ಮಲೆನಾಡಿನಲ್ಲಿ ಭೂಕುಸಿತ, ವಿಚಿತ್ರ ಶಬ್ದ : ಮನೆ ತೊರೆದ ಮಾಲೀಕ ಹೇಳಿದ್ದೇನು..?

ಮಲೆನಾಡಿನಲ್ಲಿ ಭೂಕುಸಿತ, ವಿಚಿತ್ರ ಶಬ್ದದಿಂದ ಭೂಕಂಪನವಾಗಿದೆ ಎಂದು ಆತಂಕದಲ್ಲಿದ್ದಾರೆ ಜನರು. ಈ ಶಬ್ದಕ್ಕೆ ಹೆದರಿ ಮನೆ ತೊರೆದಿದ್ದಾರೆ ಜನ.

ಹೌದು… ಇಂದು ಬೆಳಗಿನ ಜಾವ 4.45ರ ಸುಮಾರಿಗೆ‌ 2-3 ಸೆಕೆಂಡ್ ಭೂಮಿಯೊಳಗಿಂದ ಭಾರೀ ಶಬ್ಧದಿಂದ ಭಯವಾಯ್ತು. ಶಬ್ದಕ್ಕೆ ಹೆದರಿ ಈಗ ಮೂಡಿಗೆರೆ ಬಂದಿದ್ದೇವೆ. ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಗ್ರಾಮದ ಜನ ಹೇಳಿದ್ದಾರೆ. ಒಂದು ಸಾರಿ ಶಬ್ದ ಜೋರಾಗಿ ಕೇಳಿಬಂತು. ನಂತರ ಮಳೆ ಜೋರಾಯ್ತು ನಾನು ಸೇರಿದಂತೆ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ಮುಂದೇನು ಅಂತಾ ಗೊತ್ತಾಗುತ್ತಿಲ್ಲ ಎಂದು ಜನ ತಮ್ಮ ಆತಂಕವನ್ನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಭೂಕಂಪನದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. 15 ದಿನ ಗಳ ಕಾಲ ಸರ್ವೇ ನಡೆಸಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಮಾಹಿತಿ ನೀಡಿರುವ ತಜ್ಞರ ತಂಡ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಮಲೆನಾಡಿನಲ್ಲಿ ಭೂಕಂಪನವಾಗಿಲ್ಲ ಎಂದಿದೆ.

ಭೂ ಕುಸಿತ, ರಸ್ತೆ ಬಿರುಕುಗಳಿಗೆ ಮಹಾ ಮಳೆಯೇ ,ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ. ಮಲೆನಾಡಿನಲ್ಲಿ ಯಾವುದೇ ಭೂ ಕಂಪನ, ಭೂಮಿ ಸ್ಫೋಟ ವಾಗಿಲ್ಲ ಅಂತರ್ಜಲ ನೀರಿನ ಮೂಲಗಳಿಗೆ ಸಂಘರ್ಷಣೆಯಾದ ವೇಳೆ ಭೂಮಿಯಿಂದ ಶಬ್ದ ಕೇಳಿಬರುತ್ತೆ. ಇದಕ್ಕೆ ಯಾರೋ ಆತಂಕ ಪಡುವ ಅಗತ್ಯವಿಲ್ಲ. ಮಲೆನಾಡಿನಲ್ಲಿ ಸುರಿದ ಮಳೆಯಿಂದ ಭೂಕುಸಿತ, ರಸ್ತೆ ಕುಸಿತವಾಗಿರುವುದು ಎಂದು ಚಿಕ್ಕಮಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ‌ ಮಹೇಶ್ ಹೇಳಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights