ಕುರುಬರಿಗೆ ಮೀಸಲಾತಿ: ಈಶ್ವರಪ್ಪ v/s ಯಡಿಯೂರಪ್ಪ ಎಂದು ನಡೀತಿದ್ಯಾ ಹೋರಾಟ: ಸಿದ್ದರಾಮಯ್ಯ ಪ್ರಶ್ನೆ

ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೂ, ಕುರುಬರಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಕೊಡಬೇಕು ಎಂದು ಸಚಿವ ಈಶ್ವರಪ್ಪ ಹೋರಾಟ ಮಾಡುತ್ತಿರುವುದೇಕೆ? ಈ ಹೋರಾಟ ಈಶ್ವರಪ್ಪ ವರ್ಸಸ್ ಯಡಿಯೂರಪ್ಪ ಎಂಬಂತೆ ನಡೆಯುತ್ತಿದ್ಯಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಮ್ಮದೆ ಸರ್ಕಾರವಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಮೀಸಲಾತಿ ಕೊಡಿಸುವುದಕ್ಕೆ ಈಶ್ವರಪ್ಪನವರಿಗೆ ಆಗುವುದಿಲ್ಲವೆ? ನಾನು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಜಿಲ್ಲೆಗಳಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಿದ್ದೇನೆ. ಈಶ್ವರಪ್ಪ ಅವರದ್ದೇ ಸರ್ಕಾರವಿದ್ದರೂ ಹೋರಾಟ ನಡೆಸುತ್ತಿದ್ದಾರೆ. ಇದು ಯಾಕೆ? ಎಂದು ಅವರು ಹೇಳಿದ್ದಾರೆ.

‘ಈಗ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇರುವುದರಿಂದಲೇ ನಾನು ವಿರೋಧಿಸುತ್ತಿದ್ದೇನೆ. ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭಿಸಿ ಒಂದು ವರ್ಷವಾದರೂ ಏಕೆ ಪೂರ್ಣವಾಗುತ್ತಿಲ್ಲ. ಈ ಹೋರಾಟದ ಮೂಲಕ ಕುರುಬ ಸಮಾಜ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಮಾಜದ ಮುಖಂಡರಾಗಬೇಕು ಎನ್ನುವ ಸಚಿವ ಈಶ್ವರಪ್ಪ ಕನಸು ಈಡೇರುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ಇದನ್ನೂ ಓದಿ: ಕುರುಬರನ್ನು ಬಿಟ್ಟು ಹಿಂದೂತ್ವವಿಲ್ಲ; ಉಸಿರಿರುವವರೆಗೂ ಹಿಂದೂತ್ವಕ್ಕಾಗಿ ಹೋರಾಡುತ್ತೇನೆ: ಈಶ್ವರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.