ಕುರುಬರನ್ನು ಬಿಟ್ಟು ಹಿಂದೂತ್ವವಿಲ್ಲ; ಉಸಿರಿರುವವರೆಗೂ ಹಿಂದೂತ್ವಕ್ಕಾಗಿ ಹೋರಾಡುತ್ತೇನೆ: ಈಶ್ವರಪ್ಪ

ಕುರುಬರ ಜನಾಂಗಕ್ಕೆ ಎಸ್‌ಟಿ ಸ್ಥಾನಮಾನ ನೀಡಬೇಕು  ಎಂದು ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ತಯಾರಿಗಳು ನಡೆಯುತ್ತಿದ್ದು, ದಾವಣಗೆರೆ ಸಭೆಯಲ್ಲಿ ಮಾತನಾಡಿರುವ ಸಚಿವ ಈಶ್ವರಪ್ಪ, ಹಿಂದೂತ್ವವು ಕುರುಬರು, ದಲಿತರು, ಬೆಸ್ತರನ್ನು ಬಿಟ್ಟು ಇರಲು ಸಾಧ್ಯವೇ. ಎಲ್ಲಾ ಸಮುದಾಯಗಳು ಸೇರಿದರೆ ಹಿಂದೂತ್ವ. ನನ್ನ ಉಸಿರುವ ಇರುವವರೆಗೂ ಹಿಂದೂತ್ವಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.

ಕುರುಬರಿಗೆ ಮಾತ್ರವಲ್ಲ ಬೆಸ್ತರು, ಉಪ್ಪಾರರು ಕೂಡ ಎಸ್‌ಟಿ ಸ್ಥಾನಮಾನಕ್ಕೆ ಹೋರಾಟ ಮಾಡಿದರೆ ಅವರಿಗೂ ಬೆಂಬಲಿಸುತ್ತೇನೆ. ಎಸ್‌ಟಿ ಸ್ಥಾನಮಾನ ದೊರೆತರೇ ಹಿಂದೂತ್ವಕ್ಕೆ ಒಳ್ಳೆಯದು. ಕುರುಬರ ಎಸ್‌ಟಿ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಇಲ್ಲ ಎಂದು ಅವರು ಹೇಳಿದ್ದಾರೆ.

ಹೋರಾಟದ ಆರಂಭದಲ್ಲಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದೆ. ಬೇರೆ ಕಾರಣಗಳಿಂದ ಬರಲಾಗುವುದಿಲ್ಲ, ಮುಂದುವರಿಸಿ ಎಂದು ಒಳ್ಳೆಯ ಮಾತನಾಡಿದ್ದರು. ಸಿದ್ದರಾಮಯ್ಯ ಯಾವಾಗ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಡ್ಡಾ ಮೇಲಿನ ದಾಳಿ: ಬಂಗಾಳದಲ್ಲಿ ರಾಜಕೀಯ ಲಾಭಕ್ಕೆ ಬಳಿಸಿಕೊಳ್ಳುತ್ತಿದೆ ಬಿಜೆಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights