FACT CHECK | ಹಿಂದೂಗಳಿಗೆ ಬೆದರಿಕೆ ಹಾಕಿದ್ರಾ ರಾಹುಲ್ ಗಾಂಧಿ?
![]()
23 ಸೆಕೆಂಡ್ಗಳ ಕ್ಲಿಪ್ನಲ್ಲಿ ಸುದ್ದಿ ವಾಹಿನಿ CNBC ಆವಾಜ್ ವಿಡಿಯೋದಲ್ಲಿ ರಾಹುಲ್ ಗಾಂಧಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದು, (ಹಿಂದಿಯಿಂದ ಅನುವಾದಿಸಲಾಗಿದೆ) ಒಂದು ದಿನ ಬಿಜೆಪಿ ಸರ್ಕಾರ ಬದಲಾಗುತ್ತದೆ, ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಯೋಚಿಸಬೇಕು- ಅಂತಹ ಕೆಲಸವನ್ನು ಎಂದಿಗೂ ಮಾಡಲು ಸಾಧ್ಯವಿಲ್ಲ, ಅವರೂ ಈ ಬಗ್ಗೆ ಯೋಚಿಸಬೇಕು,” ಎಂದು ಎಕ್ಸ್ನಲ್ಲಿ ಬರೆದು ಹಂಚಿಕೊಳ್ಳಲಾಗಿದೆ.
“ಬಿಜೆಪಿ ಸರ್ಕಾರ ಬದಲಾಗುತ್ತದೆ ಆಗ ಹಿಂದೂಗಳ ವಿರುದ್ಧ ಇಂತಹ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವ ಹಿಂದೂಗಳು ಯೋಚಿಸಲಿಲ್ಲ. ಕಾಂಗ್ರೆಸ್ ಒಂದು ಭಯೋತ್ಪಾದಕ ಸಂಘಟನೆ. ಬಹಿರಂಗ ಬೆದರಿಕೆ .” ಪೋಸ್ಟ್ಗಳ ಆರ್ಕೈವ್ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 15, 2024ರಂದು CNBC ಆವಾಜ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ.
![]()
ವಿಡಿಯೋ ಹಿಂದಿ ಶೀರ್ಷಿಕೆಯ ಪ್ರಕಾರ “ಚುನಾವಣಾ ಬಾಂಡ್ಗಳ ಕುರಿತು ರಾಹುಲ್ ಗಾಂಧಿ #ಚುನಾವಣಾ ಬಾಂಡ್ #ರಾಹುಲ್ ಗಾಂಧಿ #ಭಾರತ್ ಜೋಡೋನ್ಯಾಯಯಾತ್ರ #ಬಿಜೆಪಿಯ #ವೈರಲ್ವೀಡಿಯೋ.” ಆದರೆ, ಶೀರ್ಷಿಕೆಯಲ್ಲಿ ಗಾಂಧಿ ಹಿಂದೂಗಳಿಗೆ ಬೆದರಿಕೆ ಹಾಕಿರುವುದನ್ನು ಉಲ್ಲೇಖಿಸಿಲ್ಲ.
ವಿಡಿಯೋದ ವಿಸ್ತೃತ ಆವೃತ್ತಿಯನ್ನು ಮಾರ್ಚ್ 29, 2024 ರಂದು ಗಾಂಧಿಯವರ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ, ಹಿಂದಿ ಶೀರ್ಷಿಕೆಯೊಂದಿಗೆ, “ಸರ್ಕಾರ ಬದಲಾದಾಗ, ‘ಪ್ರಜಾಪ್ರಭುತ್ವವನ್ನು ಕಿತ್ತುಹಾಕಿದವರ ವಿರುದ್ಧ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಲಾಗುತ್ತದೆ! ಮತ್ತು ಅಂತಹ ಕ್ರಮವನ್ನು ತೆಗೆದುಕೊಳ್ಳಲಾಗುವುದು, ಇದನ್ನು ಯಾರೂ ಮತ್ತೆ ಮಾಡಲು ಧೈರ್ಯ ಮಾಡುವುದಿಲ್ಲ. ಇದು ನನ್ನ ಗ್ಯಾರಂಟಿ.”
“ವಿಡಿಯೋದ ಮೇಲಿನ ಬಲ ಮೂಲೆಯಲ್ಲಿ 15ನೇ ಮಾರ್ಚ್ 2024” ದಿನಾಂಕವು ಗೋಚರಿಸುತ್ತದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯವರು “ಈ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡಿದ್ದರೆ, ಸಿಬಿಐ ಅದರ ಕೆಲಸವನ್ನು ಮಾಡಿದ್ದರೆ, ಇಡಿ ತನ್ನ ಕೆಲಸವನ್ನು ಮಾಡಿದ್ದರೆ, ಇದು ಆಗುತ್ತಿರಲಿಲ್ಲ” ಎಂದು ಹೇಳುವುದನ್ನು ಕೇಳಬಹುದು. ಇದರ ನಂತರ ವೈರಲ್ ವಿಭಾಗವು ಕಾಣಿಸಿಕೊಳ್ಳುತ್ತದೆ, ಗಾಂಧಿಯವರು ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವವರನ್ನು ಉಲ್ಲೇಖಿಸುತ್ತಿದ್ದಾರೆ ಮತ್ತು ಹಿಂದೂಗಳಿಗೆ ಬೆದರಿಕೆ ಹಾಕುತ್ತಿಲ್ಲ ಎಂದು ಸೂಚಿಸುತ್ತದೆ.
ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪೂರ್ಣ ವಿಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಲಭ್ಯವಾಗಿದೆ. ಇದನ್ನು ಮಾರ್ಚ್ 15, 2024ರಂದು “ಪತ್ರಿಕಾಗೋಷ್ಠಿ | ಥಾಣೆ | ಮಹಾರಾಷ್ಟ್ರ | ಭಾರತ್ ಜೋಡೋ ನ್ಯಾಯ್ ಯಾತ್ರಾ” ಎಂಬ ಶೀರ್ಷಿಕೆಯಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿದೆ.
ವೈರಲ್ ಮತ್ತು ವಿಸ್ತೃತ ಕ್ಲಿಪ್ಗಳಲ್ಲಿ ಕಂಡುಬರುವ ಅದೇ ಹೇಳಿಕೆಯನ್ನು ಉಲ್ಲೇಖಿಸಿ, ತನಿಖಾ ಸಂಸ್ಥೆಗಳಿಗೆ ಗಾಂಧಿಯವರ ಕಠಿಣ ಎಚ್ಚರಿಕೆಯ ಬಗ್ಗೆ ಮಾರ್ಚ್2024ರ ಸುದ್ದಿ ವರದಿಗಳು ಲಭ್ಯವಾಗಿವೆ.. 1,823.08 ಕೋಟಿಗಳ ಪಾವತಿಗೆ ಒತ್ತಾಯಿಸಿ ಕಾಂಗ್ರೆಸ್ಗೆ ಆದಾಯ ತೆರಿಗೆ ನೋಟಿಸ್ ನೀಡಿದ ನಂತರ ಈ ಹೇಳಿಕೆ ನೀಡಲಾಗಿದೆ, ಇದು ವಿರೋಧ ಪಕ್ಷಗಳನ್ನು ಗುರಿಯಾಗಿಸುವ ದೊಡ್ಡ ಹುನ್ನಾರದ ಭಾಗವಾಗಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿಕೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದದರೆ, BJP ಇಡಿ ಮತ್ತು ಸಿಬಿಐ ಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮಾತನಾಡುತ್ತ ‘ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಲ್ಲಿ’ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತು ನೀಡುವ ಹೇಳಿಕೆಯನ್ನು ನೀಡಿರುವ ವಿಡಿಯೋವನ್ನು ಎಡಿಟ್ ಮಾಡಿ ತಿರುಚಿ ಹಂಚಿಕೊಂಡು, ಹಿಂದೂಗಳಿಗೆ ರಾಹುಲ್ ಗಾಂಧಿ ಬೆದರಿಕೆ ಹಾಕಿದ್ದಾರೆ ಎಂದು ದುರುದ್ದೇಶ ಪೂರಕವಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದ ಮುಸ್ಲಿಮರು ಇಸ್ಕಾನ್ ದೇವಸ್ಥಾನದ ಗೋ ಶಾಲೆಗೆ ನುಗ್ಗಿ ದಾಂಧಲೆ ನಡೆಸಿರುವುದು ನಿಜವೇ?

