FACT CHECK | ಉತ್ತರ ಪ್ರದೇಶದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾನರಗಳಿಗೆ ಭೋಜನ ಏರ್ಪಡಿಸಲಾಗಿತ್ತೆ?

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಾನರಗಳಿಗೆ (ಕೋತಿ) ಭೋಜನ ಏರ್ಪಡಿಸಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ ವಾನರ ಭೋಜನ ಏರ್ಪಡಿಸಿದೆಯೇ?

ವಾಟ್ಸಾಪ್ ಮತ್ತು ಫೇಸ್‌ಬುಕ್ ಪೋಸ್ಟ್ ಗಳಲ್ಲಿ ಕಂಡುಬಂದ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ “ಬಹಳ ಅದ್ಬುತವಾದ ದೃಶ್ಯ ವಾರಣಾಸಿಯ ಗಂಗಾತಟದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾನರ ಸೇನೆಗೆ ಸಕಲ ಸರಕಾರಿ ಗೌರವಗಳೊಂದಿಗೆ ಯೋಗಿಜೀ ಸರಕಾರದಿಂದ ವಿಶೇಷವಾದ ಭೋಜನ ಕೂಟ. ಇದಲ್ಲವೇ ಸನಾತನ ಸಂಸ್ಕೃತಿಯ ಅನಾವರಣ” ಎಂದಿದೆ. ಈ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ ವಾನರ ಭೋಜನ ಏರ್ಪಡಿಸಿದೆಯೇ?

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನುಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲುಕೀ ವರ್ಡ್ ಮೂಲಕ ಗೂಗಲ್ ಸರ್ಚ್ ಮಾಡಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ ವೇಳೆ ವೀಡಿಯೋದಲ್ಲಿ ಕೆಲವು ಅಸಹಜತೆಗಳಿರುವುದು ಕಂಡುಬಂದಿದೆ.

ಪೊಲೀಸರ ಹೆಗಲಲ್ಲಿ ಗನ್ ಇದ್ದರೂ ಕೈಯಲ್ಲಿ ಅದನ್ನು ಹಿಡಿಯದೇ, ಧ್ವಜ ಹಿಡಿದಿರುವುದು (ಎಡ), ಗನ್ ಹಿಡಿಯುವ ವೇಳೆ ಕೈ ಅಸಹಜವಾಗಿರುವುದು (ಬಲ) ವಾನರನ ಅಸಹಜತೆಯ ವೀಡಿಯೋ ಇದು ಕೃತಕವಾದ ವಿಡಿಯೋ ಎಂಬುದನ್ನುಸ್ಪಷ್ಟಪಡಿಸುತ್ತದೆ.

ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ ವಾನರ ಭೋಜನ ಏರ್ಪಡಿಸಿದೆಯೇ?

ಇದು ವೀಡಿಯೋವನ್ನು ಎಐನಿಂದ ರಚಿಸಿದ್ದಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಅದರಂತೆ ನಾವು ವೀಡಿಯೋವನ್ನು ಎಐ-ಪತ್ತೆ ಪರಿಕರಗಳನ್ನು ಬಳಸಿ ಪರಿಶೀಲಿಸಿದ್ದೇವೆ ಮತ್ತು ಅದು ಎಐನಿಂದ ರಚಿಸಿರುವುದು ಹೌದು ಎಂಬುದನ್ನು ಕಂಡುಕೊಂಡಿದ್ದೇವೆ.

ವಾಸ್‌ ಇಟ್ ಎಐ ಮೂಲಕ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಸರ್ಚ್ ಮಾಡಿದಾಗ, ಅದು ಈ ಫೋಟೋ ಅಥವಾ ಅದರ ಗಮನಾರ್ಹ ಭಾಗವು ಎಐನಿಂದ ರಚಿಸಿದ್ದಾಗಿದೆ ಎಂದು ಹೇಳಿದೆ.

ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ ವಾನರ ಭೋಜನ ಏರ್ಪಡಿಸಿದೆಯೇ?

ನಾವು ಇನ್ನೊಂದು ಎಐ- ಪತ್ತೆ ಸಾಧನವಾದ ಸೈಟ್ ಎಂಜಿನ್ ಅನ್ನು ಬಳಸಿಕೊಂಡು ಚಿತ್ರವನ್ನು ಪರಿಶೀಲಿಸಿದ್ದೇವೆ , ಇದು 92% ರಷ್ಟು ಎಐ-ರಚಿತವಾಗಿರುವ ಸಾಧ್ಯತೆಯನ್ನು ಕಂಡುಹಿಡಿದಿದೆ.

ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶ ಸರ್ಕಾರ ವಾನರ ಭೋಜನ ಏರ್ಪಡಿಸಿದೆಯೇ?

ಮತ್ತೊಂದು AI-ಪತ್ತೆ ಸಾಧನ, ಹೈವ್ ಮಾಡರೇಶನ್, ಎಐ-ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ವನ್ನು ಇದರಲ್ಲಿ ಪತ್ತೆ ಮಾಡಿದ್ದು ಶೇ. 94.8ರಷ್ಟು ಸಾಧ್ಯತೆಯನ್ನು ಕಂಡುಹಿಡಿದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ವಾನರಗಳಿಗೆ ಭೋಜನ ಏರ್ಪಡಿಸಿದೆ ಎನ್ನುವ ಹೇಳಿಕೆ ಸುಳ್ಳಾಗಿದ್ದು ಈ ವೀಡಿಯೋ ಎಐನಿಂದ ರಚಿಸಿದ್ದಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೆಹಲಿಯಲ್ಲಿ 3ಲಕ್ಷ ಬೀದಿ ನಾಯಿಗಳನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಇರಾಕ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights