ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ; ಕಾರುಗಳಿಗೆ ಬೆಂಕಿ ಹಚ್ಚಿ, ಕಚೇರಿ ಮೇಲೆ ನೌಕರರ ದಾಳಿ!

ಕಳೆದ ನಾಲ್ಕು ತಿಂಗಳಿನಿಂದ ವೇತನ ನೀಡದ ವೆಸ್ಟ್ರಾನ್ ಕಂಪನಿಯ ವಿರುದ್ಧ ಅಲ್ಲಿನ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದು, ಪ್ರತಿಭಟನೆಗೆ ಆಕ್ರೋಶದ ಹಂತ ತಲುಪಿದೆ. ನೌಕರರು ಕಂಪನಿಯ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಉತ್ತನ್ನಗಳ ಸಾಗಾಣಿಕೆಗೆ ಬಳಸುವ ಸಣ್ಣ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಡಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಬಿಟ್ಟಿ ದುಡಿಸಿಕೊಳ್ಳುತ್ತಿರುವ ಕಂಪನಿ, ವೇತನವನ್ನು ನೀಡಿಲ್ಲ. ಇದೇ ವೇತನವನ್ನು ನಂಬಿ ಬದುಕುತ್ತಿರುವ ತಮ್ಮ ಮತ್ತು ತಮ್ಮ ಕುಟುಂಬದ ನಿರ್ವಹಣೆಗೆ ಸಂಕಷ್ಟಕ್ಕೆ ಸಿಲುಕಿದೆ. ಜೀವನೋಪಾಯ ಕಷ್ಟವಾಗಿದೆ ಎಂದು ಆರೋಪಿಸಿರುವ ಕಂಪನಿಯ ನೌಕರರು ಕಚೇರಿಯಲ್ಲಿ ಗದ್ದಲ ನಡೆಸಿದ್ದಾರೆ.

ಕೋಲಾರ ತಾಲ್ಲೂಕಿನಲ್ಲಿರುವ ವೆಸ್ಟ್ರಾನ್‌ ಕಂಪನಿ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ. ಬಾಕಿ ಇರುವ ವೇತನವನ್ನು ನೀಡುವಂತೆ ನೌಕರರು ಮನವಿ ಮಾಡಿದ್ದರೂ, ಕಂಪನಿ ವೇತನವನ್ನು ನೀಡಿಲ್ಲ. ಹೀಗಾಗಿ ನೌಕರರು ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

ಪ್ರತಿಭಟನೆಯು ಸ್ಥಿಮಿತ ಕಳೆದುಕೊಂಡಿದ್ದು, ವಿಸ್ಟ್ರಾನ್ ಕಂಪನಿಯ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಚೇರಿಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಇದನ್ನೂ ಓದಿ: ಪ್ರತಿಭಟನೆ ಪೆಂಡಾಲ್‌ ಕಿತ್ತೆಸೆದು ಟೊಯೊಟಾ ಕಂಪನಿ ದರ್ಪ; ಛತ್ರಿ ಚಳುವಳಿ ಆರಂಭಿಸಿದ ಕಾರ್ಮಿಕರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights