ಸರ್ಕಾರದ ಕಾರ್ಮಿಕರ ಪ್ರಯಾಣ ವರದಿಯನ್ನು ನಿರಾಕರಿಸಿದ ಹೈಕೋರ್ಟ್‌

ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂತಿರುಗಲು ಆಸಕ್ತಿ ತೋರಿಸುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸರ್ಕಾರ ಅಂತಹ ತೀರ್ಮಾನಕ್ಕೆ ಬರಲು ನ್ಯಾಯಯುತ ಮತ್ತು ಪಾರದರ್ಶಕ ವಿಧಾನವನ್ನು ಅಳವಡಿಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ತಮ್ಮ ಸ್ವಂತ ರಾಜ್ಯಗಳಿಗೆ ಪ್ರಯಾಣಿಸಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ವಲಸೆ ಕಾರ್ಮಿಕರಿಗೆ ಎಸ್‌ಎಂಎಸ್ ಕಳುಹಿಸಲಾಗಿದೆ. ಅವರ ಪ್ರಯಾಣಕ್ಕೆ ಶ್ರಮಿಕ್ ವಿಶೇಷ ರೈಲುಗಳನ್ನು ವ್ಯವಸ್ಥೆಗೊಳಿಸಲಾಗುವುದು  ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

Destitute migrant workers in India forced to pay train fares home ...

ಈ ಕುರಿತು ಹೈ ಕೋರ್ಟ್‌ಗೆ ವರದಿ ನೀಡಿರುವ ಸರ್ಕಾರ, ಪ್ರತ್ಯೇಕ ಮತ್ತು ನಿರ್ಧಿಷ್ಟ ಬ್ಯಾಚ್‌ಗಳಲ್ಲಿ 25,000 ವಲಸೆ ಕಾರ್ಮಿಕರಿಗೆ ಬೆಂಗಳೂರಿನಲ್ಲಿ ಗೊತ್ತು ಪಡಿಸಿರುವ ಮಾಸ್ಟರಿಂಗ್‌ ಪಾಂಯಿಂಟ್‌ಗಳಲ್ಲಿ ತಮ್ಮ ವರದಿ ಮಾಡಿಕೊಳ್ಳವಂತೆ ಎಸ್‌ಎಂಎಸ್‌ ಕಳಿಸಲಾಗಿತ್ತು. ಆದರೆ, 1,000 ರಿಂದ 3,000 ವಲಸೆ ಕಾರ್ಮಿಕರು ಮಾತ್ರ ಪ್ರಯಾಣಕ್ಕೆ ತೆರಳಿದ್ದಾರೆ ಎಂದು ಸರ್ಕಾರ ಹೇಳಿದೆ.

ಆದರೆ, ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಶೇಷ ವಿಭಾಗದ ನ್ಯಾಯಪೀಠವು ಪ್ರಯಾಣಕ್ಕಾಗಿ ನೋಂದಾಯಿಸಿಕೊಂಡವರು ಈಗ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.

Coronavirus lockdown hits India migrant workers' pay, food supply ...

ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಲಾಕ್‌ಡೌನ್‌ಗೆ ಸಂಬಂಧಿಸಿದ ಪಿಐಎಲ್ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು, ಎಸ್‌ಎಂಎಸ್ ಎಲ್ಲರನ್ನು ತಲುಪಿದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ಸರ್ಕಾರ ತನ್ನ ಲಿಖಿತ ಹೇಳಿಕೆಯಲ್ಲಿ, ಬಹುಪಾಲು ವಲಸೆ ಕಾರ್ಮಿಕರನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿದ ದಿನಾಂಕದ ಆಧಾರದ ಮೇಲೆ ಪ್ರಯಾಣಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿಕೊಂಡರೂ, ನ್ಯಾಯಪೀಠವು ಈ ಅಂಶದ ಕುರಿತು ನಿಮಿಷಗಳ ಚರ್ಚೆಯಲ್ಲಿ ಕಂಡುಹಿಡಿಯಲಾಗುವುದಿಲ್ಲ ಎಂದು ಸೂಚಿಸಿದೆ.

ಎಲ್ಲಾ ನೋಂದಾಯಿತ ವಲಸೆ ಕಾರ್ಮಿಕರಿಗೆ ತಮ್ಮ ರಾಜ್ಯಗಳಿಗೆ ಹಿಂತಿರುಗಲು ಅವಕಾಶ ಸಿಗುತ್ತದೆ ಎಂದು ದೃಢಪಡಿಸಿಕೊಳ್ಳಲು ನ್ಯಾಯಯುತ ಮತ್ತು ಪಾರದರ್ಶಕ ನೀತಿಯನ್ನು ಪೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ  ನೀಡಿಲಾಗಿದ್ದು, ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಂತಹ ಕೇಂದ್ರಾಡಳಿತ ಪ್ರದೇಶಗಳಿಗೆ ವಲಸಿಗರನ್ನು ಕಳುಹಿಸಲು ಯಾವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದನ್ನು ತಿಳಿಸಲು ಸರ್ಕಾರಕ್ಕೆ ನ್ಯಾಯಪೀಠ ಆದೇಶಿಸಿದೆ. ಹೆಚ್ಚಿನ ವಿಚಾರಣೆಯನ್ನು ಜೂನ್ 11 ರವರೆಗೆ ಮುಂದೂಡಲಾಯಿತು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights