Fact check: ಉತ್ತರ ಪ್ರದೇಶದ ಈ ವೀಡಿಯೋ ಕಾಂಗ್ರೆಸ್ ಕಾರ್ಯಕ್ರಮದಿಂದ ಪ್ರೇರಿತಗೊಂಡು ನಡೆದ ಘಟನೆಯಲ್ಲ..!
ಹೆಣ್ಣು ಮಕ್ಕಳು ಯುವಕನೊಬ್ಬನಿಗೆ ಥಳಿಸುವ ವಿಡಯೋವೊಂದು ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಚಾರದಿಂದ ಪ್ರೇರಿತರಾದ ಯುವತಿಯರ ಗುಂಪೊಂದು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಥಳಿಸಿದ ವೀಡಿಯೋ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ 2021ರ ನವೆಂಬರ್ನಲ್ಲಿ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ (ನಾನು ಹೆಣ್ಣು, ನಾನು ಹೋರಾಡಬಲ್ಲೆ) ಒಂದು ಅಭಿಯಾನವನ್ನು ಪ್ರಾರಂಭಿಸಿದರು. ಚುನಾವಣೆಗೆ ಸಜ್ಜಾಗಿರುವ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಹಿಳಾ ಸಬಲೀಕರಣವನ್ನು ಉದ್ದೇಶಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವೈರಲ್ ವೀಡಿಯೋದಲ್ಲಿ ವ್ಯಕ್ತಿಗೆ ತಳಿಸುತ್ತಿರುವ ಯುವತಿಯರ ಗುಂಪು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ನಡೆಸಿಕೊಟ್ಟ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ (ನಾನು ಹೆಣ್ಣು, ನಾನು ಹೋರಾಡಬಲ್ಲೆ) ಕಾರ್ಯಕ್ರಮದಿಂದ ಪ್ರೇರಿತಗೊಂಡಿದ್ದಾರೆ ಎಂಬ ಹೆಳಿಕೆಯೊಂದಿಗೆ ವೀಡಿಯೋ ವನ್ನು ಹಂಚಿಕೊಳ್ಳಲಾಗಿದೆ. ಆ ವೀಡಿಯೋದಲ್ಲಿರುವ ಯುವತಿಯರು ದುಪ್ಪಟ್ಟಾದಿಂದ ತಮ್ಮ ಮುಖವನ್ನು ಮುಂಚಿಕೊಂಡಿರುವಂತೆ ವೀಡಿಯೋದಲ್ಲಿ ಪ್ರಸಾರವಾಗುತ್ತಿದೆ.



ಫ್ಯಾಕ್ಟ್ ಚೆಕ್:
ವೀಡಿಯೋಗೆ ಸಂಬಂಧಿಸಿದ ಕೀವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ ನಮ್ಮ ಏನ್ ಸುದ್ದಿ.ಕಾಮ್ ಗೆ ಸಿಕ್ಕ ಮಾಹಿತಿಯ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ಮೂರು ವರ್ಷದ ಹಿಂದೆ ಡಿಸೆಂಬರ್ 10, 2018 ರಂದು ನಡೆದಿರುವ ಘಟನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ. ಆ ವೀಡಿಯೊದ ಶೀರ್ಷಿಕೆಯು “ವೀಕ್ಷಿಸಿ: ಯುಪಿಯ ಬಾಗ್ಪತ್ನಲ್ಲಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರು ಪುಂಡನನ್ನು ಅನ್ನು ಥಳಿಸಿದ್ದಾರೆ” ಎಂದಿದೆ.
ಹೆಚ್ಚಿನ ಮಾಹಿತಿಗಾಗಿ ನಾವು ಮತ್ತಷ್ಟು ಸರ್ಚ್ ಮಾಡಿದಾಗ, ಘಟನೆಯ ಕುರಿತು ಹಲವಾರು ಮಾಧ್ಯಮ ವರದಿಗಳು ಲಭ್ಯವಾಗಿದೆ. ಈ ವರದಿಗಳ ಪ್ರಕಾರ, ಈ ವಿಡಿಯೋ ಉತ್ತರ ಪ್ರದೇಶದ ಬಾಗ್ಪತ್ನಲ್ಲಿರುವ ಧರ್ಮ್ ಸಿಂಗ್ ಸರಸ್ವತಿ ಬಾಲಿಕಾ ಇಂಟರ್ ಕಾಲೇಜಿನಲ್ಲಿ ನಡೆದಿದ್ದು ಎಂದು ವರದಿಯಾಗಿದೆ.
TOI ವರದಿಯ ಪ್ರಕಾರ, ಮೂರು ಹುಡುಗಿಯರು ತಮ್ಮ ಶಿಕ್ಷಕರೊಂದಿಗೆ ಸೇರಿ ಕ್ಯಾಂಪಸ್ನೊಳಗೆ ಒಬ್ಬ ವ್ಯಕ್ತಿಯನ್ನು ಕೋಲುಗಳಿಂದ ಥಳಿಸಿದ್ದಾರೆ. ಸಾಕಷ್ಟು ಬಾರಿ ಒಬ್ಬ ವ್ಯಕ್ತಿಯು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪ್ರವೇಶಿಸಿ ಅಲ್ಲಿಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಹಲವು ಬಾರಿ ವಿದ್ಯಾರ್ಥಿನಿಯರು ಸಂಸ್ಥೆಯ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗದಿದ್ದಾಗ ವಿದ್ಯಾರ್ಥಿನಿಯರೇ ಆತನಿಗೆ ಥಳಿಸಿದ್ದಾರೆ ಎಂದು ವರದಿಯಾಗಿದೆ. ಸ್ಥಳದಿಂದ ಪರಾರಿಯಾಗಿದ್ದ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಮತ್ತಷ್ಟು ಶೋದ ನಡೆಸಿದಾಗ ಅದೇ ವೀಡಿಯೊವನ್ನು ಇಂಡಿಯಾ ಟುಡೆ ಮತ್ತು ದಿ ಕ್ವಿಂಟ್ ಈ ಘಟನೆಯ ಕುರಿತು 2018 ರಲ್ಲಿ ವರದಿ ಮಾಡಿವೆ.
ನವೆಂಬರ್ 2021 ರಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರನ್ನು ಸೆಳೆಯುವುದಕ್ಕಾಗಿ ಕಾಂಗ್ರೆಸ್ ಪಕ್ಷವು 100 ದಿನಗಳ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಭಾಗವಾಗಿ “ಅಧಿ ಅಬಾದಿ” ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆರಂಭಿಸಿದೆ. ಡಿಸೆಂಬರ್ 28 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಿಯಾಂಕಾ ಗಾಂಧಿ, ‘ಲಡ್ಕಿ ಹೂ, ಲಡ್ ಶಕ್ತಿ ಹೂ’ ಎಂಬ ಘೋಷಣೆಯನ್ನು ನೀಡಿದ್ದರು. ಆದರೆ ಈ ಕಾರ್ಯಕ್ರಮದ ನಂತರ ಯಾವುದೇ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೋ 2018ರದ್ದಾಗಿದೆ. ಅದಕ್ಕೂ ಇತ್ತೀಚಿಗೆ ಕಾಂಗ್ರೆಸ್ ಆಯೋಜಿಸಿದ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: Fact check: ಸಿಖ್ ಸೈನಿಕರನ್ನು ಭಾರತ ಸರ್ಕಾರ ಟಾರ್ಗೆಟ್ ಮಾಡಿದೆ ಎಂಬುದು ಎಡಿಟ್ ಮಾಡಲಾದ ವಿಡಿಯೋ

