ದೇಶದಲ್ಲಿ ಕೊಂಚ ಇಳಿಕೆ ಕಂಡ ಕೊರೊನಾ : 3.66 ಲಕ್ಷ ಹೊಸ ಕೇಸ್ – 3,754 ಸಾವು!
ದೇಶದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ ಕೋಮಚ ಇಳಿಕೆ ಕಂಡಿದೆ. ಬಹುತೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಿದ್ದು ಸೋಂಕಿತರ ಸಂಖ್ಯೆ ಕೊಂಚ ಇಳಿಕೆ ಕಂಡಿದೆ.
ಕಳೆದ 24 ಗಂಟೆಯಲ್ಲಿ 3.66 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 3,754 ಜನ ಸೋಂಕಿಗೆ ಬಲಿಯಾಗಿದ್ದಾರೆ. ಸತತ ಮೂರು ನಾಲ್ಕುದಿನದಿಂದ ಸತತವಾಗಿ 4 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕು ದಾಖಲಾಗುತ್ತಿದ್ದು ಕಳೆದ 24 ಗಂಟೆಯಲ್ಲಿ ಸೋಂಕು ಹರಡುವಿಕೆ ಕೊಂಚ ಕಡಿಮೆಯಾಗಿದ್ದು ಕಡಿಮೆ ಪ್ರಕರಣಗಳು ದಾಖಲಾಗಿವೆ.
ಮಾತ್ರವಲ್ಲದೇ ಪ್ರತಿನಿತ್ಯ 4 ಸಾವಿರಕ್ಕೂ ಅಧಿಕ ಸಾವುನೋವುಗಳು ಸಂಭವಿಸುತ್ತಿದ್ದು ಇಂದು ಕಡಿಮೆ ಸಾವಿನ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕಳೆದ 24 ಗಂಟೆಗಳಲ್ಲಿ ದೇಶದ 366,161 ಹೊಸ ಕೋವಿಡ್ -19 ಸೋಂಕುಗಳು ಸೇರಿಸಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 2,26,62,575 ಕ್ಕೆ ತಲುಪಿದೆ. ಒಂದೇ ದಿನದಲ್ಲಿ ಒಟ್ಟು 3,754 ಜನರು ವೈರಸ್ಗೆ ತುತ್ತಾಗಿದ್ದು, ಭಾರತದಲ್ಲಿ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 246,116 ಲಕ್ಷಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 3,53,818 ಕೋವಿಡ್ -19 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ 1,86,71,222 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದರೆ, ಕೋವಿಡ್ -19 ಸೋಂಕಿನ ವಿರುದ್ಧ ದೇಶದಲ್ಲಿ 17,01,76,603 ಜನರಿಗೆ ಲಸಿಕೆ ನೀಡಲಾಗಿದೆ.
ಭಾರತದಲ್ಲಿ ಇನ್ನೂ ಕೋವಿಡ್ -19 ರ 37,45,237 ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ ಗರಿಷ್ಠ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳಲ್ಲಿ 48,401 ಪ್ರಕರಣಗಳು ಮಹಾರಾಷ್ಟ್ರ, 47,930 ಪ್ರಕರಣಗಳು ಕರ್ನಾಟಕ, 35,801 ಪ್ರಕರಣಗಳು ಕೇರಳ, ತಮಿಳುನಾಡು 28,897 ಪ್ರಕರಣಗಳು ಮತ್ತು ಉತ್ತರ ಪ್ರದೇಶ 23,175 ಪ್ರಕರಣಗಳನ್ನು ದಾಖಲಿಸಿದೆ.
ದೇಶದಲ್ಲಿ ವರದಿಯಾದ 3,754 ಸಾವುಗಳಲ್ಲಿ, ಗರಿಷ್ಠ ಸಾವುನೋವುಗಳು ಮಹಾರಾಷ್ಟ್ರದಲ್ಲಿ (572) ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕವು ಭಾರತದಲ್ಲಿ ಎರಡನೇ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತಿದ್ದು ಇದು ಗರಿಷ್ಠ ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿ ಮಹಾರಾಷ್ಟ್ರವನ್ನು ಹಿಂದಿಕ್ಕುವ ಸಾಧ್ಯತೆಯಿದೆ.
ಕೊರೊನಾ ತಡೆಗೆ ಅನೇಕ ರಾಜ್ಯಗಳು ಕಳೆದ ಒಂದು ತಿಂಗಳಿನಿಂದ ಕಟ್ಟುನಿಟ್ಟಾದ ಲಾಕ್ಡೌನ್ಗಳನ್ನು ವಿಧಿಸಿವೆ.

