ಫ್ಯಾಕ್ಟ್‌ಚೆಕ್ : ಪ್ರಾನ್ಸ್‌ನಲ್ಲಿ ಜಿಹಾದಿಗಳಿಂದ ದಾಳಿ ಎಂದು ಸಿನಿಮಾ ದೃಶ್ಯಗಳ ಹಂಚಿಕೆ

ಫ್ರಾನ್ಸ್‌ನಲ್ಲಿ ಬಾಲಕನ ಹತ್ಯೆಯನ್ನು ಖಂಡಿಸಿ ನಡೆದ ಹಿಂಸಾಚಾರದಲ್ಲಿ ಅಪಾರ ಪ್ರಮಾಣದ ಆಸ್ತಿ ಸಂಪತ್ತು ನಾಶವಾಗಿದೆ. ಅಲ್ಲಿಯ ಜಿಹಾದಿಗಳು ಹೇಗೆಲ್ಲ ದಾಳಿ ಮಾಡುತ್ತಿದ್ದಾರೆ ಎಂಬುದಕ್ಕೆ ಈ ದೃಶ್ಯಗಳೇ ಸಾಕ್ಷಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಕಟ್ಟಡವೊಂದರಿಂದ ಹೊರಬೀಳುತ್ತಿರುವ ಕಾರುಗಳು ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಳ್ಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ದಂಗೆಯ ದೃಶ್ಯ ಎಂದೂ ಹೇಳಲಾಗುತ್ತಿದೆ. ‘ಇದು ಯಾವುದೇ ಸಿನಿಮಾದ ದೃಶ್ಯವಲ್ಲ. ಇದು ನಡೆಯುತ್ತಿರುವುದು ಫ್ರಾನ್ಸ್‌ನಲ್ಲಿ. ಶಾಂತಿ ಪ್ರಿಯ ಜಿಹಾದಿಗಳು, ಭಯೋತ್ಪಾದಕರು ಈ ಕೃತ್ಯ ಎಸಗುತ್ತಿದ್ದಾರೆ. ದೇಶದಲ್ಲಿರಲು ಫ್ರಾನ್ಸ್‌ ಸರ್ಕಾರವೇ ಇವರಿಗೆ ಅನುಮತಿ ನೀಡಿದೆ.

ಜಾತ್ಯತೀತ ಹಿಂದೂಗಳೇ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ. ಫ್ರಾನ್ಸ್‌ನಲ್ಲಿ ಬಿಜೆಪಿ ಅಥವಾ ಆರ್‌ಎಸ್‌ಎಸ್‌ನವರು ಪಥಸಂಚಲನ ನಡೆಸುವುದಿಲ್ಲ, ಇಲ್ಲಿ ಶೋಭಾ ಯಾತ್ರೆಯೂ ನಡೆಯುವುದಿಲ್ಲ’ ಎಂಬಂಥ ಸಾಲುಗಳೊಂದಿಗೆ ಈ ವಿಡಿಯೊವನ್ನು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ದೃಶ್ಯಗಳನ್ನು ಪರಿಶೀಲಿಸಲು ಗೂಗ್ ರಿವರ್ಸ್ ಇಮೇಜಸ್‌ನನಲ್ಲಿ ಸರ್ಚ್ ಮಾಡಿದಾಗ, ವಿಡಿಯೊದಲ್ಲಿರುವ ದೃಶ್ಯಗಳು ಹಾಲಿವುಡ್‌ನ ಪ್ರಸಿದ್ಧ ಸಿನಿಮಾ ‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌–8’ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌–8 ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಎಂದು ಚಿತ್ರದ ನಿರ್ಮಾಪಕ ಜಸ್ಟಿನ್‌ ಕಿಂಗ್‌ ಅವರು 2016ರಲ್ಲಿ ಜೂನ್‌ 3ರಂದು ಈ ವಿಡಿಯೊವನ್ನು ಊಹಿಸಿ, ನಿಮಗೆ ಚಿತ್ರೀಕರಣ ನಡೆಯುತ್ತಿರುವುದರ ಬಗ್ಗೆ ಅರಿವಿಲ್ಲ. ಆದರೆ, ತಕ್ಷಣದಲ್ಲಿ ನೀವು ಇದನ್ನು ನೋಡುತ್ತೀರಿ’ ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌–8’ ಸಿನಿಮಾ ಚಿತ್ರೀಕರಣದ ದೃಶ್ಯವನ್ನು, ಫ್ರಾನ್ಸ್‌ನಲ್ಲಿ ಮುಸ್ಲಿಮರಿಂದ ಹಿಂಸಾಚಾರ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ದೈಶ್ಯಕ್ಕೂ ಮುಸ್ಲಿಮರಿಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕ್ ಧ್ವಜ ಹಾರಿಸಿದ್ದಕ್ಕೆ ಮಸೀದಿಯನ್ನು ಕೆಡವಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights