ಫ್ಯಾಕ್ಟ್‌ಚೆಕ್: ಬಾಲಿವುಡ್ ನಟ ರಣಬೀರ್ ಕಪೂರ್ ಅಭಿಮಾನಿಯ ಮೊಬೈಲ್‌ ಕಿತ್ತೆಸೆದ ದೃಶ್ಯದ ಹಿಂದಿರುವ ಸತ್ಯ ಏನು ಗೊತ್ತೆ?

ಬಾಲಿವುಡ್‌ನ ಸ್ಟಾರ್‌ ನಟ ರಣಬೀರ್‌ ಕಪೂರ್‌ ಅಭಿಮಾನಿಯೊಬ್ಬರ ಮೊಬೈಲ್‌ ಫೋನ್‌ ಕಿತ್ತೆಸೆಯುವ ಮೂಲಕ ಸುದ್ದಿಯಾಗಿದ್ದಾರೆ. ಅಭಿಮಾನಿಯೊಂದಿಗೆ ರಣಬೀರ್‌ ಕಪೂರ್‌  ಸಿಟ್ಟಿನಿಂದ ವರ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಧಿಮಾಕಿನ ವ್ಯಕ್ತಿ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ನಟ ರಣಬೀರ್​ ಕಪೂರ್​ (Ranbir Kapoor) ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಾರೆ. ನೆಚ್ಚಿನ ನಟನ ಜೊತೆ ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಎಂಬುದು ಫ್ಯಾನ್ಸ್​  ಬಯಕೆ. ಆದರೆ ಎಲ್ಲರ ಕೈಗೂ ರಣಬೀರ್​ ಕಪೂರ್​ ಸಿಗುವುದಿಲ್ಲ. ಅಪರೂಪಕ್ಕೆ ಸಿಕ್ಕರೆ ಆ ಚಾನ್ಸ್​ ಯಾರೂ ಬಿಡಲ್ಲ. ಆದರೆ ಈ ರೀತಿ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರ ಜೊತೆ ರಣಬೀರ್​ ಕಪೂರ್ (Ranbir Kapoor)​ ಅವರು ಕೆಟ್ಟದಾಗಿ ವರ್ತಿಸಿದ್ದಾರೆ. ಅಭಿಮಾನಿಯ ಮೊಬೈಲ್​ ಫೋನ್​ ಕಿತ್ತುಕೊಂಡು ಎಸೆದಿದ್ದಾರೆ. ಈ ವಿಡಿಯೋ  ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

 

View this post on Instagram

 

A post shared by Ranbir Kapoor (@ranbir__kapoor82)

ಬಾಲಿವುಡ್ ನಟ ರಣಬೀರ್ ಕಪೂರ್  ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ ಫೋನ್ ಕಿತ್ತೆಸೆದಿದ್ದಾರೆ ಎಂದು ಹಲವು ಮುಖ್ಯವಾಹಿನಿ ಮಾಧ್ಯಮಗಳು ಇದೆ ರೀತಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ, ರಣಬೀರ್ ಕಪೂರ್  ಅಭಿಮಾನಿಯೊಂದಿಗೆ ನಿಜವಾಗಿಯೂ ಈ ರೀತಿ ವರ್ತಿಸಿದ್ದರೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ರಣಬೀರ್ ಕಪೂರ್ ಅಭಿಮಾನಿಯೊಂದಿಗೆ ನಡೆದುಕೊಂಡ ರೀತಿಗೆ ವ್ಯಕ್ತವಾದ ವಿರೋಧಗಳ ಹಿನ್ನಲೆಯಲ್ಲಿ ಘಟನೆಯನ್ನು ಪರಿಶೀಲಿಸಿದಾಗ, ರಣಬೀರ್​ ಕಪೂರ್ ಅವರ ಈ ವೈರಲ್ ವಿಡಿಯೋದ ಹಿಂದೆ ಮೊಬೈಲ್ ಕಂಪನಿಯ ಪ್ರಚಾರದ ಗಿಮಿಕ್​ ಅಡಗಿತ್ತು ಎಂದು ತಿಳಿದು ಬಂದಿದೆ.

ವೈರಲ್ ಕ್ಲಿಪ್ ರಣಬೀರ್ ಅವರ ಜಾಹೀರಾತುಗಳಲ್ಲಿ ಒಂದಾಗಿತ್ತು ಎಂದು ತಿಳಿದುಬಂದಿದೆ. ನಟ ರಣಬೀರ್ ಮತ್ತೊಬ್ಬ ಯುವ ನಟನೊಂದಿಗೆ ಫೋನ್ ಜಾಹೀರಾತಿಗಾಗಿ ಚಿತ್ರೀಕರಣ ಮಾಡುತ್ತಿದ್ದಾಗ ಯಾರೋ ವಿಡಿಯೋ ಮಾಡಿ ಇಂಟರ್ನೆಟ್‌ನಲ್ಲಿ ವೈರಲ್ ಮಾಡಿದ್ದಾರೆ. ನಟ ರಣಬೀರ್ ಕಪೂರ್ ಪ್ರಚಾರ  ಮಾಡುತ್ತಿರುವ ಬ್ರ್ಯಾಂಡ್‌ಗೆ ಹೈಪ್ ನೀಡಲು ವೀಡಿಯೊವನ್ನು ಉದ್ದೇಶಪೂರ್ವಕವಾಗಿ ವೈರಲ್ ಮಾಡಲು ಮಾಡಲಾಗಿದೆಯೇ ಅಥವಾ ಅದನ್ನು ನೆಟಿಜನ್‌ಗಳು ಆಕಸ್ಮಿಕವಾಗಿ ಆಯ್ಕೆ ಮಾಡಿದ್ದಾರೆಯೇ ಎಂಬುದು ತಿಳಿದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ರಣಬೀರ್  ಯಾರೊಂದಿಗೂ ಅಸಭ್ಯವಾಗಿ ವರ್ತಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಮೊಬೈಲ್ ಕಂಪನಿಯ ಹೊಸ ಫೋನ್‌ನ ಪ್ರಚಾರದ ಹಿನ್ನಲೆಯಲ್ಲಿ ಚಿತ್ರೀಕರಿಸಲಾದ ದೃಶ್ಯಗಳ ತುಣುಕು. ಇದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಬಾಲಿವುಡ್ ನಟ ರಣಬೀರ್ ಕಪೂರ್ ಅಭಿಮಾನಿಯೊಂದಿಗೆ ಕೋಪದಿಂದ ವರ್ತಿಸಿ ಮೊಬೈಲ್ ಫೋನ್‌ಅನ್ನು ಕಿತ್ತೆಸಿದಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ.ಕಾಂ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights