ಫ್ಯಾಕ್ಟ್‌ಚೆಕ್ : ವಿಮಾನದಿಂದ ಸರೆಯಾದ ಚಂದ್ರಯಾನ 3 ರ ದೃಶ್ಯಗಳು ಎಂದು ಹಳೆಯ ವಿಡಿಯೋ ಹಂಚಿಕೆ

ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ‘ಚಂದ್ರಯಾನ-3’ ರಾಕೆಟ್ ಲಾಂಚ್ ಆಗಿತ್ತು. ಹೀಗೆ ಲಾಂಚ್ ಆದ 2 ದಿನಗಳಲ್ಲಿ ಬರೋಬ್ಬರಿ 45 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿದೆ ಚಂದ್ರಯಾನ-3 ಬಾಹ್ಯಾಕಾಶ ನೌಕೆ. ಅಲ್ಲದೆ ನೌಕೆ ಆರೋಗ್ಯ ಚೆನ್ನಾಗಿದ್ದು, ಚಂದ್ರನ ಮೊದಲ ಕಕ್ಷೆಗೂ ಯಶಸ್ವಿಯಾಗಿ ಎಂಟ್ರಿ ಕೊಟ್ಟಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಚಂದ್ರಯಾನ 3 ಬಾಹ್ಯಾಕಾಶಕ್ಕೆ ಹಾರುವಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರಾಕೇಟ್‌ ಹಾರುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ ಎಂದು ವಿಡಿಯೋ ಪೋಸ್ಟ್‌ಅನು ಹಂಚಿಕೊಳ್ಳಲಾಗುತ್ತಿದೆ.

ಚಂದ್ರಯಾನ-3 ರ ಉಡಾವಣೆಯನ್ನು ಪ್ರದರ್ಶಿಸುವ ದೃಶ್ಯಗಳು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರಾಕೆಟ್‌ ಆರುವ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ ಮೂಲಕ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 14 ಜುಲೈ 2023 ರಂದು ಇಸ್ರೋ ಚಂದ್ರಯಾನ-3 ಅನ್ನು ಇತ್ತೀಚೆಗೆ ಉಡಾವಣೆ ಮಾಡಿದ ನಂತರ, ಟ್ವಿಟರ್ ಬಳಕೆದಾರರು ವಿಮಾನದಲ್ಲಿ ಪ್ರಯಾಣಿಸುವಾಗ ಚಿತ್ರೀಕರಿಸಿದ ಚಂದ್ರಯಾನ-3 ಉಡಾವಣೆ ಎಂದು ಹೇಳುವ ನಿಜವಾದ ದೃಶ್ಯಗಳು ಲಭ್ಯವಾಗಿವೆ.

ಇಂಡಿಗೋ ಏರ್‌ಲೈನ್ಸ್ ಚಂದ್ರಯಾನ ಉಡಾವಣೆಯ ದೃಶ್ಯಗಳನ್ನು ಬಿಡುಗಡೆ ಮಾಡಿತು, ಚೆನ್ನೈನಿಂದ ಢಾಕಾಗೆ ವಿಮಾನಯಾನ ಮಾಡುವ ಸಮಯದಲ್ಲಿ ಶ್ರೀ ಪೊನ್‌ರಾಜ್ ಎಂಬ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿವೆ. ವಿವಿಧ ಸುದ್ದಿ ಸಂಸ್ಥೆಗಳು ಈ ಬಗ್ಗೆ ವರದಿ ಮಾಡಿವೆ.

ವಿಡಿಯೋ-1

ಉಳಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಎರಡು ವಿಡಿಯೋ ಚಂದ್ರಯಾನ 3 ಕ್ಕೆ ಸಂಬಂಧಿಸಿಲ್ಲ, ಅವುಗಳಲ್ಲಿ ಒಂದು ವಿಡಿಯೋ ನವೆಂಬರ್ 2022 ರಲ್ಲಿ Intelsat ನ Galaxy 31 ಮತ್ತು Galaxy 32 ಉಪಗ್ರಹಗಳನ್ನು ಹೊತ್ತೊಯ್ಯುವ Space X Falcon 9 ಅನ್ನು ಕೇಪ್ ಕ್ಯಾನವೆರಲ್ ಮೂಲಕ ಉಡಾವಣೆ ಮಾಡುವ ದೃಶ್ಯಗಳು ಎಂದು ವರದಿಯಾಗಿದೆ.

ವಿಡಿಯೋ-2

ಮೇ 2021 ರಲ್ಲಿ ಕೇಪ್ ಕ್ಯಾನವೆರಲ್‌ನಿಂದ ಅಟ್ಲಾಸ್  ರಾಕೆಟ್‌ನ ಉಡಾವಣೆಯ ದೃಶ್ಯಗಳನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರು ಚಿತ್ರೀಕರಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ 2 ಬೇರೆ ಬೇರ ವಿಡಿಯೋವನ್ನು ಪರಿಶೀಲಿಸಿದಾಗ, ಚಂದ್ರಯಾನ 3 ರಾಕೇಟ್‌ಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಚಂದ್ರಯಾನ 3ರ ದೃಶ್ಯಗಳು ಎಂದು ಸಂಬಂಧವಿಲ್ಲದ ಮತ್ತು ಬೇರೆ ಬೇರೆ ಸಂದರ್ಭದ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು: ಫ್ಯಾಕ್ಟ್‌ಚೆಕ್ : ಪ್ರಾನ್ಸ್‌ನಲ್ಲಿ ಜಿಹಾದಿಗಳಿಂದ ದಾಳಿ ಎಂದು ಸಿನಿಮಾ ದೃಶ್ಯಗಳ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights