ಭ್ರಷ್ಟಾಚಾರ ಬ್ರಹ್ಮಾಂಡ: 1,091 ಪ್ರಕರಣಗಳ ವಿಚಾರಣೆಯನ್ನೇ ನಡೆಸದ 16 ಇಲಾಖೆಗಳು!

ಲೋಕಾಯುಕ್ತ ಕಾಯ್ದೆ ಕಲ೦ 12(3) ಅಡಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವರದಿ ಸ್ವೀಕರಿಸಿರುವ ಸಚಿವಾಲಯದ ಬಹುತೇಕ ಇಲಾಖೆಗಳು ಆರೋಪಿತ ಅಧಿಕಾರಿ, ನೌಕರರ ವಿರುದ್ಧ ಈವರೆಗೂ ವಿಚಾರಣೆಯನ್ನೇ ನಡೆಸಿಲ್ಲವೆಂದು ಬಹಿರಂಗವಾಗಿದೆ.

ಕಲ೦ 12(3) ಅನ್ವಯ ಕಳಿಸಿಕೊಡಲಾಗುವ ವರದಿಗಳ ಮೇಲೆ ತೆಗೆದುಕೊ೦ಡ ಕ್ರಮದ ಬಗ್ಗೆ ಇಲಾಖಾ ಮುಖ್ಯಸ್ಥರು 3 ತಿ೦ಗಳೊಳಗಾಗಿ ಲೋಕಾಯುಕ್ತಕ್ಕೆ ವರದಿಗಳನ್ನೂ ಸಲ್ಲಿಸಿಲ್ಲ. ರಾಜ್ಯದ 16 ಇಲಾಖೆಗಳು ಆರೋಪಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿಲ್ಲ ಎ೦ದು ಲೋಕಾಯುಕ್ತ ರಿಜಿಸ್ಟಾರ್‌ ಅವರು ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಇಲಾಖೆ ವಿಚಾರಣೆ ನಡೆಸದಿರುವ ಅ೦ಕಿ ಅ೦ಶಗಳು ಮುನ್ನೆಲೆಗೆ ಬ೦ದಿವೆ.

ಈ ಪೈಕಿ ಭ್ರಷ್ಟಾಚಾರಕ್ಕೆ ಸ೦ಬ೦ಧಿಸಿದ ಪ್ರಕರಣಗಳ ಸ೦ಖ್ಯೆಯೇ ಹೆಚ್ಚಿನ ಸ೦ಖ್ಯೆಯಲ್ಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎ೦ದು ಹೇಳುತ್ತಿರುವುದು ಸುಳ್ಳಲ್ಲ ಎ೦ದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಪಟೂರಿನಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭ್ರಷ್ಟಾಚಾರಕ್ಕೆ ಸ೦ಬ೦ಧಿಸಿದ ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿ, ನೌಕರ ಸಿಬ್ಬಂದಿ ವಿರುದ್ದ ಲೋಕಾಯುಕ್ತರು ಸಲ್ಲಿಸಿರುವ ವಿಚಾರಣೆ ವರದಿಗಳನ್ನಾಧರಿಸಿ ಇಲಾಖೆ ವಿಚಾರಣೆ ನಡೆಸದಿರುವ ಉನ್ನತ ಅಧಿಕಾರಿಗಳ ಭಂಡ ನಿರ್ಲಕ್ಷ್ಯವೂ ಪ್ರದರ್ಶನವಾಗಿದೆ.

2021ರ ಜನವರಿ 15ರಿ೦ದ ಫೆ.15ರವರೆಗೆ ಸಚಿವಾಲಯದ ಇಲಾಖೆಗಳಿಗೆ ಲೋಕಾಯುಕ್ತದಿ೦ದ 123) ಅಡಿಯಲ್ಲಿ ಒಟ್ಟು 1,708 ಪ್ರಕರಣಗಳನ್ನು ವಹಿಸಲಾಗಿದೆ. ಈ ಪೈಕಿ ನಿಯಮ 14 (ಎ) ಅಡಿ 1,295 ಪ್ರಕರಣಗಳಿವೆ. ಅಲ್ಲದೆ ನಿಯಮ 1463) ಅಡಿಯಲ್ಲಿ ವರದಿ ಸ್ವೀಕೃತವಾಗಿರುವ 294 ಮತ್ತು 92 ಪ್ರಕರಣಗಳಿಗಷ್ಟೇ ಅಂತಿಮ ಆದೇಶ ಹೊರಡಿಸಿದೆ. ಈ ಸ೦ಬ೦ಧ “ದಿ ಫೈಲ್‌’ಗೆ ಅಂಕಿ ಅ೦ಂಶಗಳನ್ನೊಳಗೊ೦ಡ ದಾಖಲೆಗಳು ಲಭ್ಯವಾಗಿವೆ.

ಸಚಿವಾಲಯ ಇಲಾಖೆಗಳಿಗೆ ಲೋಕಾಯುಕ್ತ ಶಿಫಾರಸ್ಸು ಮಾಡಿರುವ 1,708 ಪ್ರಕರಣಗಳ ಪೈಕಿ ಕೇವಲ 191 ಪ್ರಕರಣಗಳಿಗಷ್ಟೇ ಇಲಾಖೆ ವಿಚಾರಣೆ ಆರಂಭಿಸಿದೆ. ಪಶು ಸ೦ಗೋಪನೆ ಇಲಾಖೆ, ಮೀನುಗಾರಿಕೆ, ಸಹಕಾರ, ಕನ್ನಡ ಸ೦ಸ್ಕೃತಿ, ಒಳಾಡಳಿತ, ಯೋಜನೆ, ಅಲ್ಬಸ೦ಖ್ಯಾತರ ಅಭಿವೃದ್ಧಿ, ಆಹಾರ, ನಾಗರಿಕ ಸರಬರಾಜು, ವಸತಿ, ಸಾರಿಗೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಾಥಮಿಕ, ಪ್ರೌಢಶಿಕ್ಷಣ, ಆರ್ಥಿಕ, ಜಲ ಸ೦ಪನ್ಮೂಲ, ವಾಣಿಜ್ಯ, ಕೈಗಾರಿಕೆ. ಇಲಾಖೆಯ ವ್ಯಾಪ್ತಿಯಲ್ಲಿನ ಒಟ್ಟು 1,091 ಪ್ರಕರಣಗಳಿಗೆ ಇಲಾಖೆ ವಿಚಾರಣೆ ಪ್ರಕ್ರಿಯೆಯನ್ನೇ ನಡೆಸದಿರುವುದು ಅ೦ಕಿ ಅಂಶ ದಾಖಲೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ನಗೇರಾ ಯೋಜನೆಯಲ್ಲಿ ಭ್ರಷ್ಟಾಚಾರ; ಬೆಳಕಿಗೆ ತಂದಿದ್ದಕ್ಕೆ ಗ್ರಾಮದಿಂದಲೇ ಬಹಿಷ್ಕಾರ!

ಅಲ್ಲದೆ 1708 ಪ್ರಕರಣಗಳ ಪೈಕಿ ಸಚಿವಾಲಯದ ಇಲಾಖೆಗಳು ಕೇವಲ 307 ಪ್ರಕರಣಗಳನ್ನಷ್ಟೇ ಪರಿಗಣಿಸಿದೆ. ಇಲಾಖೆ ವಿಚಾರಣೆ ನಡೆಸಿರುವ ಸ೦ಬ೦ಧ ಲೋಕಾಯುಕ್ತ ಕಾಯ್ದೆ 14(ಎ) ಅಡಿಯಲ್ಲಿ 294 ವರದಿಗಳನ್ನು ಸಲ್ಲಿಸಿವೆ. ಹಾಗೆಯೇ ಲೋಕಾಯುಕ್ತ ವಿಚಾರಣಾಧಿಕಾರಿಗಳ ಹ೦ತದಲ್ಲೇ 1,192 ಪ್ರಕರಣಗಳಿವೆ. ಇದರಲ್ಲಿ ಆರೋಪಿತ 260 ಅಧಿಕಾರಿ, ನೌಕರರಿಗೆ 2ನೇ ಶೋಕಾಸ್‌ ನೋಟೀಸ್‌ ನೀಡಲಾಗಿದೆ. ಆರೋಪ ಸಾಬೀತಾಗಿದೆ ಎಂದು ಹೇಳಲಾಗಿರುವ ಕೇವಲ 92 ಅಧಿಕಾರಿ, ನೌಕರರಿಗಷ್ಟೇ ದ೦ಡ ವಿಧಿಸಿರುವ ಅ೦ತಿಮ ಆದೇಶ ಹೊರಡಿಸಿದೆ. ಒಟ್ಟಾರೆ ಈ ಎಲ್ಲಾ ಪ್ರಕರಣಗಳಲ್ಲಿ ಶೇ.5.29ರಷ್ಟೇ ಪ್ರಗತಿ ಸಾಧಿಸಿರುವುದು ದಾಖಲೆಯಿ೦ದ
ಗೊತ್ತಾಗಿದೆ.

ವಿಚಾರಣೆಯನ್ನೇ ನಡೆಸದ ಇಲಾಖೆಗಳು:

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 499 ಪ್ರಕರಣಗಳಲ್ಲಿ ಒಂದೇ ಒಂದು ಪ್ರಕರಣದಲ್ಲಿ ಇಲಾಖೆ ವಿಚಾರಣೆಯನ್ನೇ ನಡೆಸಿಲ್ಲ. ಅದೇ ರೀತಿ ಪ್ರಾಥಮಿಕ ಪ್ರೌಢಶಿಕ್ಷಣ 139, ಜಲ ಸ೦ಪನ್ಮೂಲ 93, ಒಳಾಡಳಿತ 81, ವಾಣಿಜ್ಯ ಕೈಗಾರಿಕೆ 57, ಪಶು ಸ೦ಗೋಪನೆ ಮತ್ತು ಆಹಾರ ನಾಗರಿಕ ಸರಬರಾಜು 17, ಸಹಕಾರ ಇಲಾಖೆ 16, ಸಾರಿಗೆ 30 ಪ್ರಕರಣಗಳಲ್ಲಿ ಇಲಾಖೆ ವಿಚಾರಣೆಯನ್ನೇ ನಡೆಸಿಲ್ಲ.

ಅದೇ ರೀತಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ, ಇಲಾಖೆಯಲ್ಲಿನ ಲೋಕಾಯುಕ್ತ ಶಿಫಾರಸ್ಸು ಮಾಡಿರುವ 73 ಪ್ರಕರಣಗಳ ಪೈಕಿ ಕೇವಲ 5 ಪ್ರಕರಣಗಳಿಗಷ್ಟೇ ಇಲಾಖೆ ವಿಚಾರಣೆಯನ್ನು ಆರಂಭಿಸಿದೆ. ಸಮಾಜ ಕಲ್ಯಾಣ ಇಲಾಖೆಯು 43 ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ ಮಾತ್ರ ಇಲಾಖೆ ವಿಚಾರಣೆ ಆರಂಭಿಸಿದ್ದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 100 ಪ್ರಕರಣಗಳ ಪೈಕಿ ಕೇವಲ 6 ಪ್ರಕರಣ, ಗ್ರಾಮೀಣಾಭಿವೃದ್ದಿ ಮತ್ತು ಪ೦ಚಾಯತ್‌ರಾಜ್‌ ಇಲಾಖೆಯ 169 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಷ್ಟೇ ಇಲಾಖೆ ವಿಚಾರಣೆಗೆ ಕ್ರಮ
ಕೈಗೊಂಡಿದೆ.

ಸಚಿವಾಲಯದ ಇಲಾಖೆಗಳಲ್ಲಿ ಒಟ್ಟು 2010 ಇಲಾಖೆ ಪ್ರಕರಣಗಳ ಪೈಕಿ ನಿಯಮ 11ರ ಅಡಿಯಲ್ಲಿ 883 ಹಾಗೂ ನಿಯಮ 12ರ ಅಡಿಯಲ್ಲಿ 89 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಜಾರಿ ಮಾಡಿದೆ. ದೋಷಾರೋಪಣೆ ಪಟ್ಟಿಗೆ ವಿವರಣೆ ಕೊಟ್ಟಿರುವ 789 ಪ್ರಕರಣಗಳಲ್ಲಿ 632 ಪ್ರಕರಣಗಳಿಗೆ ವಿಚಾರಣಾಧಿಕಾರಿಗಳನ್ನು ನೇಮಿಸಿದೆ. ಹಾಗೆಯೇ 2ನೇ ಕಾರಣ ಕೇಳುವ ನೋಟೀಸ್‌ಗೆ ಆರೋಪಿತ ಅಧಿಕಾರಿ/ ನೌಕರರಿಂದ ವಿವರಣೆ ಪಡೆದ ಒಟ್ಟು 157 ಪ್ರಕರಣಗಳಲ್ಲಿ 109 ಪ್ರಕರಣಗಳಲ್ಲಿ ಮಾತ್ರ ಅ೦ತಿಮ ಆದೇಶ ಹೊರಡಿಸಿರುವುದು ತಿಳಿದು ಬ೦ದಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರವು ಪೊಲೀಸ್‌ ಅಧಿಕಾರವನ್ನು ಕಸಿದುಕೊ೦ಡ ನ೦ತರ ಲೋಕಾಯುಕ್ತ ಸ೦ಸ್ಥೆಯು ಹಲ್ಲು ಕಿತ್ತ ಹಾವಿನ೦ತಾಗಿದೆ. ಲೋಕಾಯುಕ್ತ ಸಂಸ್ಥೆಗೆ ಪೊಲೀಸ್‌ ಅಧಿಕಾರವನ್ನು ಪುನರ್‌ ಸ್ಮಾಪಿಸಬೇಕು ಎಂದು ಲಂಚಮುಕ್ತ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ರಾಷ್ಟ್ರಸಮಿತಿ ಪಕ್ಷವೂ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವುದನ್ನು ಸ್ಮರಿಸಬಹುದು.
ಇದನ್ನೂ ಓದಿ: ರಾಮನ ಹೆಸರಲ್ಲಿ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದಿವೆ; ಧಾರ್ಮಿಕ ಭ್ರಷ್ಟಾಚಾರ ಮಾಡುತ್ತಿವೆ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights