ಫ್ಯಾಕ್ಟ್‌ಚೆಕ್ :ಪಾಕ್‌ನಲ್ಲಿ ಹಿಂದೂ ಮಹಿಳೆಯ ಮೇಲೆ ಮುಸ್ಲಿಮರಿಂದ ಥಳಿತ ಎಂದು ಸುಳ್ಳು ಹಂಚಿದ ಬಲಪಂಥಿಯರು

ಮಹಿಳೆಯನ್ನು ವ್ಯಕ್ತಿಯೊಬ್ಬ ಅಮಾನುಷವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಲವು ಮಹಿಳೆಯರು ಸೇರಿದಂತೆ ಹಲವರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕೂದಲನ್ನು ಹಿಡಿದು ಒದೆಯುತ್ತಿರುವುದು, ಚಪ್ಪಲಿ ಮತ್ತು ದೊಣ್ಣೆಗಳಿಂದ ಥಳಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಇದು ಪಾಕಿಸ್ತಾನದಲ್ಲಿ ನಡೆದ ಘಟನೆಯಾಗಿದ್ದು ಸಂತ್ರಸ್ಥೆಯನ್ನು ಹಿಂದೂ ಮಹಿಳೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಝೀ ಹಿಂದೂಸ್ತಾನ್ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದು, “ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮಹಿಳೆಯೊಬ್ಬರನ್ನು ದೊಣ್ಣೆಯಿಂದ ಥಳಿಸಲಾಗಿದೆ ಎಂದು ಟ್ವೀಟ್ ಮಾಡಿದೆ.

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ವೀಡಿಯೊವನ್ನು ಟ್ವೀಟ್ ಮಾಡಿದ್ದು “ಒಂದೆಡೆ, ಅಫ್ಘಾನಿಸ್ತಾನವು ಹುಡುಗಿಯರನ್ನು ವಿದೇಶದಲ್ಲಿ ಓದುವುದನ್ನು ನಿಷೇಧಿಸಿದೆ, ಆದರೆ ಪಾಕಿಸ್ತಾನವು ಹಿಂದೂ ಮಹಿಳೆಯರ ಮೇಲೆ ಭಯಾನಕ ಕ್ರೌರ್ಯವನ್ನು ಎಸೆಗುತ್ತಿದೆ. ಜಿಹಾದಿಗಳ ಈ ಮಹಿಳಾ ವಿರೋಧಿ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ, ಎಂದು ಬರೆದು ಹಂಚಿಕೊಂಡಿದ್ದಾರೆ.

ಬಿಜೆಪಿ ಪರ ಪ್ರಚಾರದ ಔಟ್ಲೆಟ್ OP ಇಂಡಿಯಾದ ಅಂಕಣಕಾರರಾದ ದಿವ್ಯ ಕುಮಾರ್ ಸೋಟಿ, ಝೀ ಹಿಂದೂಸ್ತಾನ್ ಪೋಸ್ಟ್ ಅನ್ನು ಉಲ್ಲೇಖಿಸಿ-ಟ್ವೀಟ್ ಮಾಡಿದ್ದಾರೆ, “ಭಾರತದಲ್ಲಿ ಹಿಂದೂಗಳ ಸ್ಥಿತಿ ಹೀಗಿರುವಾಗ, ಇನ್ನು ಪಾಕಿಸ್ತಾನದಲ್ಲಿ ಅವರ ಸ್ಥಿತಿ ಹೇಗಿರುತ್ತದೆ?” ಎಂಬ ಹೇಳಿಕೆಒಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅದೇ ರೀತಿ, ಬಲಪಂಥೀಯ ಪ್ರಚಾರ ವೆಬ್‌ಸೈಟ್  Kreately Media ಮೀಡಿಯಾ, ನಟ Manoj Joshi, ಹ್ಯುಮಾನಿಟೇರಿಯನ್ ಏಡ್ ಇಂಟರ್‌ನ್ಯಾಶನಲ್ ಸಂಸ್ಥಾಪಕ  Sudhanshu Singh ಮತ್ತು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಇತಿಹಾಸ ಹೊಂದಿರುವ ಬಳಕೆದಾರರು  @MrSinha_  ಇದೇ ರೀತಿಯ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪಾಕಿಸ್ತಾನದ ಘಟನೆಯನ್ನು ಕೀವರ್ಡ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಪಾಕಿಸ್ತಾನಿ ವೆಬ್ ಪೋರ್ಟಲ್ ಜಿಯೋ ನ್ಯೂಸ್‌ನಲ್ಲಿ ಜನವರಿ 9, 2022 ರ  ಲೇಖನ ಕಂಡುಬಂದಿದೆ, ಅದರ ಪ್ರಕಾರ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜಮೀನು ವಿವಾದದಿಂದ ಮಹಿಳೆಯೊಬ್ಬರಿಗೆ ಚಿತ್ರಹಿಂಸೆ ನೀಡಲಾಯಿತು ಎಂದು ವರದಿಯಾಗಿದೆ.

ವಿಡಿಯೋ ವೈರಲ್ ಆದ ನಂತರ ಸಿಯಾಲ್‌ಕೋಟ್ ಪೊಲೀಸರು ಕ್ರಮ ಕೈಗೊಂಡು 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದು, ಅದರಲ್ಲಿ ನಾಲ್ವರು ಮಹಿಳೆಯರಿದ್ದಾರೆ. ಜಿಯೋ ನ್ಯೂಸ್‌ನೊಂದಿಗೆ ಮಾತನಾಡಿರುವ ವೃದ್ಧೆ, ಕಳೆದ 13 ವರ್ಷಗಳಿಂದ ನಡೆಯುತ್ತಿರುವ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಲೇಖನದಲ್ಲಿ ಯಾವುದೇ ಕೋಮು ದ್ವೇಷದ ಹಿನ್ನಲೆಯನ್ನು ಉಲ್ಲೇಖಿಸಿಲ್ಲ.

ಜನವರಿ 10, 2022 ರಂದು ಪ್ರಕಟವಾದ ವರದಿಯ ಪ್ರಕಾರ, ಪಾಕಿಸ್ತಾನಿ ದೈನಿಕ ಡಾನ್‌ನ ವೆಬ್ ಪೋರ್ಟಲ್‌ನಲ್ಲಿ, ಎರಡು ಗುಂಪುಗಳ ನಡುವೆ  ಭೂಮಿಗೆ ಸಂಬಂಧಿಸಿದಂತೆ ವಿವಾದ ನಡೆದಿದೆ ಮತ್ತು ಈ ಹಿಂದೆಯೂ ಈ ಬಗ್ಗೆ ಅವರು ಜಗಳವಾಡಿದ್ದರು. ಘಟನೆಯ ದಿನ ಮುನವ್ವರ್ ಕನ್ವಾಲ್ ಮತ್ತು ನಸ್ರೀನ್ ಬೀಬಿ ಎಂಬ ಇಬ್ಬರು ಮಹಿಳೆಯರ ನಡುವೆ ಮತ್ತೊಮ್ಮೆ ವಾಗ್ವಾದ ನಡೆದಿದೆ. ನಸ್ರೀನ್ ತನ್ನ ಸಂಬಂಧಿಕರೊಂದಿಗೆ ಸೇರಿ ಮುನಾವರ್ ಕನ್ವಾಲ್ ನನ್ನು ತೀವ್ರವಾಗಿ ಹಿಂಸಿಸಿದ್ದಾಳೆ. ನಸ್ರೀನ್ ಸಹೋದರರು  ಮುನವ್ವರ್ ಅವರ ತಲೆಗೂದಲು ಹಿಡಿದು ಬೀದಿಗಳಲ್ಲಿ ಎಳೆದಾಡಿ, ಮನಬಂದಂತೆ ಥಳಿಸಿದ್ದಾರೆ. ಈ ವರದಿಯಲ್ಲೂ ಕೋಮು ದ್ವೇಷದ ಹಿನ್ನಲೆಯನ್ನು ಉಲ್ಲೇಖಿಸುವುದಿಲ್ಲ.

ಜನವರಿ 9 ರಂದು ಪಾಕಿಸ್ತಾನದ ಪಂಜಾಬ್ ಪೊಲೀಸರು ಟ್ವಿಟರ್‌ನಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಒಂಬತ್ತು ಆರೋಪಿಗಳನ್ನು ಬಂಧಿಸಿರುವುದಾಗಿ ಘೋಷಿಸಿದರು. ಜನವರಿ 10 ರಂದು ಈ ವಿಷಯದ ಬಗ್ಗೆ ನವೀಕರಣವನ್ನು ನೀಡಿದ ಅವರು, ಇನ್ನು ಕೆಲ ಆರೋಪಿಗಳು ತಲೆ ಮರಿಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಿಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋದ ಕಾರ್ಯ ನಡೆಸಿದ್ದು ಮತ್ತೊಬ್ಬನನ್ನು ಬಂದಿಸಿದ್ದೇವೆ ಎಂದು ತಿಳಿಸಿದ್ದಾರೆ.

FIR ಪ್ರತಿ
FIR ಪ್ರತಿ

ಘಟನೆಯು ಡಿಸೆಂಬರ್ 31, 2021 ರಂದು ನಡೆದಿದೆ ಎಂದು Alt News ವರದಿ ಮಾಡಿದೆ.  ಭೂ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಿಂದ ಚಿತ್ರಹಿಂಸೆಯ ಘಟನೆಯ ಹಳೆಯ ವೀಡಿಯೊವನ್ನು ಜೀ ಹಿಂದೂಸ್ತಾನ್, ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಮತ್ತು ನಟ ಮನೋಜ್ ಜೋಶಿ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಿಂದೂಗಳ ಮೇಲಿನ ದೌರ್ಜನ್ಯ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ. ಘಟನೆಯಲ್ಲಿ ಸಂತ್ರಸ್ಥೆ ಮತ್ತು ಆರೋಪಿಗಳು ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಜಮೀನು ವಿವಾದಕ್ಕೆ  ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಮಹಿಳೆಯ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಘಟನೆಯನ್ನು ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಮೇಲೆ ಮುಸ್ಲಿಂ ಕೋಮುನೊಂದ ಮಾರಣಾಂತಿಕ ಥಳಿತ  ಎಂಬ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಘಟನೆಯಲ್ಲಿ ಭಾಗಿಯಾಗಿದ್ದ ಸಂತ್ರಸ್ಥೆ ಮತ್ತು ಆರೋಪಿಗಳೆಲ್ಲರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಇದನ್ನು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಸಾವರ್ಕರ್‌ರನ್ನು ಮೊಹಮ್ಮದ್ ಅಲಿ ಜಿನ್ನಾ ಸ್ವಾಗತಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights