ನಗೇರಾ ಯೋಜನೆಯಲ್ಲಿ ಭ್ರಷ್ಟಾಚಾರ; ಬೆಳಕಿಗೆ ತಂದಿದ್ದಕ್ಕೆ ಗ್ರಾಮದಿಂದಲೇ ಬಹಿಷ್ಕಾರ!

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ದಡಿ ತಮ್ಮ ಗ್ರಾಮದಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದು, ಬೆಳಕಿಗೆ ತಂದಿದ್ದಕ್ಕಾಗಿ ತಮ್ಮನ್ನು ಗ್ರಾಮದಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಮೇಘಾಲಯ ರಾಜ್ಯದ ಗ್ರಾಮವೊಂದರ ಮಹಿಳೆ ಆರೋಪಿಸಿದ್ದಾರೆ.

ಮೇಘಾಲಯದ ಪೂರ್ವ ಜೈಂಟಿಯ ಹಿಲ್ಸ್ ಪ್ರದೇಶದ ತ್ರಿನಾ ಸುಚೆನ್, ಕಳೆದ ವರ್ಷ ನವೆಂಬರ್ 30ರಂದು ಗ್ರಾಮದ ಮುಖ್ಯಸ್ಥರು ತಮ್ಮನ್ನು ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಳ್ಳದಂತೆ ಮತ್ತು ಮನೆಗೆ ಪ್ರವೇಶವಾಗದಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.

ನರೇಗ ಯೋಜನೆಯನ್ನು ಜಾರಿಗೆ ತರುವಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳಲ್ಲಿ ಆರೋಪ ಮಾಡಿದ ದಿನದಿಂದ ತಾವು ಬಹಿಷ್ಕಾರ ಎದುರಿಸುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ತಮಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಮಹಿಳೆ ಆರೋಪಿಸುತ್ತಿದ್ದರೆ ಜಿಲ್ಲಾಧಿಕಾರಿ ಅದನ್ನು ನಿರಾಕರಿಸಿದ್ದಾರೆ. ಆದರೂ ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ತನಿಖೆ ನಡೆಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Read Also: ತಣ್ಣಗಾಗಿಲ್ಲ BJP ಅತೃಪ್ತರ ಬೇಗುದಿ; ಅಮಿತ್‌ ಶಾಗೆ ದೂರು ನೀಡಲು ಸರದಿಯಲ್ಲಿದೆ ದಂಡು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights