ಭಾರತದ ಮಾಧ್ಯಮಗಳು ದ್ವೇಷಬಿತ್ತುವ ಟ್ರೋಲ್‌ ಫ್ಯಾಕ್ಟರಿಗಳು: ಬ್ರಿಟನ್‌ ಸಂಸದ

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ಬಿಂಬಿಸಿ, ರೈತರ ಪ್ರತಿಭಟನೆಯನ್ನು ಭಾರತದ ಮಾಧ್ಯಮಗಳು ತಿರುಚುತ್ತಿವೆ. ಈ ಬಗ್ಗೆ ಭಾರತೀಯ ಮಾಧ್ಯಮಗಳ ವಿರುದ್ಧ ಬ್ರಿಟಿಷ್‌ ಸಿಖ್‌ ಸಂಸದ ತನ್ಮನ್‌ಜೀತ್ ಸಿಂಗ್ ಧೇಸಿ ಕಿಡಿಕಾರಿದ್ದು, ಭಾರತದ ಮಾಧ್ಯಮಗಳು ‘ದ್ವೇಷದ ಟ್ರೋಲ್ ಫ್ಯಾಕ್ಟರಿ’ಗಳು ಎಂದು ಕರೆದಿದ್ದಾರೆ.

ಕೆಲವು ದಿನಗಳ ಹಿಂದೆ ಧೇಸಿ ನೇತೃತ್ವದ 36 ಬ್ರಿಟಿಷ್‌ ಸಂಸದರ ಬಣ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ. ಭಾರತದೊಂದಿಗೆ ಈ ಬಗ್ಗೆ ಚರ್ಚಿಸುವಂತೆ ಇಂಗ್ಲೇಂಡ್‌ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದಿದ್ದರು.

ಇದಾದ ನಂತರ ಭಾರತದ ರೈತ ಹೋರಾಟದ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ಧೇಸಿ, “ಮಾಧ್ಯಮಗಳಲ್ಲಿ ಕೆಲವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅಥವಾ ಅವರ ಪರವಾಗಿ ಮಾತನಾಡುವವರಿಗೆ ಪ್ರತ್ಯೇಕತಾವಾದಿಗಳು ಅಥವಾ ಭಯೋತ್ಪಾದಕರು ಎಂಬ ಹಣೆಪಟ್ಟಿಕಟ್ಟಿ ತಪ್ಪು ಮಾಹಿತಿಯನ್ನು ಹರಡಲು ಆರಂಭಿಸಿದ್ದಾರೆ. ನಿಮ್ಮ ರಾಷ್ಟ್ರ ಹಾಗೂ ವೃತ್ತಿಗೆ ನೀವು ಅಪಚಾರ ಮಾಡುತ್ತಿದ್ದೀರಿ. ಟ್ರೋಲ್ ಫ್ಯಾಕ್ಟರಿಯನ್ನು ಎಲ್ಲರೂ ದ್ವೇಷಿಸಿ. ನಿಮ್ಮ ನಿಂದನೆ ಹಾಗೂ ಬೆದರಿಕೆಯು ಸತ್ಯ ಮಾತನಾಡುವುದರಿಂದ ನನ್ನನ್ನು ತಡೆಯುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಬ್ರಿಟನ್‌ನ ಲೇಬರ್ ಪಕ್ಷದ ಸಂಸದ ಸಿಂಗ್ ಅವರು ಕೆಲವು ಭಾರತೀಯ ಮಾಧ್ಯಮಗಳ ಸ್ಟ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಭಾರತದ ರೈತರ ಹೋರಾಟಕ್ಕೆ ಇಂಗ್ಲೆಂಡ್‌ನ 36 ಸಂಸದರ ಬೆಂಬಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights