ಬಿಕ್ಕಟ್ಟು ನಿರ್ವಹಿಸುವುದು ಸದನದಲ್ಲಿ ‘ರೋಮಾಂಚನದ ಚಿತ್ರ’ ನೋಡಿದಂತಲ್ಲ; ಸವದಿಗೆ ಕಾಂಗ್ರೆಸ್‌ ಟಾಂಗ್

ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ಸಾರಿಗೆ ನೌಕರರು ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಸುಗಳು ರಸ್ತೆಗಿಳಿದಿಲ್ಲ. ಸಾರಿಗೆ ನೌಕರರ ಜೊತೆಗೆ ಸಾರಿಗೆ ಸಚಿವ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆ ನಡೆಸಿದ್ದು, ಮಾತುಕತೆ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ನೌಕರರು ರಾಜ್ಯಾದ್ಯಂತ ಉಪವಾಸ ಮುಷ್ಕರಕ್ಕೆ ಮುಂದಾಗಿದ್ದು, ಬೆಂಗಳೂರಿನಲ್ಲಿ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಸಾರಿಗೆ ನೌಕರರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ ನೀಡಿದ್ದು, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಲಕ್ಷ್ಮಣ ಸವದಿಯವರೇ ಬಿಕ್ಕಟ್ಟು ನಿರ್ವಹಿಸುವುದೆಂದರೆ, ಸದನದಲ್ಲಿ ಕೂತು ರೋಮಾಂಚನ ಚಿತ್ರ ವೀಕ್ಷಿಸಿದಂತಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ರಾಜ್ಯ ಕಾಂಗ್ರೆಸ್ ಟಾಂಗ್ ಕೊಟ್ಟಿದೆ. ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇಂದು ನಡೆದ ಸಭೆಯಲ್ಲಿ ಇಂದಿನ ಸಭೆಯಲ್ಲಿ ಬಿಎಂಟಿಸಿ ಎಂಡಿ ಶಿಖಾ, ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಹಾಗೂ NWKRTC, NEKRTC ಎಂಡಿಗಳು ಭಾಗಿಯಾಗಿದ್ದಾರೆ. ಜೊತೆಗೆ, ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಇದಲ್ಲದೆ, ಸಾರಿಗೆ‌ ನೌಕರರ ಮುಖಂಡರಾದ ಅನಂತ ಸುಬ್ಬುರಾವ್ ಸೇರಿದಂತೆ ಒಕ್ಕೂಟದ ಮುಖಂಡರು ಭಾಗಿಯಾಗಿದ್ದು AITUCಯಿಂದ ಅನಂತ ಸುಬ್ಬುರಾವ್, ವಿಜಯ್ ಭಾಸ್ಕರ್, CITUಯಿಂದ ಪ್ರಕಾಶ್ ,ರೇವಪ್ಪ ಮತ್ತು ಭಾರತೀಯ ಮಜ್ದೂರ್ ಸಂಘದ ಪೂಂಜಾ ಮಂಜುನಾಥ, ಉದಯ್ ಕುಮಾರ್ ಮತ್ತು ಮಹಾಮಂಡಳದ ಅರುಸು ಸೇರಿದಂತೆ ನೋಂದಾಯಿತ ಒಕ್ಕೂಟದ ಮುಖಂಡರು ಮಾತ್ರ ಭಾಗಿಯಾಗಿದ್ದಾರೆ.

ಆದರೆ ಸಭೆಯಲ್ಲಿ ಪ್ರತಿಭಟನಾ ನಿರತ ಕೋಡಿಹಳ್ಳಿ ಚಂದ್ರಶೇಖರ್​ ನೇತೃತ್ವದ ತಂಡ ಸಭೆಯಲ್ಲಿ ಇರಲಿಲ್ಲವಾದ್ದರಿಂದ ಸಭೆ ಮುರಿದು ಬಿದ್ದಿದೆ.


ಇದನ್ನೂ ಓದಿ: ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ; ಕಾರುಗಳಿಗೆ ಬೆಂಕಿ ಹಚ್ಚಿ, ಕಚೇರಿ ಮೇಲೆ ನೌಕರರ ದಾಳಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights