Fact check: ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸುಳ್ಳು ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ

ಮುಸ್ಲಿಂ ವ್ಯಕ್ತಿಯೊಬ್ಬರು ತಂದೂರಿ ರೊಟ್ಟಿಗಳನ್ನು ಒಲೆಯಲ್ಲಿ ಬೇಯಿಸುವ ಮೊದಲು ತಂದೂರಿ ರೊಟ್ಟಿಗಳಿಗೆ ಉಗುಳುವ ವೀಡಿಯೊವೊಂದು ಹರಿದಾಡುತ್ತಿದೆ. ಫೆಬ್ರವರಿ 20, 2021 ರಂದು ಮೀರತ್ ಪೊಲೀಸರು ನೌಶಾದ್ ಅಲಿಯಾಸ್ ಸುಹೇಲ್‌ನನ್ನು ಬಂಧಿಸಿದರು. ಸುದ್ದಿ ವರದಿಗಳ ಪ್ರಕಾರ, ಫೆಬ್ರವರಿ 16 ರಂದು ಮೀರತ್‌ನ ಅರೋಮಾ ಗಾರ್ಡನ್‌ನಲ್ಲಿ ನಡೆದ ಮದುವೆಯ ಆರತಕ್ಷತೆಯಲ್ಲಿ ತಂದೂರಿ ರೋಟಿಗಳ ಮೇಲೆ ನೌಶಾದ್ ಉಗುಳುವ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಈ ಘಟನೆ (ಇಲ್ಲಿ) ನಡೆದಿರುವುದು ಸತ್ಯವಾಗಿದೆ. ಆದರೆ ಈ ವಿಡಿಯೋ ವೈರಲ್ ಆದ ನಂತರ ಇನ್ನು ಕೆಲವು ನಕಲಿ ವಿಡಿಯೋಗಳನ್ನು ಷೇರ್ ಮಾಡಿ ಮುಸ್ಲಿಮರು ಆರೋಪಿಗಳು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಮುಖ್ಯವಾಗಿ ಕೆಲವು ಬಲಪಂಥೀಯ ಫೇಸ್‌ಬುಕ್ ಗಳಲ್ಲಿ ಅದೇ ತರಹದ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅಂತಹ  ಘಟನೆಗಳಿಗೆ ಸಂಬಂಧಿಸಿದ ಆರೋಪಿಗಳು ಮುಸ್ಲಿಮರು ಎಂದು ಪ್ರತಿಪಾದಿಸಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:

ವಿಡಿಯೋ 1: ಹಾಲಿಗೆ ಕಲಬೆರಕೆ ಮತ್ತು ಕೊಳಚೆ ನೀರನ್ನು ಮಿಶ್ರಣ ಮಾಡುತ್ತಿರುವ ವಿಡಿಯೋ.

ವಿವರಣೆ: 2020 ಕೋವಿಡ್‌ನ ದುರಿತ ಸಂದರ್ಭದಲ್ಲಿ  ಹೆಚ್ಚೆಚ್ಚು ವೈರಲ್ ಆದ ವಿಡಿಯೋಗಳು ಈಗ ಮತ್ತೆ ಹರಿದಾಡುತ್ತಿರುವುದನ್ನು ನಾವು ಕಾಣಬಹದಾಗಿದೆ. ಈ ವಿಡಿಯೋದೊಂದಿಗೆ ಹಾಲಿಗೆ ಕೊಳಕು ನೀರನ್ನು ಬೆರೆಸಿ  ಕಲಬೆರಕೆ ಮಾಡುತ್ತಿರುವ ವ್ಯಕ್ತಿಯನ್ನು ತೋರಿಸುವ ವೀಡಿಯೊವೊಂದು ಹಿಂದಿ ಶೀರ್ಷಿಕೆಯೊಂದಿಗೆ ವೈರಲ್ ಆಗಿದೆ. ಇದು ‘ಅನ್ಯ ಧರ್ಮೀಯರಿಗೆ ತಾಜಾ ಹಾಲು’ ಎಂದು ಹೇಳುವ ಸಾಲುಗಳಾಗಿವೆ. ಮತ್ತೆ ಮುಂದುವರೆದು ಏಕರೂಪ ಶಿಕ್ಷಣ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರದಿದ್ದರೆ ಮತ್ತು ಒಳನುಸುಳುವಿಕೆ, ಮತಾಂತರ ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಶೀಘ್ರದಲ್ಲೇ ಜಾರಿಗೊಳಿಸದಿದ್ದರೆ, 2050 ರ ವೇಳೆಗೆ ಸಂವಿಧಾನ ಅಥವಾ ಭಾರತೀಯ ಸಂಸ್ಕೃತಿ ಉಳಿಯುವುದಿಲ್ಲ ಎಂದು ಹೆಳಲಾಗಿದೆ.

ಫ್ಯಾಕ್ಟ್ ಚೆಕ್: ವೈರಲ್ ವಿಡಿಯೋದ ನೈಜತೆಯನ್ನು ಹುಡುಕಿದಾಗ ಈ ವೀಡಿಯೋದ ಸತ್ಯಾಂಶ ಹೊರಬಂದಿದ್ದು  ಘಟನೆಯು ತೆಲಂಗಾಣದ ಹೈದರಾಬಾದ್‌ನಲ್ಲಿರುವ ಡೈರಿ ಫಾರ್ಮ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನ ದಬೀರ್‌ಪುರ ಪೊಲೀಸರ ಹೇಳಿರುವಂತೆ, ವೈರಲ್ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ ಡೈರಿ ಫಾರ್ಮ್‌ನಲ್ಲಿ ಉದ್ಯೋಗಿಯಾಗಿರುವ ರಾಜು ಎಂದು ಹೇಳಿದ್ದಾರೆ. ಅಂದರೆ ಈ ಕುಕೃತ್ಯ ಎಸಗಿದವರು ಮುಸ್ಲಿಂ ವ್ಯಕ್ತಿಯಲ್ಲ. ಈ ಡೈರಿಯು ಮೊಹಮ್ಮದ್ ಸೊಹೈಲ್ ಘೌಸ್ ಎಂಬುವವರ ಒಡೆತನದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೊಹೈಲ್ ಘೌಸ್ ಪೊಲೀಸರು ಬಂಧಿಸಿದ್ದು,  ರಾಜುಗಾಗಿ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.

ವೀಡಿಯೋ 2: ಮಹಿಳೆಯೊಬ್ಬರು ಪಾತ್ರೆಯಲ್ಲಿ ಮೂತ್ರವನ್ನು ವಿಸರ್ಜಿಸುವ ವೈರಲ್ ವಿಡಿಯೋ

ಮಹಿಳೆ ನೀರಿನಲ್ಲಿ ಮೂತ್ರವನ್ನು ಬೆರೆಸುವ ವೈರಲ್ ವೀಡಿಯೋದಲ್ಲಿ ಕಾಣುತ್ತಿದ್ದು ಈ ಮಹಿಳೆಯನ್ನು  ಮುಸ್ಲಿಂ ಎಂದು  ಹೇಳಿಕೆಯ ಸಾಲುಗಳೊಂದಿಗೆ ಹಂಚಿಕೊಳ್ಳಲಾಗಿದೆ, ಮೂತ್ರವನ್ನು ಬೆರೆಸುವ ಮೂಲಕ ನೀರು ತುಂಬಿದ ಪಾತ್ರಯನ್ನು ಕಲುಷಿತಗೊಳಿಸುವ ಮನೆಗೆಲಸದ ಮಹಿಳೆಯನ್ನು ಮುಸ್ಲಿಮ್ ಎಂದು ಹೇಳಿದ್ದಾರೆ. ಭೋಪಾಲ್‌ನ ಮುಖೇಶ್ ಸೂರಿ ಎಂಬಾತ ಮಹಿಳೆ ಹಸೀನಾಳನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದ. ಹಸೀನಾ ತನ್ನ ಇಸ್ಲಾಮಿಕ್ ಸಂಪ್ರದಾಯದಂತೆ ವರ್ತಿಸಲು ಪ್ರಾರಂಭಿಸಿದಳು. ಅವರು ತಮ್ಮ ಆಹಾರದಲ್ಲಿ ಲಾಲಾರಸ ಮತ್ತು ಮೂತ್ರವನ್ನು ಬೆರೆಸಿದರು. ಅವರಿಗೆ ಚಿಕಿತ್ಸೆ ಕೊಡಿಸಬೇಕು ಗೆಳೆಯರೇ’ ಎಂದು ಹೇಳಿದ್ದಾರೆ.

ಫ್ಯಾಕ್ಟ್ ಚೆಕ್: 

ಈ ವಿಡಿಯೋ 2011ರದ್ದು ಮತ್ತು ಅದರಲ್ಲಿ ಕಾಣಿಸಿಕೊಂಡಿರುವ ಮಹಿಳೆ ಮುಸ್ಲಿಂ ಅಲ್ಲ ಎಂದು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಪತ್ತೆ ಆಗಿದೆ. ಹಳೆಯ ತುಣುಕನ್ನು ಈಗ ನಕಲಿ ಕೋಮು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ವಾಸ್ತವ ಘಟನೆ ಎಂದರೆ ವಿಡಿಯೋ 2011 ರದ್ದು ಮತ್ತು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ – ಆಶಾ ಕೌಶಲ್ – ತನ್ನ ಉದ್ಯೋಗದಾತ ಮುಖೇಶ್ ಸೂರಿ ಅವರ ಆಹಾರವನ್ನು ಮೂತ್ರದಿಂದ ಕಲುಷಿತಗೊಳಿಸಿದ್ದಾರೆ ಎಂಬ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. 2011 ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕೌಶಲ್ ವಿರುದ್ಧ ‘ಐಪಿಸಿಯ ಸೆಕ್ಷನ್ 270 ರ ಅಡಿಯಲ್ಲಿ, ಜೀವಕ್ಕೆ ಬೆದರಿಕೆಯನ್ನುಂಟುಮಾಡುವ ಮಾರಣಾಂತಿಕ ಕೃತ್ಯ, ಜಾಮೀನು ರಹಿತ ಅಪರಾಧ’ ಎಂದು ಪ್ರಕರಣ ದಾಖಲಿಸಲಾಗಿದೆ. ಇದು ನಿಜವಾಗಿಯೂ ನಡೆದಿರುವ ಎಂದು ಸಾಭೀತಾಗಿದೆ. ಆದರೆ ಆಕೆ ಮುಸ್ಲಿಂ ಮಹಿಳೆಯಲ್ಲ.

 

ಬಿರಿಯಾನಿಗೆ ಮಾತ್ರೆ ಬೆರೆಸುವ ವೈರಲ್ ಫೋಟೋ 

ತಲೆಗೆ ಟೊಪ್ಪಿ ಹಾಕಿಕೊಂಡು ಬಿರಿಯಾನಿ ಬಡಿಸುತ್ತಿರುವ ಮುಸ್ಲಿಂ ವ್ಯಕ್ತಿಯಂತೆ ಕಾಣುವ ಫೋಟೋದೊಂದಿಗೆ ಮಾತ್ರೆಗಳಿರುವ  ಫೋಟೋವನ್ನು ಕೊಲ್ಯಾಜ್ ಮಾಡಿರುವ ಫೋಟೋ ಸಾಕಷ್ಟು ವೈರಲ್ ಆಗಿದ್ದು ಇದು ಮುಸ್ಲಿಂ ವ್ಯಕ್ತಿಗಳು ಮಾಡುತ್ತಿರುವ ಕೆಟ್ಟ ಕೃತ್ಯ ಕೊಯಮತ್ತೂರಿನ ರೆಸ್ಟೋರೆಂಟ್ ಅಲ್ಲಿ ನಡೆಯುತ್ತಿದೆ ಎಂದು ಬಿಂಬಿಸಿವ ಹೆಳಿಕೆಯೊಂದಿಗೆ ಪೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋದ ನೈಜತೆಯನ್ನು ನಾವು ಪರಿಶೀಲಿಸಿದಾಗ ವೈರಲ್ ಫೋಟೋ ದ ಅಸಲಿ ಬಣ್ಣ ಬಯಲಾಗಿದೆ.

ಫ್ಯಾಕ್ಟ್ ಚೆಕ್:

ಈ ಫೋಟೋದ ರಿವರ್ಸ ಸರ್ಚ್ ಮಾಡಿದಾಗ ತಿಳಿದದ್ದು ಏನೆಂದರೆ ವೈರಲ್ ಆಗುತ್ತಿರುವ ಫೋಟೋ ಮತ್ತು ಸುದ್ದಿ ನಕಲಿ ಎಂದು ತಿಳಿದು ಬಂದಿದೆ. ಕೊಯಮತ್ತೂರು ಪೊಲೀಸರು ಕಳೆದ ವರ್ಷ ಮಾರ್ಚ್‌ನಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ನಕಲಿ ಸುದ್ದಿ ಎಂದು ಕರೆದಿದ್ದರು ಮತ್ತು ಅದನ್ನು ಮೂಲತಃ ಪೋಸ್ಟ್ ಮಾಡಿದ  ವ್ಯಕ್ತಿಯನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ವೀಡಿಯೋ ಮುಸ್ಲಿಂ ಹಬ್ಬದಂದು ಬೀದಿ ಬದಿಯ ನಿರಾಶ್ರಿತರಿಗಾಗಿ ತಯಾರಿಸಿ ಅವರ ಹಸಿವನ್ನು ನೀಗಿಸುವ ಸಲುವಾಗಿ ಮಾಡಿದ ಆಹಾರವಾಗಿದ್ದು ಯಾರೋ ಕಿಡಿಗೇಡಿಗಳು ಅದಕ್ಕೆ ರೂಪಿಸಿರುವ ತಂಬ್ ನೇಲ್ ನಲ್ಲಿ ಗೊಂದಲ ಸೃಷ್ಟಿಸುವ ಫೋಟೋಗಳನ್ನು ಕೊಲ್ಯಾಜ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಪ್ರತಿಪಾದಿಸಲಾಗಿರುವ ವೀಡಿಯೋ ತಪ್ಪಾಗಿದೆ.

ಪಿಜ್ಜಾಗೆ ಉಗುಳುವ ವೈರಲ್ ಫೋಟೋ

ಯುಎಸ್‌ನ ಡೆಟ್ರಾಯಿಟ್‌ನಿಂದ, ಪಿಜ್ಜಾವನ್ನು ತಯಾರಿಸುವಾಗ ವ್ಯಕ್ತಿಯೊಬ್ಬರು ಅದರ ಮೇಲೆ ಉಗುಳುವುದನ್ನು ತೋರಿಸುವ ವೀಡಿಯೊವನ್ನು ವೈರಲ್ ಮಾಡಿ ಮತ್ತು ಕೋಮು  ಹೇಳಿಕೆಯೊಂದಿಗೆ  ಹಂಚಿಕೊಳ್ಳಲಾಗಿದೆ. ಅಲ್ಜೀರಿಯಾದ ಮುಸ್ಲಿಂ ನಿರಾಶ್ರಿತ ಎಂದು ಹೇಳುತ್ತದೆ ಮತ್ತು ಲಂಡನ್ ರೆಸ್ಟೋರೆಂಟ್‌ನಲ್ಲಿ ಆಹಾರವನ್ನು ಕಲುಷಿತಗೊಳಿಸುತ್ತಿದ್ದನು ಎಂದು ಶೇರ್ ಮಾಡಲಾಗಿದೆ.

ಫ್ಯಾಕ್ಟ್‌ಚೆಕ್

ಇದನ್ನು ಫ್ಯಾಕ್ಟ್ ಚೆಕ್ ಮೂಲಕ ಹುಡುಕಿದಾಗ , ಡೆಟ್ರಾಯಿಟ್, US ಗೆ ಟ್ರ್ಯಾಕ್ ಮಾಡಿದಾಗ  ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ – ಜೈಲೋನ್ ಕೆರ್ಲಿಯನ್ನು ಅಲ್ಲಿಯ ರೆಸ್ಟೋರೆಂಟ್ ಮಾಲಿಕರು ವಜಾಗೊಳಿಸಿದೆ ಮತ್ತು ಇದನ್ನು ‘ಒಂದು  ಆಹಾರ ಕಾನೂನು ಉಲ್ಲಂಘನೆಗಳ  ದುಷ್ಕೃತ್ಯ’ ಎಂದು ತಿಳಿಸಿದೆ. ಘಟನೆಯ ನಂತರ ಪ್ರಕಟವಾದ ಯಾವುದೇ ಸುದ್ದಿ ವರದಿಗಳಲ್ಲಿ ಆರೋಪಿಯ ಧರ್ಮವನ್ನು ಉಲ್ಲೇಖಿಸಲಾಗಿಲ್ಲ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಮತ್ತು ಪೋಸ್ಟ್ ಗಳಲ್ಲಿ ಪ್ರತಿಪಾದಿಸಲಾಗುತ್ತಿರುವ ಸುದ್ದಿಯನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ರೋಟಿಗೆ ಉಗುಳಿದ್ದು ಮಾತ್ರ ಮುಸ್ಲಿಂ ವ್ಯಕ್ತಿಯಾಗಿದ್ದಾನೆ. ಉಳಿದ ಎಲ್ಲರೂ ಮುಸ್ಲಿಂ ವ್ಯಕ್ತಿಯಗಳು ಅಲ್ಲ, ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: Fact check: ಉತ್ತರ ಪ್ರದೇಶದ ಈ ವೀಡಿಯೋ ಕಾಂಗ್ರೆಸ್ ಕಾರ್ಯಕ್ರಮದಿಂದ ಪ್ರೇರಿತಗೊಂಡು ನಡೆದ ಘಟನೆಯಲ್ಲ..!

 

Spread the love

Leave a Reply

Your email address will not be published. Required fields are marked *