ಫ್ಯಾಕ್ಟ್‌ಚೆಕ್: ಗಣರಾಜ್ಯೋತ್ಸವದಂದು ಬಿಹಾರದಲ್ಲಿ ಪಾಕ್ ಧ್ವಜವನ್ನು ಹಾರಿಸಿದ್ದು ನಿಜವೇ?

ಗಣರಾಜ್ಯೋತ್ಸವದಂದು ಬಿಹಾರದ ಪುರ್ನಿಯಾ ಎಂಬ ಜಿಲ್ಲೆಯ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಹಲವು ಮುಖ್ಯ ವಾಹಿನಿ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಿದ್ದವು, ಘಟನೆಯಿಂದ ಸ್ಥಳೀಯರಲ್ಲಿ ಅಶಾಂತಿ ಸೃಷ್ಟಿಯಾಗಿದ್ದು ತಕ್ಷಣ ಬಿಹಾರ ಪೊಲೀಸರು ಧ್ವಜವನ್ನು ತೆಗೆದುಹಾಕಿದ್ದಾರೆ ಎಂದು ಉಲ್ಲೇಖೀಸಿ ವರದಿಯನ್ನು ಪ್ರಸಾರ ಮಾಡಿವೆ.

ಬಿಹಾರದ ಪುರ್ನಿಯಾದಲ್ಲಿ ಮನೆಯೊಂದರ ಮೇಲ್ಛಾವಣಿಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಅಪರಿಚಿತ ವ್ಯಕ್ತಿಗಳು ಹಾರಿಸಿದ್ದಾರೆ ಎಂದು ಹೇಳುವ ಮೂಲಕ ಪೋಲೀಸರೊಬ್ಬರು ಧ್ವಜವನ್ನು ಕೆಳಗಿಳಿಸುತ್ತಿರುವ ವೀಡಿಯೊವನ್ನು ನ್ಯೂ ಇಂಡಿಯನ್ ಹಂಚಿಕೊಂಡಿದೆ.

ಇಂಡಿಯಾ ಟಿವಿ, ಸಿಎನ್‌ಎನ್ ನ್ಯೂಸ್ 18, ಭಾಸ್ಕರ್, ಅಮರ್ ಉಜಾಲಾ, ಲೈವ್ ಹಿಂದೂಸ್ತಾನ್, ನವಭಾರತ್ ಟೈಮ್ಸ್, ಫ್ರೀ ಪ್ರೆಸ್ ಜರ್ನಲ್ ಸೇರಿದಂತೆ ಸುದ್ದಿವಾಹಿನಿಗಳು ಘಟನೆಯನ್ನು ವರದಿ ಮಾಡಿದ್ದು “ಪಾಕಿಸ್ತಾನ ಧ್ವಜ” ಹಾರಿಸಿದ ನಂತರ ಬಿಹಾರ ಪೊಲೀಸರು ಅದನ್ನು ತೆಗೆದುಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಾಗಿದ್ದರೆ ಈ ಮುಖ್ಯವಾಹಿನಿ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿದ ವರದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಮುಖ್ಯ ವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಬಿಹಾರದ ಪುರ್ನಿಯಾ ಎಂಬ ಜಿಲ್ಲೆಯ ಮನೆಯೊಂದರ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆಯೇ ಎಂದು ಪರಿಶೀಲಿಸಿದಾಗ, ಟೈಮ್ಸ್​ ಆಫ್ ಇಂಡಿಯಾ ವರದಿ ಲಭ್ಯವಾಗಿದೆ.

ವರದಿಯ ಪ್ರಕಾರ, ‘ಘಟನೆ ನಡೆದಿದೆ ಎನ್ನಲಾದ ಅಲ್ಲಿಯ ಸ್ಥಳೀಯ ಮಸೀದಿಯ ಪಕ್ಕದಲ್ಲಿರುವ ಮೊಹಮ್ಮದ್ ಮುಬಾರಕುದ್ದೀನ್ ಒಡೆತನದ ಮನೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಲಾಗಿದೆ’. ಹಾಗೂ ಪೊಲೀಸರ ಬಳಿಯೂ ಈ ಬಗ್ಗೆ ವಿಚಾರಿಸಲಾಗಿದ್ದು ಪೊಲೀಸರು ಘಟನೆ ನಡೆದಿದೆ ಎಂಬ ಆರೋಪವನ್ನೇ ತಳ್ಳಿ ಹಾಕಿದ್ದಾರೆ. ಹಲವಾರು ಮಾಧ್ಯಮಗಳು ವರದಿ ಮಾಡಿದಂತೆ ಅಂತಹ ಯಾವುದೇ ಧ್ವಜವನ್ನು ಹಾರಿಸಲಾಗಿಲ್ಲ ಎಂದು ಹೇಳಿದ್ದಾರೆ.

ಧ್ವಜವು ಧಾರ್ಮಿಕವಾಗಿದೆ ಮತ್ತು ಸುಮಾರು ಒಂದು ತಿಂಗಳ ಹಿಂದೆಯೇ ಮನೆ ಮೇಲೆ ಹಾರಿಸಲಾಗಿತ್ತು ಎಂದು ಪೊಲೀಸರು ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಬಳಿಕ ಪೂರ್ನಿಯಾ ಜಿಲ್ಲೆಯ SDPO ಸುರೇಂದ್ರ ಕುಮಾರ್ ಸರೋಜ್ ಅವರನ್ನು ಭೇಟಿ ಮಾಡಿದ್ದು ವಿಡಿಯೋದಲ್ಲಿ ಹಾರಿಸಲಾಗಿದೆ ಎನ್ನುವ ಧ್ವಜವು ಯಾವುದೇ ದೇಶದ ರಾಷ್ಟ್ರಧ್ವಜವನ್ನು ಹೋಲುವಂತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಅದು ಪಾಕಿಸ್ತಾನದ ಧ್ವಜವಲ್ಲ ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ. ವಿಡಿಯೋದಲ್ಲಿರುವ ಧ್ವಜವು ಬಿಳಿ ಹಾಗೂ ಕಪ್ಪು ಬಣ್ಣದ ಬಾರ್ಡರ್​ ಹೊಂದಿದೆ. ಆದ್ರೆ ಈ ವಿನ್ಯಾಸ ಪಾಕಿಸ್ತಾನದ ಧ್ವಜದಲ್ಲಿಲ್ಲ. ಬಳಿಕ ಮತ್ತಷ್ಟು ಮಾಹಿತಿ ಕಲೆಹಾಕಿ, ಸುದ್ದಿ ಮಾಧ್ಯಮದ ವರದಿಗಾರರ ಬಳಿ ಘಟನೆಯ ಪರಿಶೀಲನೆ ಮಾಡಲಾಗಿದೆ.

ಬಿಹಾರದ ಪೂರ್ನಿಯಾದ ಮನೆಯ ಮೇಲೆ ಹಾರಿಸಲಾದ ಧ್ವಜದ ಮೂಲ ಚಿತ್ರವನ್ನು ಸಂಗ್ರಹಿಸಿ ಅದನ್ನು ಪಾಕಿಸ್ತಾನದ ಧ್ವಜದೊಂದಿಗೆ ಹೋಲಿಕೆ ಮಾಡಲಾಗಿದೆ. ಬಳಿಕ ಧ್ವಜವು ಇಸ್ಲಾಮಿಕ್ ಧಾರ್ಮಿಕ ಪಂಗಡಕ್ಕೆ ಸೇರಿದ್ದು ಪಾಕಿಸ್ತಾನದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಈ ಧ್ವಜವು ಇಸ್ಲಾಮಿಕ್ ಸಂಘಟನೆಯಾದ ದಾವತ್-ಎ-ಇಸ್ಲಾಮಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ಪೂರ್ನಿಯಾದ ಮನೆಯ ಮೇಲೆ ಹಾರಿಸಲಾದ ಧ್ವಜ ಇಸ್ಲಾಮಿಕ್ ಧಾರ್ಮಿಕ ಪಂಗಡಕ್ಕೆ ಸೇರಿದ್ದು, ಆದರೆ ಮುಖ್ಯವಾಹಿನಿ ಮಾಧ್ಯಮಗಳು ಈ ಘಟನೆಯನ್ನು ತಿರುಚಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪ್ರಸಾರ ಮಾಡಲಾಗಿದೆ. ಹಾಗಾಗಿ ಇಂಡಿಯಾ ಟಿವಿ, ಸಿಎನ್‌ಎನ್ ನ್ಯೂಸ್ 18, ಭಾಸ್ಕರ್, ಅಮರ್ ಉಜಾಲಾ, ಲೈವ್ ಹಿಂದೂಸ್ತಾನ್, ನವಭಾರತ್ ಟೈಮ್ಸ್, ಫ್ರೀ ಪ್ರೆಸ್ ಜರ್ನಲ್ ಸೇರಿದಂತೆ ರಾಷ್ಟ್ರೀಯ ಮುಖ್ಯ ವಾಹಿನಿ ಮಾಧ್ಯಮ ಔಟ್‌ಲೆಟ್‌ಗಳು ಪ್ರಸಾರ ಮಾಡಿದ ಸುದ್ದಿ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights