ನಾಳೆನೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂದು ಆಗ್ರಹಿಸಿದ ರಮೇಶ್ ಜಾರಕಿಹೊಳಿ..!

ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲ ಮೂಡಿಸಿದ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ನಾಳೆನೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಹೌದು… ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ರಮೇಶ್, ನಾಳೆನೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂದು ಆಗ್ರಹ ಮಾಡಿದ್ದಾರೆ. ಜನವರಿ 14ರವೆರೆಗೆ ಸಚಿವ ಸಂಪುಟ ವಿಸ್ತರಣೆ ಮಾತುಕತೆ ಮುಂದೂಡಲಾಗಿದೆ ಎನ್ಎಂನಲಾಗುತ್ತಿದೆ. ಆದರೆ ನಾಳೆನೇ ಸಚಿವ ಸಂಪುಟ ವಿಸ್ತರಣೆ ಆಗಲಿಎಂದು ಸಚಿವ ಆಗ್ರಹಿಸಿದ್ದಾರೆ.

ವರಿಷ್ಠರ ಹೇಳಿಕೆ ನಾನು ಬದ್ಧನಾಗಿದ್ದೇನೆ. ಆದರೂ ಆದಷ್ಟು ಬೇಗ ಈ ಕೆಲಸವಾಗಬೇಕಿದೆ. ತಡ ಮಾಡುವುದು ಬೇಡ ಎಂದು ಹೇಳಿದ್ದಾರೆ.

ಇನ್ನೂ ಸಚಿವ ಸ್ಥಾನಕ್ಕಾಗಿ ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರ ನಡುವೆ ಪೈಪೋಟಿ ನಡೆದಿದೆ. ಹೈಕಮಾಂಡ ಮಟ್ಟದಲ್ಲಿ ಲಾಬಿ ಕೂಡ ನಡೆದಿದೆ. ಇದರಿಂದ ಬಿಜೆಪಿ ವಯಲದಲ್ಲಿ ಅಸಮಧಾನದ ಹೊಗೆ ಆಡುತ್ತಿದೆ. ಆದರೆ ಈವರೆಗೆ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿಲ್ಲ. ಹೈಕಮಾಂಡ್ ಇನ್ನೂ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ ಸಚಿವಾಕಾಂಕ್ಷಿಗಳು ಮೂದಿ ಮುಚ್ಚಿದ ಕೆಂಡಂದಂತೆ ಸಚಿವ ಸ್ಥಾನಕ್ಕಾಗಿ ಕಾದು ಕುಳಿತ್ತಿದ್ದಾರೆ. ಖಾಲಿ ಇರುವ ಕೆಲವೇ ಸಚಿವ ಸ್ಥಾನಕ್ಕೆ ವಲಸಿಗ ಹಾಗೂ ಮೂಲ ಬಿಜೆಪಿಗರ ಮಧ್ಯೆ ಪೈಪೋಟಿ ನಡೆದಿದೆ. ಕೆಲವರಿಗೆ ಸಚಿವ ಸ್ಥಾನ ಪಕ್ಕಾ ಆದರೂ ಇನ್ನೂ ಕೆಲವರಿಗೆ ಕೈತಪ್ಪುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ನೀಡಲು ಅಸ್ತು ಎನ್ನುತ್ತೋ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights