ಫ್ಯಾಕ್ಟ್‌ಚೆಕ್ : ಭೀಕರ ಅಪಘಾತದಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥರಾದ ಮಕ್ಕಳು! ವಾಸ್ತವವೇನು?
ನವಜಾತ ಶಿಶುವನ್ನು ಚಿಕ್ಕ ಹುಡುಗನೊಬ್ಬ ಹಿಡಿದಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು. ಈ ಕಂದಮ್ಮಗಳು ಅಪಘಾತದಲ್ಲಿ ತಮ್ಮ ತಾಯಿ ಮತ್ತು ತಂದೆಯನ್ನು ಕಳೆದುಕೊಂಡು ಅನಾಥವಾಗಿವೆ, ಈ ಮಕ್ಕಳ ವಿಳಾಸವನ್ನು ಪತ್ತೆಹಚ್ಚಲು ಈ ಫೋಟೊವನ್ನು ಹೆಚ್ಚು ಶೇರ್ ಮಾಡಿ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.


“ತಂಬೂರ್ಣಿ ಕರ್ಮಲಾ ಹೆದ್ದಾರಿಯಲ್ಲಿ ಈ ಕುಟುಂಬ ಅಪಘಾತಕ್ಕೀಡಾಗಿದೆ, ತಾಯಿ ಮತ್ತು ತಂದೆ ತೀರಿಕೊಂಡಿದ್ದಾರೆ, ಮಕ್ಕಳಿಗೆ ಮನೆಯ ವಿಳಾಸವನ್ನು ಹೇಳಲಾಗುವುದಿಲ್ಲ, ಆದ್ದರಿಂದ ಸಾಧ್ಯವಾದಷ್ಟು ಜನರಿಗೆ ಸಂದೇಶವನ್ನು ಕಳುಹಿಸಿ. ಈ ಫೋಟೋವನ್ನು ಹಂಚಿಕೊಳ್ಳದ ಯಾರಾದರೂ ಮನುಷ್ಯರೇ ಅಲ್ಲ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಪೋಸ್ಟ್‌ನಲ್ಲಿ ಈ ಘಟನೆ ಎಲ್ಲಿ ಹೇಗೆ ನಡೆದಿದೆ, ಅಪಘಾತದಲ್ಲಿ ಸಾವಿಗೀಡಾದ ತಂದೆ ತಾಯಿಯ ವಿವರ ಯಾವುದನ್ನು ನಮೂದಿಸಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮೇ 28, 2017ರಂದು ಫೇಸ್‌ಬುಕ್‌ನಲ್ಲಿ ಇದೇ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಅದೇ ರೀತಿ 2022ರಲ್ಲಿ ಟ್ವಿಟರ್‌ನಲ್ಲೂ ಇದೇ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
Hya mulachya natevaika paryant massage pathava pleas pic.twitter.com/P1xjhVnprv
— Deepak Shivrudra Zori (@zori_shivrudra) June 14, 2022
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹೇಳಿಕೆಯಲ್ಲಿ ಇರುವ ಘಟನೆಯನ್ನು ಕೀವರ್ಡ್ ಮೂಲಕ ಗೂಗಲ್‌ನಲ್ಲಿ ಸರ್ಚ್ ಮಾಡಿದರೂ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಘಟನೆ ನಡೆದಿರುವ ಯಾವುದೇ ವರದಿಗಳು ಲಭ್ಯವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, “ತಂಬೂರ್ಣಿ ಕರ್ಮಲಾ ಹೆದ್ದಾರಿಯಲ್ಲಿ ಕುಟುಂಬವೊಂದು ಪ್ರಯಾಣಿಸುತ್ತಿದ್ದಾಗ, ಅಪಘಾತ ಸಂಭವಿಸಿ ತಂದೆ ತಾಯಿಯನ್ನು ಕಳೆದುಕೊಂಡು ನವಜಾತ ಶಿಶು ಮತ್ತು ಚಿಕ್ಕ ಮಗು ಅನಾಥವಾಗಿವೆ ಎಂದು ಹೇಳುವಂತಹ ಯಾವುದೇ ಘಟನೆ ನಡೆದ ಬಗ್ಗೆ ಉಲ್ಲೇಖವಾಗಲಿ ವರದಿಗಳಾಗಲಿ ಇಲ್ಲ. ವಾಸ್ತವವಾಗಿ ಈ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಳೆದ 6 (2017) ವರ್ಷಗಳಿಂದ ಇದೇ ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಜನರನ್ನು ದಾರಿತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪಾಕ್ ಧ್ವಜ ಹಾರಿಸಿದ್ದಕ್ಕೆ ಮಸೀದಿಯನ್ನು ಕೆಡವಲಾಗಿದೆ ಎಂಬುದು ಸುಳ್ಳು

