ಬಂಡೆಗೆ ಸಿಬಿಐ ನೋಟೀಸ್ : ನ.25ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಡಿಕೆಶಿ ಮನವಿ…!

ಸಿಬಿಐ ಕಚೇರಿಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ನೋಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಹೌದು.. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಅಕ್ಟೋಬರ್ 5 ರಂದು ಡಿಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತೆ ಡಿಕೆಶಿ ಕುಮಾರ್ ಗೆ ಮತ್ತೆ ಸಿಬಿಐ  ನೋಟಿಸ್ ನೀಡಿದೆ. ನವೆಂಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟೀಸ್ ಕೊಟ್ಟಿದೆ. ಆದರೆ ನ.23ರಂದು ಜಿಲ್ಲಾ ಪ್ರವಾಸ ಇರುವುದರಿಂದ ನವೆಂಬರ್ 25 ರಂದು ವಿಚಾರಣೆಗೆ ಹಾಜರಾಗುತ್ತೇನೆಂದು ಡಿಕೆಶಿ ಸಿಬಿಐಗೆ ಮನವಿ ಮಾಡಿಕೊಂಡಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯ ನಿಶ್ಚಿತಾರ್ಥದ ದಿವಸವೇ ಸಿಬಿಐ ನೋಟೀಸ್ ನೀಡಿದೆ. ಅಕ್ಟೋಬರ್ 5 ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಬಂಧಿಸಿದ 14 ಸ್ಥಳದ ಮೇಲೆ 60 ಅಧಿಕಾರಿಗಳಿಂದ ದಾಳಿ ಮಾಡಲಾಗಿತ್ತು. ಡಿಕೆ ಸುರೇಶ್ ದೆಹಲಿ ನಿವಾಸ, ಹಾಸನ, ದೊಡ್ಡ ಹಾಲಹಳ್ಳಿ, ಕೋಡಿಹಳ್ಳಿ ನಿವಾಸ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ವೇಳೆ ಆದಾಯ, ಸ್ಥಿರಾಸ್ತಿ, ಚರಾಸ್ಥಿ, ಕಾರು ವಾಹನ ಗಳ ಮಾಹಿತಿ, ಲೆಕ್ಕ, ಬಿಲ್ ಮಾಹಿತಿಯನ್ನು ಸಿಬಿಐ ಕೇಳಿತ್ತು.

ಇದರ ಬಗ್ಗೆ ಸೂಕ್ತ ದಾಖಲಾತಿಗಳನ್ನು ಡಿಕೆಶಿ ವದಗಿಸಬೇಕಾಗುತ್ತದೆ. ಇದರಲ್ಲಿ ಪಾಲುದಾರರಾದವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಲಿದೆ. ಒಂದು ವೇಳೆ ವಿಚಾರಣೆ ವೇಳೆ ಡಿಕೆಶಿ ಸೂಕ್ತ ದಾಖಲಾತಿಗಳನ್ನು ನೀಡದಿದ್ದಲ್ಲ ಮತ್ತೆ ಡಿಕೆಶಿವಕುಮಾರ್ ಗೆ ಕಂಟಕ ಶುರುವಾಗುವುದರಲ್ಲಿ ಅನುಮಾನವೇ ಇಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights