ಬಾಂಬೆ ಫ್ರೆಂಡ್ಸ್ ರಿಂದ ಸಿಎಂ ಭೇಟಿ : ವಲಸೆ ಬಿಜೆಪಿಗರಿಗೆ ಸಚಿವ ಸ್ಥಾನ ಕೈತಪ್ಪುವ ಆತಂಕ…?

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಕೆಲವರಿಗೆ ಸಿಎಂ ಆಗುವ ಕನಸು ನನಸಾಗುವ ಖುಷಿಯನ್ನು ಹೆಚ್ಚಿಸಿದೆ ಇನ್ನೂ ಕೆಲವರಿಗೆ ಸಚಿವ ಸ್ಥಾನ ಕೈತಪ್ಪುವ ಆತಂಕ ಸೃಷ್ಟಿ ಮಾಡಿದೆ.

ಹೌದು.. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆಯಾಗುತ್ತಿದ್ದಂತೆ ಜುಲೈ 26ಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕಾವು ಹೆಚ್ಚಾಗಿದೆ. ಒಂದೆಡೆ ಸಿಎಂ ಆಕಾಂಕ್ಷಿಗಳು ಸಿಎಂ ಪಟ್ಟಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಮತ್ತೊಂದು ಕಡೆ ವಲಸೆ ಬಿಜೆಪಿಗರಿಂದ ಮಂತ್ರಿಗಿರಿ ಕೈತಪ್ಪುವ ಆತಂಕ ಎದುರಾಗಿದೆ. ಒಂದು ವೇಳೆ ಸಿಎಂ ಬದಲಾವಣೆಯಾದರೆ ಮುಂದೆ ಮಂತ್ರಿ ಸ್ಥಾನ ಉಳಿಯುತ್ತಾ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಮಂತ್ರಿಪಟ್ಟ ಉಳಿಸಿಕೊಳ್ಳಲು ವಲಸೆ ಬಿಜೆಪಿಗರು ಪ್ರಯತ್ನ ಮಾಡುತ್ತಿದ್ದರು.

ಮುಂದಿನ ಮುಖ್ಯಮಂತ್ರಿಗಳ ಸಂಪುಟದಲ್ಲಿ ತಮಗೆ ಅವಕಾಶ ಸಿಗುತ್ತೋ ಇಲ್ವೋ ಅನ್ನೋದು ಸ್ಪಷ್ಟತೆ ಇಲ್ಲ. ನಂತರ ರಚನೆಯಾಗುವ ಮಂತ್ರಿಮಂಡಲದಲ್ಲಿ ತಮ್ಮನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುತ್ತಾ ಅನ್ನೋ ಅನುಮಾನದಲ್ಲಿ ವಲಸೆ ಬಿಜೆಪಿಗರು ಇದ್ದಾರೆ ಎನ್ನಲಾಗುತ್ತಿದೆ.

ಇಂದು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರಾದ ಶಿವರಾಮ್ ಹೆಬ್ಬಾರ್, ಸೋಮಶೇಖರ್, ಬಿಸಿ ಪಾಟೀಲ್ ಸಿಎಂ ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಯೊಂದಿಗೆ ಮಾತುಕತೆ ಮಾಡಿದ ಬಳಿಕ ಬಾಂಬೆ ಫ್ರೆಂಡ್ಸ್ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಮಾತನಾಡುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿದ್ದ ಬಾಂಬೆ ಫ್ರೆಂಡ್ಸ್ ಗೆ,  ಒಂದು ವೇಳೆ ಸಿಎಂ ಬದಲಾವಣೆ ಖಚಿತವಾದರೆ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಮಾತ್ರ ಅಷ್ಟು ಸುಲಭವಲ್ಲ.

 

Spread the love

Leave a Reply

Your email address will not be published. Required fields are marked *