Fact Check: ಪಾದಗಳಿಂದ ವೃದ್ಧಾಪ್ಯ ಪ್ರಾರಂಭವಾಗುತ್ತದೆಯೆ?

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮನುಷ್ಯನ ಆಯಸ್ಸಿಗೆ ಸಂಬಂಧಿಸಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. “ವಯಸ್ಸಾಗುವುದು ಪಾದಗಳಿಂದಲೇ ಆರಂಭವಾಗುತ್ತದೆ. “ಪಾದಗಳು ದುರ್ಬಲವಾಗಿದ್ದರೆ ಅದು ವೃದ್ಧಾಪ್ಯ ಎಂದರ್ಥ, ಪಾದಗಳಿಂದ ವೃದ್ಧಾಪ್ಯ ಪ್ರಾರಂಭವಾಗುತ್ತದೆ” ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ.

ಫ್ಯಾಕ್ಟ್ ಚೆಕ್

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿಯೊಬ್ಬರ ಆರೊಗ್ಯ ಅವರ ವಯಸ್ಸಿನ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಮುಖ್ಯವಾಗಿ ಕೂದಲು ಉದುರುವಿಕೆ, ಮಧುಮೇಹ ರೋಗ, ಬುದ್ದಿಮಾಂಧ್ಯತೆ ಮತ್ತು ಸಂಧಿವಾತಗಳಂತಹ ಸಮಸ್ಯೆಗಳಿಗೆ ಅವರ ಅನುವಂಶೀಯ ಕಾರಣಗಳು ಇರುತ್ತದೆ. ಜೊತೆಗೆ ವಯಸ್ಸು ಆಗುತ್ತಾ ಹೋದಂತೆ ವಯೋಸಹಜ ಖಾಯಿಲೆಗಳು ಪರಮಾಣು ಮತ್ತು ಸೆಲ್ಯುಲರ್ ಗಳ ಮೇಲೆ ಹಾನಿ ಆಗುತ್ತಿರುತ್ತವೆ. ಕಾಲಾ ನಂತರ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಶಕ್ತಿಯು ಕುಂದುತ್ತಾ ಹೋಗುತ್ತದೆ. ಇದು ಸಾವಿಗೆ ಕಾರಣವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ WHO ದ ಲೇಖನವನ್ನು ಇಲ್ಲಿ ಓದಬಹುದು.

ಮತ್ತೊಂದು ವಿಷಯವನ್ನು ನಾವು ಗಮನಿಸಬೇಕು ಏನೆಂದರೆ ವ್ಯಕ್ತಿಯ ವಯಸ್ಸು ಹೆಚ್ಚಾದಂತೆಲ್ಲಾ ಆ ವ್ಯಕ್ತಿಯ ಆರೋಗ್ಯದ ಸ್ಥಿರತೆಯಲ್ಲಿ ಬದಲಾವಣೆಗಳು ಆಗುತ್ತಾ ಹೋಗುತ್ತದೆ ಅದು ಕೆಲವು ವರ್ಷಗಳ ನಂತರ ಅವರ ಅನುಭವಕ್ಕೆ ಬರಲು ಪ್ರಾರಂಭವಾಗುತ್ತದೆ.

ಶರೀರ ಶಾಸ್ತ್ರಜ್ಞರ ಪ್ರಕಾರ ಹೃದಯ, ಮೂತ್ರಪಿಂಡಗಳು, ಮೆದುಳು ಅಥವಾ ಶ್ವಾಸಕೋಶದಂತಹ ಅನೇಕ ಅಂಗಗಳ ಕಾರ್ಯಕ್ಷಮತೆಯು ಜೀವಿತಾವಧಿಯಲ್ಲಿ ಕ್ರಮೇಣ ಕುಸಿತವನ್ನು ಕಾಣುತ್ತಾ ಹೋಗುತ್ತದೆ ಎಂದು ಕಂಡುಕೊಂಡಿದ್ದಾರೆ. ಈ ಅವನತಿಯ ಭಾಗವು ಈ ಅಂಗಗಳಿಂದ ಜೀವಕೋಶಗಳ ನಷ್ಟದಿಂದ ಉಂಟಾಗುತ್ತದೆ, ಇದರ ಪರಿಣಾಮವಾಗಿ ವ್ಯಕ್ತಿಯ ಸಾಮರ್ಥ್ಯಗಳು ಕಡಿಮೆಯಾಗುತ್ತವೆ. (ಸೋರ್ಸ್: ಬ್ರಿಟಾನಿಕಾ).

ಪಾದ ಮತ್ತು ಆಯಸ್ಸು

ಮನುಷ್ಯನಿಗೆ ಪಾದಗಳು ಮುಖ್ಯವಾದ ಅಂಗ.  ಒಬ್ಬ ವ್ಯಕ್ತಿಯು ಸಕ್ರಿಯನಾಗಿ ಇದ್ದಾನೆ ಎಂದರೆ ಆತ ಚೆನ್ನಾಗಿ ನಡೆಯಲು, ಓಡಲು ಮತ್ತು ಹತ್ತಲು ಸಾಮರ್ಥ್ಯ ಉಳ್ಳವನಾಗಿರಬೇಕು. ಆದರೆ ಪಾದಗಳು ದುರ್ಬಲವಾದ ಮಾತ್ರಕ್ಕೆ ವಯಸ್ಸಾಗಿದೆ, ಪಾದಗಳಿಂದ ವೃದ್ಧಾಪ್ಯ ಆರಂಭವಾಗುತ್ತದೆ ಎಂದು ಹೇಳಲು ಬರುವುದಿಲ್ಲ.

‘What Growing Old does to Your Feet’  ಎಂಬ ಲೇಖನದ ಪ್ರಕಾರ ವಯಸ್ಸಾದಂತೆ ಪಾದದ ಅಸ್ಥಿರಜ್ಜುಗಳು, ತಂತುಕೋಶಗಳು ಮತ್ತು ಚರ್ಮವು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ, ಆದರೆ ಚರ್ಮವು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ನಿಮ್ಮ ಕಾಲ್ಬೆರಳ ಉಗುರುಗಳು ದಪ್ಪವಾಗುತ್ತವೆ, ನಿಮ್ಮ ಪಾದದ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ನಿಮ್ಮ ಪಾದದ ಅಡಿಭಾಗದಲ್ಲಿರುವ ಕೊಬ್ಬು ಕ್ಷೀಣಿಸಲು ಪ್ರಾರಂಭಿಸುತ್ತವೆ. ನಿಮ್ಮ ಪಾದಗಳು ಅಗಲವಾಗುತ್ತವೆ ಮತ್ತು ಕಾಲ್ಬೆರಳ ಉಗುರುಗಳು ಮತ್ತು ನಿಮ್ಮ ಕಾಲ್ಬೆರಳುಗಳ ನಡುವೆ ನೋವು ಕಾಣಿಸಿಕೊಳ್ಳುತ್ತದೆ.

ಪಾದದ ಸಂರಚನೆಗೆ ಕುರಿತಂತೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸಿಡಿಸಿ ಯ ಪ್ರಕಾರ ವ್ಯಕ್ತಿಯೊಬ್ಬ ಹೆಚ್ಚು ನಡಿಗೆ ಮಾಡಿದಷ್ಟು ಆತನ ಆರೋಗ್ಯ ಉತ್ತಮವಾಗಿರುತ್ತದೆ. ಕುಳಿತು ಕಾಲ ಕಳೆಯುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತದೆ. ಒಂದು ಅಧ್ಯಯನದ ಪ್ರಕಾರ ಒಬ್ಬ ವ್ಯಕ್ತಿಯು ಒಂದು ವಾರದಲ್ಲಿ ಸುಮಾರು 150 ನಿಮಿಷಗಳ ಕಾಲ ನಡೆಯಬೇಕೆಂದು ಹೇಳುತ್ತದೆ.

ಪಾದಗಳು ಬಲಹೀನವಾದರೆ ವಯಸ್ಸಾಗಿದೆ, ಪಾದಗಳಿಂದಲೇ ವೃದ್ಯಾಪ್ಯ ಆರಂಭವಾಗುತ್ತದೆ ಎಂಬುದಕ್ಕೆ ಯಾವ ವೈಜ್ಞಾನಿಕ ಆಧಾರಗಳಿಲ್ಲಾ ಎಂಬುದು ಮೇಲಿನ ಅಧ್ಯಯನದಿಂದ ತಿಳಿದು ಬಂದಿದೆ. ಹಾಗಾಗಿ ಪ್ರತಿಪಾದಿಸಲಾದ ಹೇಳಿಕೆ ತಪ್ಪಾಗಿದೆ.


ಇದನ್ನೂ ಓದಿ: ಹತ್ತು ರೂ ಭಿಕ್ಷೆ ಕೊಟ್ಟು ಬಾಲಕಿಗೆ ಮೆಣಸಿನಕಾಯಿ ತಿನ್ನಿಸುತ್ತಿದ್ದಾರೆ ಎಂಬ ವಿಡಿಯೋದ ಅಸಲಿ ಕಥೆಯೇನು?

Spread the love

Leave a Reply

Your email address will not be published. Required fields are marked *