ಫ್ಯಾಕ್ಟ್‌ಚೆಕ್ : ಮನುಷ್ಯನ ಹಲ್ಲಿನ ಒಸಡಿನಲ್ಲಿ ಜೇಡದ ಮೊಟ್ಟೆ ಪತ್ತೆಯಾಗಿದೆ ಎಂಬ ಸುದ್ದಿ ನಿಜವೇ?

ಪಾಳು ಬಿದ್ದ ಮನೆಗಳಲ್ಲಿ ಅಥಾವ ನಿಯಮಿತವಾಗಿ ದೂಳನ್ನು ಸ್ವಚ್ಚ ಮಾಡದೆ ಇರುವ ಜಾಗಗಳಲ್ಲಿ ಜೇಡ ಬಲೆ ಕಟ್ಟುವುದನ್ನು ನೋಡಿದ್ದೇವೆ. ಕೆಲವು ಸಲ ಜೇಡ ಗೂಡು ಮಾಡಿಕೊಂಡು ಮೊಟ್ಟೆಯನ್ನು ಇಡುತ್ತವೆ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದ್ದು ಮನುಷ್ಯನ ಹಲ್ಲಿನ ಕೆಳಗಿನ ಒಸಡಿನಲ್ಲಿ ಜೇಡ ಮೊಟ್ಟೆ ಇಟ್ಟಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ.

“ಒಸಡಿನ ನೋವು ಎಂದು ಮುಂಬೈನ ದಂತ ಚಿಕಿತ್ಸಾಲಯಕ್ಕೆ ಗೌತಮ್ ಅಗರ್ವಾಲ್ ಎಂಬ ವ್ಯಕ್ತಿಯು ಬೇಟಿ ನೀಡಿದಾಗ, ಅವರ ಬಾಯಿ ಮತ್ತು ಹಿಮ್ಮಡಿಯಲ್ಲಿ ಜೇಡವೊಂದರ ಮೊಟ್ಟೆಗಳು ಪತ್ತೆಯಾಗಿವೆ. ಸಧ್ಯ ಶಸ್ತ್ರ ಚಿಕಿತ್ಸೆ ನಡೆಸಿದ ಡಾಕ್ಟ್‌ರ್‌ಗಳು ಅವುಗಳನ್ನು ಹೊರತೆಗೆದಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋ ಒಂದನ್ನು ಸುದೀಂದ್ರ ಎಕ್ಸ್ಪೋರರ್(Explorer) ಎಂಬುವವರು ತಮ್ಮ ಯೂಟೂಬ್ ಮತ್ತು ಪೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು 41 ಸಾವಿರ ಜನ ವೀಕ್ಷಿಸಿದ್ದಾರೆ ಮತ್ತು 11 ಸಾವಿರ ಜನ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್‌: 

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಿದಾಗ, ಪ್ರಸ್ತುತ ಇಂತಹ ಯಾವುದೇ ಪ್ರಕರಣ ಭಾರತದಲ್ಲಿ ವರದಿಯಾಗಿಲ್ಲ. ಈ ಸುದ್ದಿ 28 ನವೆಂಬರ್ 2023ರ ಬಿಬಿಸಿ ಮಾಡಿದ ವರದಿಯನ್ನು ಆಧಾರಿಸಿ ಹಂಚಿಕೊಳ್ಳಲಾಗುತ್ತಿದೆ. ಕಾಲಿನ್ ಬ್ಲೇಕ್ ಎಂಬ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರು ತನ್ನ 35 ನೇ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಫ್ರಾನ್ಸ್‌ನಲ್ಲಿ ಇದ್ದ ಸಂದರ್ಭದಲ್ಲಿ ಅವರ ಕಾಲ್ಬೆರಳು ರಾತ್ರೋರಾತ್ರಿ ನೇರಳೆ ಬಣ್ಣಕ್ಕೆ ತಿರುಗಿದೆ. ಹಡಗಿನಲ್ಲಿ ಸಂಚರಿಸುತ್ತಿದ್ದ ಅವರು, ಹಡಗಿನ ವೈದ್ಯರನ್ನು ಭೇಟಿಯಾಗಿ ತೊರಿಸಲಾಗಿ ತೋಳದ ಜೇಡ(wolf spider) ಕಡಿತದಿಂದ ಊತ ಉಂಟಾಗಿದೆ ಎಂದಿದ್ದಾರೆ.

ನಂತರ ಬೆರಳಿನಿಂದ ಕೀವು ಸೋರುವಾಗ ಜೇಡದ ಮೊಟ್ಟೆಗಳು ಹೊರಬಂದಿವೆ ಎಂದು ಕಾಲಿನ್‌ರವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಟೈಮ್ಸ್‌ ಆಫ್ ಇಂಡಿಯಾಡೆಕ್ಕನ್ ಹೆರಾಲ್ಡ್‌ಬಿಸಿನೆಸ್ ಇಂಸೈಡರ್NDTV ಮತ್ತು ಹಿಂದುಸ್ತಾನ್ ಟೈಮ್ಸ್‌ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ.ಆದರೆ ತೋಳ ಜೇಡಗಳು ಮಾನವರೊಳಗೆ ಮೊಟ್ಟೆಗಳನ್ನು ಇಡಲು ಅಸಮರ್ಥವಾಗಿವೆ ಎಂದು ಅನೇಕ ಜೇಡಗಳ ಅಧ್ಯಾಯನಕಾರರು ಮತ್ತು ಅರಾಕ್ನಾಲಜಿಸ್ಟ್ ಸ್ಪಷ್ಟನೆ ನೀಡಿದ್ದಾರೆ ಎಂದು  ಬಿಬಿಸಿಯೇ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಪ್ರತಿಕ್ರಯಿಸಿರುವ ನ್ಯೂಜಿಲೆಂಡ್‌ ಜೇಡ ತಜ್ಞೆ, ಆಕ್ಲೆಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಉಪನ್ಯಾಸಕಿ ಡಾ. ಲೈಲಾನಿ ವಾಕರ್ (Dr. Leilani Walker) “ಈ ಕಥೆ ತಪ್ಪು ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಈ ರೀತಿಯ ಪರಾವಲಂಬಿ ಜೇಡವಿಲ್ಲ. ಜೀವಂತ ಅಂಗಾಂಶದಲ್ಲಿ ಮೊಟ್ಟೆಗಳನ್ನು ಇಡುವ ಪ್ರಾಣಿಗಳಿವೆಯೇ?. ಈ ಜೇಡಗಳಲ್ಲಿ ಯಾವುದಾದರೂ ಇದೆಯೇ? ಖಂಡಿತವಾಗಿಯೂ ಇಲ್ಲ.” ಎಂದಿದ್ದಾರೆ.ಜೇಡಗಳಿಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಹರಿದಾಡುತ್ತಿರುವ ಸುಳ್ಳು ಮಾಹಿತಿಗಳ ಕುರಿತು ವೈಕಾಟೊ ವಿಶ್ವವಿದ್ಯಾಯಲವು ಸಂಶೋಧನೆಯೊಂದನ್ನು ನಡೆಸಿದ್ದು, ವಿಶ್ವದಾದ್ಯಂತ ಮಾನವ-ಜೇಡ ಮುಖಾಮುಖಿಗಳ ಬಗ್ಗೆ 81 ದೇಶಗಳಿಂದ 5000 ಕ್ಕೂ ಹೆಚ್ಚು ಆನ್ಲೈನ್ ಸುದ್ದಿಗಳನ್ನು ವಿಶ್ಲೇಷಿಸಿ, ಅಂತರರಾಷ್ಟ್ರೀಯ ತಜ್ಞರ ತಂಡವೊಂದು ಈ ಪ್ರಬಂಧವನ್ನು ಮಂಡಿಸಿದ್ದಾರೆ.ಮತ್ತೊಬ್ಬ ಜೇಡಗಳ ತಜ್ಞ ಫಿಲ್ ಸಿರ್ವಿಡ್ ಜೇಡ ಕಡಿತದ ಬಗ್ಗೆ ಜನರಿಗಿರುವ ಭಯವನ್ನು ಹೋಗಲಾಡಿಸಲು “ವಿಶ್ವಾದ್ಯಂತ ತಿಳಿದಿರುವ 50,000 ಅಥವಾ ಅದಕ್ಕಿಂತ ಹೆಚ್ಚಿನ ಪ್ರಭೇದಗಳಲ್ಲಿ, ಕೆಲವೇ ಸಂಖ್ಯೆಯ – ಸುಮಾರು 30 – ಬಗೆಯ ಜೇಡಗಳು ಮಾತ್ರ ಜನರಿಗೆ ಅಪಾಯಕಾರಿ. ನಾವು ನಿಜವಾಗಿಯೂ ಇಲ್ಲಿ ಹೆಚ್ಚು ಚಿಂತಿಸಬೇಕಾಗಿಲ್ಲ. ನ್ಯೂಜಿಲೆಂಡ್‌ನಲ್ಲಿ ಕಂಡುಬರುವ 1100 ಕ್ಕೂ ಹೆಚ್ಚು ಜೇಡ ಪ್ರಭೇದಗಳಲ್ಲಿ, ಕ್ಯಾಟಿಪೊ ಮತ್ತು ರೆಡ್ಬ್ಯಾಕ್ ಅತ್ಯಂತ ವೈದ್ಯಕೀಯವಾಗಿ ಮಹತ್ವದ ವಿಷವನ್ನು ಹೊಂದಿವೆ. ಎಂದಿದ್ದಾರೆ. ಆದ್ದರಿಂದ ಜೇಡಗಳ ಕುರಿತು ಸುಳ್ಳು ಮಾಹಿತಿಗಳನ್ನು ನಂಬುವುದಕ್ಕಿಂತ ವೈಜ್ಞಾನಿಕವಾಗಿ ಅವುಗಳ ಸ್ವಾರಸ್ಯಕರ ಬದುಕನ್ನು ಅರಿತರೆ ಈ ಅನಾವಶ್ಯಕ ಭಯವನ್ನು ತೊರೆಯಬಹುದು. ಆದ್ದರಿಂದ ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ,  “ಹಲ್ಲು ನೋವು ಎಂದು ಮುಂಬೈನ ದಂತ ಚಿಕಿತ್ಸಾಲಯಕ್ಕೆ ಗೌತಮ್ ಅಗರ್ವಾಲ್ ಎಂಬ ವ್ಯಕ್ತಿಯು ಭೇಟಿ ನೀಡಿದಾಗ ಬಾಯಿ ಮತ್ತು ಹಿಮ್ಮಡಿಯಲ್ಲಿ ಜೇಡವೊಂದರ ಮೊಟ್ಟೆಗಳು ಪತ್ತೆಯಾಗಿವೆ ಎಂದು ಸುಳ್ಳು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : 2001ರಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿದ್ದ ರಾಹುಲ್ ಗಾಂಧಿಯನ್ನು ಬಿಡಿಸಿದ್ದು ಅಟಲ್ ಬಿಹಾರಿ ವಾಜಪೇಯಿಯಂತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights