ಭಾರತದಲ್ಲಿ 9,304 ಹೊಸ ಕೊರೊನಾ ಕೇಸ್ : 24 ಗಂಟೆಗಳಲ್ಲಿ 260 ಜನ ಬಲಿ..!

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 9304 ಹೊಸ ಕೇಸ್ ದಾಖಲಾಗಿವೆ. ಜೊತೆಗೆ ಮಹಾಮಾರಿ ಕೊರೊನಾಗೆ 260 ಜನ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ 9,304 ಪ್ರಕರಣಗಳು ಮತ್ತು 260 ಸಾವುಗಳು ಸಂಭವಿಸಿವೆ ಎಂದು ದೇಶ ವರದಿ ಮಾಡಿದೆ. ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2.17 ಲಕ್ಷ ತಲುಪಿದೆ.

ರಾಷ್ಟ್ರವ್ಯಾಪಿ ದೃಢೀಕರಿಸಿದ ಕೋವಿಡ್-19 ಪ್ರಕರಣಗಳ ಸಂಖ್ಯೆ 2.17 ಲಕ್ಷಕ್ಕೆ ತಲುಪಿದೆ. ಸಾವಿನ ಸಂಖ್ಯೆ 6,000 ಮೀರಿದೆ. ಕೊರೋನಾದಿಂದ ಈವರೆಗೆ 1,04,106 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ. ಹೊರ ರಾಜ್ಯಗಳಿಂದ ಸೋಂಕಿತರು ಪ್ರಯಾಣ ಬೆಳಸುತ್ತಿರುವುದರಿಂದ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮೇ 1 ರಿಂದ ವಲಸಿಗರಿಗಾಗಿ 256 ಶ್ರಮಿಕ್ ವಿಶೇಷ ರೈಲುಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳನ್ನು ಮುಖ್ಯ ಡೀಫಾಲ್ಟರ್ ಎಂದು ಹೆಸರಿಸಲಾಗಿದೆ. ದಿನಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದ್ದು ಆತಂಕ ಹೆಚ್ಚಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights