ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ದುರಂತ : FSL ತಂಡದಿಂದ ಪರಿಶೀಲನೆ..!

ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ದುರಂತ ಘಟನೆಗೆ ಕಾರಣವೆಣು ಎನ್ನುವ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇದಕ್ಕಾಗಿ FSL ತಂಡ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ.

ನಗರದ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಮೊನ್ನೆಯಷ್ಟೇ ಅಮೆರಿಕದಿಂದ ವಾಪಸ್ಸಾಗಿದ್ದ ತಾಯಿ, ಮಗಳು ಸುಟ್ಟು ಕರಕಲಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಫ್ಲ್ಯಾಟ್​ ನಂ. 210ರಲ್ಲಿ ವಾಸವಿದ್ದ ಲಕ್ಷ್ಮೀ ದೇವಿ(82) ಮತ್ತು ಅವರ ಪುತ್ರಿ ಭಾಗ್ಯ ರೇಖಾ(59) ಸಜೀವ ದಹನವಾಗಿದ್ದಾರೆ. ಅಗ್ನಿ ಅವಘಡದಲ್ಲಿ 6 ಜನರಿಗೆ ಗಾಯಗಳಾಗಿದ್ದು, ಇವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಬೆಂಕಿಯ ಮೊದಲ ಕಿಡಿಗೆ ಕಾರಣ ಏನು ಎಂಬುದು  ನಿಗೂಢವಾಗಿಯೇ ಉಳಿದಿದೆ. ಮೊದಲು ಸಿಲಿಂಡರ್ ಬ್ಲಾಸ್ಟ್ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಗ್ಯಾಸ್ ಪೈಪ್ ಲೈನ್​ನಿಂದಲೂ ಬೆಂಕಿ ಹೊತ್ತಿಕೊಂಡಿಲ್ಲ. ಮನೆ ಬಾಗಿಲ ಕಡೆಯಿಂದ ಬೆಂಕಿ ಹೊತ್ತಿರುವ ಬಗ್ಗೆ ಅನುಮಾನವಿದೆ.

ಮನೆಯಲ್ಲಿ ಯುಪಿಎಸ್ ಕೂಡ ಇತ್ತು. ಬೆಂಕಿಗೆ ಯುಪಿಎಸ್ ಬ್ಯಾಟರಿಗಳು ಕಾರಣನಾ, ದೇವರಿಗೆ ಹಚ್ಚಿದ ದೀಪಗಳು ಕಾರಣನಾ, ಟಿವಿ, ಫ್ರಿಡ್ಜ್ ಎಲ್ಲವೂ ಆನ್ ಅಗಿತ್ತು. ಅದರಿಂದ ಏನಾದರೂ ಬೆಂಕಿ ತಗುಲಿದ್ಯಾ? ಎಂಬ ಅನುಮಾನುಗಳು ಹುಟ್ಟಿವೆ.

ಈ ಘಟನೆಗೆ ಕಾರಣ ಪತ್ತೆ ಹಚ್ಚಲು ಪರಿಶೀಲನೆ ಮಾಡಲಾಗುತ್ತಿದೆ. 5 ಜನ ಇರುವ FSL ತಂಡ ಸ್ಥಳಕ್ಕೆ ಆಗಮಿಸಿ ಪ್ರತೀ ವಸ್ತುಗಳ ಪರಿಶೀಲನೆ ಮಾಡುತ್ತಿದ್ಧಾರೆ. ಸುಟ್ಟ ವಸ್ತುಗಳ ಸ್ಯಾಂಪಲ್ ಕಲೆಕ್ಟ್ ಮಾಡಲಾಗುತ್ತಿದೆ. ಈ ತಂಡಗಳ ಪರಿಶೀಲನೆ ಬಳಿಕವಷ್ಟೇ ಅಗ್ನಿ ಅವಘಟನೆ ಕಾರಣ ತಿಳಿದುಬರಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights