‘ಸಿಎಂ ಬದಲಾವಣೆ ಬೇಡ’ ಬಿಎಸ್ವೈಗೆ ಸಿದ್ದಲಿಂಗ ಶ್ರೀಗಳ ಆನೆಬಲ..!

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಸಂಚಲನ ಮೂಡಿಸಿದೆ. ಕಳೆದೆರಡು ದಿನದಿಂದ ಮಠಾಧೀಶರು ಸಿಎಂ ಬದಲಾವಣೆ ಬೇಡ ಎನ್ನುವ ಹೇಳಿಕೆ ನೀಡುತ್ತಿದ್ದು ಇಂದು ಯಡಿಯೂರಪ್ಪ ಅವರ ಬೆನ್ನಿಗೆ ಸಿದ್ದಲಿಂಗಾ ಶ್ರೀಗಳು ನಿಂತಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಸಿದ್ದಲಿಂಗಾ ಶ್ರೀಗಳಿಂದ ಆನೆಬಲ ಬಂದಂತಾಗಿದೆ

ಇಂದು ಸಿಎಂ ಯಡಿಯೂರಪ್ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಮಠಾಧೀಶರು ಸಿಎಂ ಜೊತೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ” ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಸೂಕ್ತ ಅಲ್ಲ. ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪೂರ್ಣ ಅವಧಿಗೆ  ಯಡಿಯೂರಪ್ಪ ಸಿಎಂ ಆಗಿರಬೇಕು. ಇದು ನನ್ನದು ಮಾತ್ರವಲ್ಲ ಎಲ್ಲಾ ಮಠಾಧೀಶರ ಆಶಯ” ಎಂದಿದ್ದಾರೆ.

ಈ ಕೊರೊನಾ ಸಂದರ್ಭದಲ್ಲಿ ಸಿಎಂ ಬದಲಾವಣೆ ಸೂಕ್ತವಲ್ಲ. ಮಳೆಗಾಲ ಶುರುವಾಗಿದೆ. ಮುಂದೆ ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಸೂಕ್ತ ಅಲ್ಲ ಎಂದಿದ್ದಾರೆ.

ಕೆಲ ದಿನಗಳಿಂದ ಮಠಾಧೀಶರು ಸಿಎಂ ಬದಲಾವಣೆ ಬೇಡ ಎನ್ನುವ ಬಹಿರಂಗ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಇಂದು ಸಿಎಂ ಭೇಟಿ ಬಳಿಕ ಸಿದ್ದಲಿಂಗಾ ಸ್ವಾಮೀಗಳೂ ಇದೇ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಬಡಿದಾಟ ಕೇಸರಿ ಬಣದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

 

 

Spread the love

Leave a Reply

Your email address will not be published. Required fields are marked *