ತಮಿಳು ಟಿವಿ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ನಟಿ ತಾಯಿಯ ಆರೋಪಕ್ಕೆ ಅಭಿಮಾನಿಗಳು ಶಾಕ್!

ತಮಿಳು ಟಿವಿ ಚಿತ್ರಾ ಅವರ ಆತ್ಮಹತ್ಯೆ ಪ್ರಕರಣ ಸದ್ಯ ಟ್ವಿಸ್ಟ್ ಪಡೆದುಕೊಂಡಿದೆ. ಈಗಾಗಲೇ ನಟಿ ಸಾವಿನ ಬಗ್ಗೆ ಹಲವಾರು ಆಯಾಮಗಳಿಂದ ತನಿಖೆ ನಡೆಯುತ್ತಿದ್ದು, ಆಕೆ ಸಾವಿಗೆ ಕಾರಣ ಏನು ಎನ್ನುವುದು ಮಾತ್ರ ನಿಗೂಢವಾಗಿ ಉಳಿದಿದೆ. ಚಿತ್ರಾ ಅವರ ಪತಿ ವಿರುದ್ಧ ಕುಟುಂಬಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ಚಿತ್ರಾ ಪತಿಯೇ ಆಕೆಯನ್ನು ಕೊಂದಿದ್ದಾನೆ ಎನ್ನುವ ಆರೋಪ ಚಿತ್ರಾ ತಾಯಿ ಮಾಡಿದ್ದಾರೆ.

ಈಗಾಗಲೇ ಚಿತ್ರಾ ಮರಣೋತ್ತರ ಪರೀಕ್ಷೆಯಲ್ಲಿ ಚಿತ್ರಾ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆ. ಇದಕ್ಕೆ ಹಣಕಾಸಿನ ಸಮಸ್ಯೆಗಳು ಒಂದು ಕಾರಣವಾಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತಿಯ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅಗರ್ವಾಲ್, ‘ನಾವು ಕಾರಣವನ್ನು ತನಿಖೆ ಮಾಡುತ್ತಿದ್ದೇವೆ’ ಎಂದು ಹೇಳಿದರು. “ತಾಯಿಯ ಆರೋಪ ಕೇವಲ ಆಕ್ರೋಶದಂತೆ ಕಂಡುಬರುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಚಿತ್ರಾ (29) ಬುಧವಾರ ಬೆಳಿಗ್ಗೆ ಚೆನ್ನೈ ಹೊರಗಿನ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ನಟಿ ಇತ್ತೀಚೆಗೆ ವಿವಾಹವಾಗಿ ಪತಿಯೊಂದಿಗೆ ತಮಿಳುನಾಡು ರಾಜಧಾನಿ ಬಳಿಯ ಹೋಟೆಲ್‌ನಲ್ಲಿದ್ದರು. ವರದಿಗಳ ಪ್ರಕಾರ, ಮಂಗಳವಾರ ತಡರಾತ್ರಿ ಚಿತ್ರೀಕರಣದಿಂದ ಹಿಂದಿರುಗಿದ ಚಿತ್ರಾ ಹೋಟೆಲ್‌ನ ಅವರ ರೂಮ್ ಗೆ ಹೋಗಿದ್ದರು. ಫ್ರೆಶ್ ಅಪ್ ಆಗಿ ಬರುವುದಾಗಿ ಹೇಳಿ ಹೋದ ಚಿತ್ರಾ ಮತ್ತೆ ವಾಪಸ್ ಬರಲೇ ಇಲ್ಲ. ಗಾಬರಿಗೊಂಡ ಪತಿ- ಹೋಟೆಲ್ ಸಿಬ್ಬಂದಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ “ಅವರು ಇತ್ತೀಚೆಗೆ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದರು. ಹಣಕಾಸಿನ ಸಮಸ್ಯೆಗಳನ್ನು ನಾವು ಅನುಮಾನಿಸುತ್ತೇವೆ. ನಾವು ಯಾವುದೇ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿಲ್ಲ. ಮರಣೋತ್ತರ ಪರೀಕ್ಷೆ ಮುಗಿದಿದೆ” ಎಂದು ಹೇಳಿದ್ದಾರೆ. ಈ ಬಗ್ಗೆ ಕಂದಾಯ ವಿಭಾಗೀಯ ಅಧಿಕಾರಿಯ ತನಿಖೆಗೂ ಆದೇಶಿಸಲಾಗಿದೆ.

ಚಿತ್ರ ವಿಜಯ್ ಟಿವಿಯಲ್ಲಿ “ಪಾಂಡಿಯನ್ ಸ್ಟೋರ್ಸ್” ಎಂಬ ಜನಪ್ರಿಯ ದೂರದರ್ಶನ ಧಾರಾವಾಹಿಯ ಪಾತ್ರನಿರ್ವಹಿಸುತ್ತಿದ್ದಾರೆ. ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ ಮತ್ತು ವಿವಿಧ ಪ್ರದರ್ಶನಗಳಲ್ಲಿ ನಿರೂಪಕರಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights