಕಾಗಿ ಪಕ್ಷವು ಬೆಂಬಲಿಗರಿಗಾಗಿ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿತ್ತು.

ವೈರಲ್ ಆಗಿರುವ ವಿಡಿಯೋವನ್ನು ದೃಢೀಕರಿಸಲು ನಾವು ಕೋಲ್ಕತ್ತಾದ ಹಿರಿಯ ಪತ್ರಕರ್ತ ಜಯದೀಪ್ ಅವರನ್ನು ಸಂಪರ್ಕಿಸಿದ್ದೇವೆ. ಈ ವಿಡಿಯೋ ಹಲವು ವರ್ಷಗಳಷ್ಟು ಹಳೆಯದು ಎಂದು ಅವರು ನಮಗೆ ತಿಳಿಸಿದರು ಎಂದು ವಿಶ್ವಾಸ್‌ ನ್ಯೂಸ್ ವರದಿ ಮಾಡಿದೆ. ಪ್ರಧಾನಿ ಮೋದಿಯವರ ಇತ್ತೀಚಿನ ಭೇಟಿಯ ಸಮಯದಲ್ಲಿ ಅಂತಹ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋ 2022 ರದ್ದಾಗಿದ್ದು, ಈ ವಿಡಿಯೋ ಬಿಜೆಪಿ ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರದರ್ಶನ ನೀಡಿದ ಸಮಯದ್ದಾಗಿದೆ ಮತ್ತು ಅದೇ ಪ್ರದರ್ಶನದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಅದೇ ಘಟನೆಯ ಹಳೆಯ ವೀಡಿಯೊವನ್ನು ಈಗ ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದಲ್ಲಿ ಮತ್ತೆ ಸದ್ದು ಮಾಡಲಿದೆಯೇ ಟಿಕ್ ಟಾಕ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights