ಫ್ಯಾಕ್ಟ್‌ಚೆಕ್ : 2001ರಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿದ್ದ ರಾಹುಲ್ ಗಾಂಧಿಯನ್ನು ಬಿಡಿಸಿದ್ದು ಅಟಲ್ ಬಿಹಾರಿ ವಾಜಪೇಯಿಯಂತೆ?
2001ರಲ್ಲಿ ಅಕ್ರಮ ಹಣ ಸಾಗಾಣೆ ಮತ್ತು ಡ್ರಗ್ಸ್ ಸಾಗಿಸುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು ಎಂದು ಪ್ರತಿಪಾದಿಸಿ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಪತ್ರಿಕಾ ವರದಿಯೊಂದರ ಫೋಟೊ ಕ್ಲಿಪ್ಪಿಂಗ್‌ನಂತೆ ಕಾಣುವ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಭಾರತದ ರಾಜಕಾರಣಿಯನ್ನು ಬಂಧಿಸಲಾಗಿದೆ’ ಎಂಬ ಶೀರ್ಷಿಕೆ ಹೊಂದಿರುವ ಪತ್ರಿಕೆ ಕ್ಲಿಪ್ಪಿಂಗ್, 30 ಸೆಪ್ಟೆಂಬರ್ 2001 ರಂದು ಪ್ರಕಟಗೊಂಡಿದೆ ಎಂದು ಹೇಳಲಾಗಿದೆ.
2001ರಲ್ಲಿ ಅಮೆರಿಕದಲ್ಲಿ 1.60 ಲಕ್ಷ ಅಮೆರಿಕನ್ ಡಾಲರ್ ಮತ್ತು ಮಾದಕ ವಸ್ತುಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ಆರೋಪದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಧಿಕಾರಿಗಳು ಬಂಧಿಸಿದ್ದರು.
ಆ ವೇಳೆ ಸೋನಿಯಾ ಗಾಂಧಿಯವರು ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕರೆ ಮಾಡಿ ಸಹಾಯ ಬೇಡಿದ್ದರು. ಹಾಗೆ ವಾಜಪೇಯಿ ಅವರು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್‌ಗೆ ಕರೆ ಮಾಡಿ ರಾಹುಲ್ ಗಾಂಧಿಯನ್ನು ಬಿಡುಗಡೆಗೊಳಿಸಿದ್ದರು ಎಂದು ಹೇಳುತ್ತಾ ರಾಹುಲ್ ಗಾಂಧಿಯ ಮೂಲ ಚಿತ್ರವನ್ನು ವಿರೋಪಗೊಳಿಸಿ ಬೋಸ್ಟನ್ (ಯುಎಸ್ಎ) ನ ವೃತ್ತ ಪತ್ರಿಕೆ ಕ್ಲಿಪ್ಪಿಂಗ್ ನಲ್ಲಿ ಇದರ ಸುದ್ದಿಯನ್ನು ವರದಿ ಮಾಡಿದ್ದು, ಈಗ ಇಂತಹವರೂ ಕೂಡ ಪ್ರಧಾನಿಯಾಗಲು ಬಯಸುತ್ತಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿ ಕಮಾಧ್ಯಮಗಳಲ್ಲಿ ಹಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ರಾಹುಲ್ ಗಾಂಧಿಯನ್ನು ಸೆಪ್ಟೆಂಬರ್ 2001 ರಲ್ಲಿ ಬೋಸ್ಟನ್ ಲೋಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು ಎಂಬ ವರದಿಯೊಂದು ಲಭ್ಯವಾಗಿದೆ. ಈ ಮಾಹಿತಿಯನ್ನು ವರದಿ ಮಾಡಿ, ‘ದಿ ಹಿಂದೂ’ 30 ಸೆಪ್ಟೆಂಬರ್ 2001 ರಂದು ಲೇಖನವನ್ನು ಪ್ರಕಟಿಸಿತ್ತು.
ಅಮೆರಿಕದಲ್ಲಿ ನಡೆದ ‘9/11’ ಭಯೋತ್ಪಾದಕ ದಾಳಿಯ ನಂತರ ತೆಗೆದುಕೊಂಡ ಭದ್ರತಾ ಕ್ರಮಗಳ ಭಾಗವಾಗಿ ಬಾಸ್ಟನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯನ್ನು ‘ಸುಮಾರು ಒಂದು ಗಂಟೆ’ ಕಾಲ ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದರು. ಸಾಮಾನ್ಯ ವಿಚಾರಣೆಯ ನಂತರ ರಾಹುಲ್ ಗಾಂಧಿಯನ್ನು ತಕ್ಷಣವೇ ಬಿಡುಗಡೆ ಮಾಡಲಾಯಿತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಬೋಸ್ಟನ್ ವಿಮಾನ ನಿಲ್ದಾಣ ಪ್ರಾಧಿಕಾರವು ಡ್ರಗ್ಸ್ ಹೊಂದಿದ್ದ ಅಥವಾ ಲೆಕ್ಕಕ್ಕೆ ಸಿಗದ ಹಣವನ್ನು ಸಾಗಿಸಿದ ಆರೋಪದ ಮೇಲೆ ರಾಹುಲ್ ಗಾಂಧಿಯನ್ನು ಬಂಧಿಸಿರಲಿಲ್ಲ.
ರಾಹುಲ್ ಗಾಂಧಿಯವರನ್ನು ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು ಎಂದು ಎಲ್ಲಿಯೂ ವರದಿಗಳಾಗಿಲ್ಲ, ಆಲ್ಲದೆ ಈ ರೀತಿ ಬಂಧನ ಮಾಡಲಾಗಿದೆ ಎಂದು ಸುಳ್ಳು ಪ್ರಚಾರವನ್ನು ಮಾಡಲು ಪತ್ರಿಕೆಯ ಕ್ಲಿಪ್ಪಿಂಗ್ ಅನ್ನು ಆನ್‌ಲೈನ್ ವೆಬ್‌ಸೈಟ್ ‘fodey.com’ ಬಳಸಿ ರಚಿಸಲಾಗಿದೆ ಎಂದು ಎಎಫ್‌ಪಿ ಸ್ಪಷ್ಟಪಡಿಸಿದೆ. ಈ ಫೇಕ್ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ಕಳೆದ ಮೂರು ನಾಲ್ಕು ರ್ಷಗಳಿಂದ ಪ್ರಸಾರವಾಗುತ್ತಲೇ ಇದೆ.
ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಯನ್ನು ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಲಾಗಿತ್ತೆ?
ಒಟ್ಟಾರೆಯಾಗಿ ಹೇಳುವುದಾದರೆ, ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯನ್ನು ಬಂಧನ ಮಾಡಲಾಗಿತ್ತುಎಂಬ ವರದಿಯ ಪತ್ರಿಕೆಯ ಕ್ಲಿಪ್ಪಿಂಗ್ ಅನ್ನು ಡಿಜಿಟಲ್ ಮೂಲಕ ರಚಿಸಲಾಗಿದೆ, ಆದರೆ ಇದು ನಿಜವಾದ ಪತ್ರಿಕಾ ವರದಿಯಲ್ಲ. ಅಂತಹ ಯಾವ ಬಂಧನವೂ ಆಗಿರಲಿಲ್ಲ, ಬಂಧನವೇ ಆಗಿರಲಿಲ್ಲ ಎಂದ ಮೇಲೆ ಅಟಲ್ ಬಿಹಾರಿ ವಾಜಪೇಯಿ, ರಾಹುಲ್ ಗಾಂಧಿಯನ್ನು ಬಿಡುಗಡೆ ಮಾಡಿಸಲು ಹೇಗೆ ಸಾಧ್ಯ. ಹಾಗಾಗಿ ಇದೆಲ್ಲ ಸುಳ್ಳು ಎಂದು ಸ್ಪಷ್ಟವಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮತ್ತೊಂದು ಸುಳ್ಳು ಹೇಳಿದ ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್