ಬಿಹಾರ: ಬಿಜೆಪಿಯನ್ನು ಟ್ರೋಲ್‌ ಮಾಡುತ್ತಿವೆ ಈ ಹಾಡುಗಳು: ಹಾಡುಗಳನ್ನು ನೋಡಿ!

ಬಿಹಾರ ಚುನಾವಣೆಗೆ ಇನ್ನೆರಡು ವಾರಗಳಷ್ಟೇ ಬಾಕಿ ಇವೆ. ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ‘ಬಿಹಾರ ಮೇ ಈ ಬಾ’ ಎಂಬ ಪ್ರಚಾರ ಗೀತಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿರೋಧವಾಗಿ ‘ಬಿಹಾರ ಮೇ ಕಾ ಬಾ’ ಎಂಬ  ಹಾಡುಗಳನ್ನು ಸಂಯೋಜಿಸಿ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ಬಿಡುಗಡೆ ಮಾಡಿದ್ದು, ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಫಲತೆಯ ಬಗ್ಗೆ ವಿಮರ್ಶೆಗಳನ್ನು ಭೋಜ್‌ಪುರಿ ಹಾಡುಗಳು ಗಾಯಕಿ ನೇಹಾ ಸಿಂಗ್‌ ಹಾಡಿದ್ದು, “ಪ್ರಜಾಪ್ರಭುತ್ವ ನಮಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನೀಡಿದೆ. ನಾನದನ್ನೂ ಮಾಡುತ್ತಿದ್ದೇನೆ ಅಷ್ಟೇ” ಅವರು ಹೇಳಿದ್ದಾರೆ.

ಅಕ್ಟೋಬರ್ 13 ರಂದು ಬಿಜೆಪಿ ಪಕ್ಷದ ಐಟಿ ಸೆಲ್ ಬಿಡುಗಡೆ ಮಾಡಿದ ಬಿಜೆಪಿಯ ‘ಬಿಹಾರ ಮೇ ಇ ಬಾ (ಇದು ಬಿಹಾರದಲ್ಲಿದೆ)’ ಗೀತೆಗೆ ಪ್ರತಿಕ್ರಿಯಾಗಿ “ಬಿಹಾರ ಮೇ ಕಾ ಬಾ” (ಬಿಹಾರದಲ್ಲಿ ಏನಿದೆ) ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಇದಕ್ಕೂ ಮುಂಚೆಯೇ ಬಿಹಾರ ಮೇ ಕಾ ಬಾ ಹಾಡನ್ನು ಹಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಬಿಹಾರ ಮೇ ಇ ಬಾ ಹಾಡನ್ನು ಸಂಯೋಜಿಸಿದೆ. ಇದಾದ ನಂತರ, ನೇಹಾ ಸಿಂಗ್‌ ತಮ್ಮ ಹಳೆಯ ಹಾಡನ್ನು ಮತ್ತಷ್ಟು ಮಾರ್ಪಡಿಸಿ, ಇತ್ತೀಚಿನ ಇಶ್ಯೂಗಳನ್ನು ಸೇರಿಸಿ ಹೊಸದಾಗಿ ಹಾಡುಗಳನ್ನು ರಚಿಸಿ, ಹಾಡಿದ್ದಾರೆ.

‘ಲಾ ಸುನಾ ಜಬಾಬ್, ಕಾ ಬಾ ಬಿಹಾರ ಮೇ’ ಎಂಬ ಹಾಡಿನಲ್ಲಿ, ಬಿಹಾರದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು, ಸ್ಟ್ರೆಚರ್‌ಗಳು, ಔಷಧಿಗಳು, ಆಂಬುಲೆನ್ಸ್‌ಗಳು ಮತ್ತು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೇಹಾ ಉಲ್ಲೇಖಿಸಿದ್ದಾರೆ.

ತಮ್ಮ ಹಾಡುಗಳಲ್ಲಿ ಎನ್‌ಡಿಎ ಸರ್ಕಾರವನ್ನು ಟೀಕಿಸಿ, ನಾಯಕರು ಕೇವಲ ಭರವಸೆಗಳನ್ನು ನೀಡುತ್ತಾರೆ. ಆದರೆ ಅವುಗಳನ್ನು ಈಡೆರಿಸುವುದಿಲ್ಲ ಎಂದಿದ್ದಾರೆ. ಇವರಿಗೆ ಬಡ ಜನರೊಂದಿಗೆ ಯಾವುದೇ ಸಂಬಂಧವಿಲ್ಲ, ನಾಯಕರು ಅಧಿಕಾರದಲ್ಲಿರಲು ಬಯಸುತ್ತಾರೆ ಎಂದು ನೇಹಾ ಹೇಳುತ್ತಾರೆ.

ನೇಹಾ ಅವರ ಈ ಹಾಡುಗಳು 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಧಕ್ಕೆ ತರುತ್ತದೆ ಎಂದು ಪಾಟ್ನಾ ಮೂಲದ ರಾಜಕೀಯ ವಿಶ್ಲೇಷಕ ಸರೋಜ್ ಯಾದವ್ ಹೇಳಿದ್ದಾರೆ.

“ಗಾಯಕರು ಮತ್ತು ಕವಿಗಳು ಸಾಮಾನ್ಯವಾಗಿ ಆಡಳಿತ ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿರುತ್ತಾರೆ. ಬಹುಶಃ ವಿಶ್ವದಲ್ಲೇ ದೊಡ್ಡದಾಗಿದೆ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷ ಬಿಜೆಪಿ ಈ ಗಾಯಕಿಗೆ ಉತ್ತರಿಸಿದ್ದು ಬಹುಶಃ ಮೊದಲ ಬಾರಿಗೆ ಎನ್ನುತ್ತಾರೆ ಯಾದವ್.

ಮತ್ತೊಂದು ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ: https://www.youtube.com/watch?v=7b_0g5QwpWM&feature=emb_logo

ಆದರೆ, ನೇಹಾ ಸಿಂಗ್ ರಾಥೋಡ್ ಅವರ ಸ್ನೇಹಿತರು ಆಗಾಗ್ಗೆ ಆಕೆಗೆ ಅಪಾಯ ಉಂಟಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 2017 ರಲ್ಲಿ ಬೆಂಗಳೂರಿನಲ್ಲಿರುವ ತನ್ನ ಮನೆಯ ಬಾಗಿಲಲ್ಲಿ ದುರ್ಷ್ಕಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶರಂತೆ ನಿನ್ನನ್ನು ಕೊನೆಗೊಳಿಸಬಹುದು ಎಂದು ಹಲವು ಸ್ನೇಹಿತರು ಎಚ್ಚರಿಸಿದ್ದಾರೆ ಎನ್ನುತ್ತಾರೆ.

ಇಂತಹ ಹೇಳಿಕೆಗಳು ಹೆಚ್ಚಿನ ಜನರನ್ನು ಹೆದರಿಸುತ್ತವೆ. ಆದರೆ ರಾಥೋಡ್ ತನ್ನ ಸ್ನೇಹಿತರ ಎಚ್ಚರಿಕೆಯ ಮಾತುಗಳನ್ನು ಅಭಿನಂದನೆಗಳಾಗಿ ತೆಗೆದುಕೊಳ್ಳುತ್ತಾರೆ.

ಬಿಹಾರ-ಉತ್ತರ ಪ್ರದೇಶ ಗಡಿಯಲ್ಲಿರುವ ಜಂದಾಹ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುವ ನೇಹಾ ಸಿಂಗ್ ರಾಥೋಡ್, 2019 ರಲ್ಲಿ ಪದವಿ ಮುಗಿಸಿದ ನಂತರ ಜಾನಪದ ಗೀತೆಗಳನ್ನು ಹಾಡಲು ಪ್ರಾರಂಭಿಸಿದರು. ಆಕೆಯ ಯೂಟ್ಯೂಬ್ ಚಾನೆಲ್ ಧಾರೋಹರ್‌ಗೆ 95 ಸಾವಿರ ಜನ ಚಂದಾದಾರರಾಗಿದ್ದಾರೆ. ಅವರ ಫೇಸ್‌ಬುಕ್ ಪುಟ ಮತ್ತು ಟ್ವಿಟರ್ ಖಾತೆ ಕೂಡ ಅಷ್ಟೇ ಜನಪ್ರಿಯವಾಗಿವೆ. ಅವರ ಅಭಿಮಾನಿಗಳಲ್ಲಿ ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು, ಮಾಜಿ ಅಧಿಕಾರಿಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಸೇರಿದ್ದಾರೆ. ಹಳ್ಳಿಗಾಡು ಮತ್ತು ಬಂಡಾಯ ನೇಹಾ ಸಿಂಗ್ ರಾಥೋಡ್‌ನ ಹಾಡುಗಳ ವಿಶಿಷ್ಟ ಲಕ್ಷಣವಾಗಿದೆ.


ಇದನ್ನೂ ಓದಿ: ಕೋಶಿಯಾರಿ ಅವರು ಬಿಜೆಪಿ ಸಂಘ ಪ್ರಚಾರಕರಾಗಬೇಕಿತ್ತು, ರಾಜ್ಯಪಾಲರಾಗಿದ್ದಾರೆ: ಶಿವಸೇನಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights