ಪವರ್ ಸ್ಟಾರ್ ನ ಪವರ್ ಫುಲ್ ವರ್ಕೌಟ್ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ!

ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ ,ನಿರ್ಮಾಪಕರಾಗಿಯೂ ಪ್ರಸ್ತುತರು. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಸದ್ಯ ಕೊರನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಅವರ ವರ್ಕೌಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅವರ ಅಭಿಮಾನಿಗಳು ವರ್ಕೌಟ್ ಗೆ ಫುಲ್ ಫಿದಾ ಆಗಿದ್ದಾರೆ.

ಓವರ್ ಹೆಡ್ ಬರ್ಪಿ, ಸೂಪರ್ ಮ್ಯಾನ್ ಬರ್ಪಿ, ಜಂಪಿಂಗ್ ಟೋ ಟಚಿಂಗ್ ಬರ್ಪಿಯ ಕರಾತಮತ್ತುಗಳನ್ನು ತೋರಿಸುವ 22 ಸೆಕೆಂಡುಗಳ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ (ಇನ್‌ಸ್ಟಾಗ್ರಾಂ) ಪುನೀತ್  ಹಂಚಿಕೊಂಡಿದ್ದಾರೆ.

ಅಪ್ಪು, ಅಭಿ, ವೀರ ಕನ್ನಡಿಗ,ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು, ಮಿಲನ, ಬಿಂದಾಸ್, ವಂಶಿ, ರಾಜ್ ದಿ ಶೀ ಮ್ಯಾನ್, ರಾಮ್, ಪೃಥ್ವಿ, ಜಾಕಿ, ಹುಡುಗರು, ಪರಮಾತ್ಮ, ಅಣ್ಣಾಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ, ಪವರ್, ರಣವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿಪುತ್ರ, ನಟಸಾರ್ವಭೌಮ ದಂತಹ ಟಾಪ್ ಸಿನಿಮಾಗಳನ್ನು ಪರಿಚಯಿಸಿದ ಪವರ್ ಸ್ಟಾರ್ ನ ಈ ವೀಡಿಯೋದಲ್ಲಿ ಎರಡು ಕೈ ಮತ್ತು ಕಾಲುಗಳನ್ನು ಒಂದೇ ಸಲಕ್ಕೆ ಊರಿ ಸೂಪರ್ ಮ್ಯಾನ್‌ ರೀತಿ ಜಂಪ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಮುದ ನೀಡಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights