ನ. 26-27ರಂದು ರೈತ-ಕಾರ್ಮಿಕ ಐತಿಹಾಸಿಕ ಹೋರಾಟಕ್ಕೆ ಸಜ್ಜಾಗುತ್ತಿದೆ ಭಾರತ!

ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಮತ್ತು ರೈತರ ಸಂಘಟನೆಗಳ (ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ) ನವೆಂಬರ್ 26-27 ರಂದು ಐತಿಹಾಸಿಕ ಹೋರಾಟವನ್ನು ನಡೆಸಲು ನಿರ್ಧರಿಸಿವೆ. ಭಾರತದ ಸುದೀರ್ಘ ಇತಿಹಾಸದದಲ್ಲಿ ತುಳಿತಕ್ಕೊಳಗಾದ ವರ್ಗಗಳು, ರೈತರು ಮತ್ತು ಕೃಷಿ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳೊಂದಿಗೆ ಬೃಹತ್‌ ಹೋರಾಟಕ್ಕೆ ಮುಂದಾಗಿವೆ.

ಕಾರ್ಮಿಕ ಮತ್ತು ರೈತ ವಿರೋಧಿ ಹೊಸ ಕಾರ್ಮಿಕ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಕೃಷಿ ಕ್ಷೇತ್ರಕ್ಕೆ ತೆರೆದುಕೊಳ್ಳುವ ಮೂರು ಹೊಸ ಕೃಷಿ ಸಂಬಂಧಿತ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ನವೆಂಬರ್ 26ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ದೆಹಲಿಗೆ ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧರಿಸಿವೆ.

“ಅಚ್ಚೇ ದಿನ್‌ (ಸಂತೋಷದ ದಿನಗಳು) ಎಲ್ಲಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮನ್ನು ನರಕಕ್ಕೆ ತಳ್ಳಿದೆ.” ಪ್ರಧಾನಿ ಮೋದಿಯವರು ನೀಡಿದ್ದ ಭರವಸೆಗಳನ್ನು ಅವರು ಮರೆತಿದ್ದಾರೆ. ಅವರಿಗೆ ಅವರ ಮಾತುಗಳನ್ನು ನೆನಪಿಸುವ ಅಗತ್ಯವಿದೆ” ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ, ಪ್ರತಿಭಟನೆಯನ್ನು ಎದುರು ನೋಡುತ್ತಿರುವ ಗಾಜಿಯಾಬಾದ್‌ ಕೈಗಾರಿಕಾ ಪ್ರದೇಶದ ಕಾರ್ಮಿಕ ಸುಖದೇಖ್‌ ಪ್ರಸಾದ್‌ ಹೇಳಿದ್ದಾರೆ.

“ನಾವು ಬದುಕುವುದೇ ಕಷ್ಟವಾಗಿದೆ. ಒಂದೆಡೆ ಬೆಲೆ ಏರಿಕೆ ಮತ್ತು ಇನ್ನೊಂದೆಡೆ ಕಡಿಮೆ ವೇತನ. ಇಂತಹ ಕಷ್ಟದ ನಡುವೆಯೂ ಅವರು ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದ್ದಾರೆ. ಇದರಿಂದ ಉದ್ಯೋಗದಾತರು ನಮ್ಮ ಎದೆಯ ಮೇಲೆ ಕುಳಿತುಕೊಳ್ಳುತ್ತಾರೆ” ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಗೆ ಹೋಗುವ ರಸ್ತೆಗಳನ್ನು ತಡೆಯಲು ರೈತರು ಸಿದ್ಧರಾಗಿದ್ದಾರೆ

ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಪ್ರಕಾರ, ನೆರೆಯ ರಾಜ್ಯಗಳ ರೈತರು ವಿವಿಧ ಸ್ಥಳಗಳಿಂದ ದೆಹಲಿಗೆ ಪ್ರತಿಭಟನಾ ರ್ಯಾರಿ ಮಾಡಲು ಯೋಜಿಸುತ್ತಿದ್ದಾರೆ. ಸರ್ಕಾರಗಳು ತಮ್ಮ ನೀತಿಗಳನ್ನು ಹಿಂಪಡೆದುಕೊಳ್ಳುವವರೆಗೂ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿವೆ.

“ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಎರಡು ಲಕ್ಷ ರೈತರು ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿದ್ದಾರೆ. ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು. ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು ಎಂದು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಟ್ಟಿವೆ.

ಮೋದಿ ಸರ್ಕಾರ ನಮ್ಮ ಮಾತುಗಳನ್ನು ಆಲಿಸುತ್ತಿಲ್ಲ. ಹಾಗಾಗಿ ಪ್ರತಿಭಟನೆಯ ಸಮಯ ಮುಗಿದಿದೆ. ಬೀದಿಗಿಳಿದು ಬೃಹತ್‌ ಹೋರಾಟ/ಚಳುವಳಿ ನಡೆಸುವ ಕಾಲ ಬಂದಿದೆ. ರೈತರು ಬೀದಿಗಳಿಯಲಿದ್ದಾರೆ.

ರೈತರ ಪ್ರತಿಭಟನೆಯನ್ನು ಸರ್ಕಾರ ದಾರಿಮಧ್ಯೆ ತಡೆಯಲು ಮುಂದಾದಲ್ಲಿ, ರಾಜಧಾನಿಯ ಎಲ್ಲಾ ರಸ್ತೆಗಳನ್ನು ಅನಿರ್ದಿಷ್ಟವಾಗಿ ಬಂದ್‌ ಮಾಡಲಾಗುತ್ತದೆ ಎಂದು ಎಐಕೆಎಸ್‌ಸಿಸಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಹೇಳಿದರು.

26ರಂದು ಕೈಗಾರಿಕಾ ಕ್ಷೇತ್ರದ ಕಾರ್ಮಿಕರ ಬೃಹತ್ ಮುಷ್ಕರ

ಅಕ್ಟೋಬರ್ ಆರಂಭದಲ್ಲಿ, ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶವು ಮುಷ್ಕರಕ್ಕೆ ಕರೆ ನೀಡಿತ್ತು. ಆ ಸಂದರ್ಭದಲ್ಲಿ ಎರಡು ಕೋಟಿ (20 ಮಿಲಿಯನ್) ಕಾರ್ಮಿಕರು ಆನ್‌ಲೈನ್‌ನಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಈಗ ಬೀದಿಗಿಳಿದು ಮುಷ್ಕರ ನಡೆಸಲು ಕಾರ್ಮಿಕರು ಸಜ್ಜಾಗಿದ್ದಾರೆ.

ಕಾರ್ಮಿಕ ಸಂಘಗಳು, ದೊಡ್ಡ ಮತ್ತು ಸಣ್ಣ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ದೇಶಾದ್ಯಂತ ಪ್ರಚಾರ ನಡೆಸುತ್ತಿವೆ. ಉಕ್ಕು, ಕಲ್ಲಿದ್ದಲು, ಬಂದರು ಮತ್ತು ಡಾಕ್, ಟೆಲಿಕಾಂ, ತೋಟ, ಸಾರಿಗೆ, ನಿರ್ಮಾಣ, ಬ್ಯಾಂಕಿಂಗ್, ವಿಮೆ, ವಿದ್ಯುತ್ ಸೇರಿದಂತೆ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಮಿಕರು ಮತ್ತು ನೌಕರರ ವೇತನವನ್ನು ಹೆಚ್ಚಿಸಲು ನಿರಾಕರಿಸುವುದು, ಉದ್ಯೋಗಿಗಳ ಒಪ್ಪಂದವನ್ನು ಹೆಚ್ಚಿಸುವುದು, ರಕ್ಷಣಾತ್ಮಕ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವುದು ಮತ್ತು ರದ್ದುಗೊಳಿಸುವುದು, ಬೆಲೆ ಏರಿಕೆ, ನಿರುದ್ಯೋಗ ಪ್ರಮಾಣ ಹೆಚ್ಚಳ, ದೇಶದ ಸಂಪನ್ಮೂಲಗಳನ್ನು (ನೈಸರ್ಗಿಕ ಮತ್ತು ಕೈಗಾರಿಕಾ ಎರಡೂ) ವಿದೇಶೀಯಕ್ಕೆ ಬಂಡವಳಿಗರಿಗೆ ಮಾರಾಟ ಮಾಡುವುದುನ್ನು ವಿರೋಧಿಶಿ ಮುಷ್ಕರ ನಡೆಯಲಿದೆ.


ಇದನ್ನೂ ಓದಿ: ಕರ್ನಾಟಕದ ಕಾರ್ಮಿಕರು ಮತ್ತು ಜಪಾನ್‌ ಕಂಪನಿಯ ನಡುವೆ ತಿಕ್ಕಾಟ: ಟೊಯೋಟಾದವರ ಮಾಡುತ್ತಿರುವುದೇನು?

Spread the love

Leave a Reply

Your email address will not be published. Required fields are marked *