ಫ್ಯಾಕ್ಟ್‌ಚೆಕ್: ವೈರಲ್ ಫೋಟೋದಲ್ಲಿ ಇರುವ ವ್ಯಕ್ತಿ ಮಕ್ಕಳ ಕಳ್ಳ ಎಂಬುದಕ್ಕೆ ಯಾವುದೇ ಆಧಾರವಿಲ್ಲ

ಮಕ್ಕಳ ಅಪಹರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಹಲವು ಪೋಸ್ಟ್ ಗಳನ್ನು ನೋಡುತ್ತಿರುತ್ತೇವೆ. ಅಂತಹದ್ದೆ ಸಂದೇಶವೊಂದು ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಯುವಕನೊಬ್ಬನ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, “ಅವನನ್ನು ಎಲ್ಲಿ ನೋಡಿದರೂ ಹಿಡಿದು ಪೊಲೀಸರಿಗೆ ಒಪ್ಪಿಸಿ. ಅವನು ಮಕ್ಕಳನ್ನು ಅಪಹರಿಸುತ್ತಿದ್ದಾನೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗತ್ತಿದೆ.

 

ಇದೇ ಸಂದೇಶವು ನಮ್ಮ ಏನ್‌ ಸುದ್ದಿ ವಾಟ್ಸಾಪ್‌ ಗ್ರೂಪ್‌ಗೂ ಬಂದಿದ್ದು, ಇದರ ಸತ್ಯಾಸತ್ಯತೆ ಏನೆಂದು ತಿಳಿಸುವಂತೆ ಹಲವು ವಿನಂತಿಗಳು ಬಂದಿವೆ. ಹಾಗಾಗಿ ವೈರಲ್ ಸಂದೇಶದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ ಮತ್ತು ಸಂದೇಶವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ 2017 ರಿಂದ ಇದೇ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದು ಕಂಡುಬಂದಿದೆ.  ” ಇವನು ಎಲ್ಲೆ ಸಿಕ್ಕರೂ ಹಿಡಿದು ಪೊಲೀಸರಿಗೆ ಒಪ್ಪಿಸಿ ‘ಇವನೇ ಮಕ್ಕಳನ್ನು ಅಪಹರಿಸುವವನು’ ಕೇರಳದ ಹಲವೆಡೆ ಸುತ್ತಾಡುತ್ತಿದ್ದಾನೆ ‘ಪಾಪದ ಮಕ್ಕಳು ತಂದೆ ತಾಯಿಯಿಂದ ದೂರವಾಗುವುದನ್ನು ತಪ್ಪಿಸಿ ಪ್ಲೀಸ್, ಇದನ್ನು ಎಲ್ಲಾ ಗ್ರೂಪ್‌ಗಳಲ್ಲಿ ಶೇರ್ ಮಾಡಿ’ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

2018 ರಲ್ಲಿ ಇದೇ ಫೋಟೋದೊಂದಿಗೆ ಕೇರಳದ ಮಕ್ಕಳ ಅಪಹರಣಕಾರ ಎಂದು ಪೋಸ್ಟ್‌ಅನ್ನು ವೈರಲ್ ಮಾಡಲಾಗಿತ್ತು, ಆದರೆ ಈ ಸುದ್ದಿ ಸುಳ್ಳು ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ತಂಡ ವರದಿಯೊಂದನ್ನು ಪ್ರಕಟಿಸಿ ವಾಸ್ತವ ಏನೆಂದು ತಿಳಿಸಿದೆ. ಮಕ್ಕಳ ಅಪಹಣಕಾರ ಎಂದು ಹೇಳುವ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿರುವ ಯಾವುದೇ ಇತ್ತೀಚಿನ ವರದಿಗಳು ನಮಗೆ ಕಂಡುಬಂದಿಲ್ಲ.

Fact Check child kidnapping Kerala

2018 ರಲ್ಲಿ ಈ ಪೋಸ್ಟ್‌ ಕೇರಳದಲ್ಲಿ ವೈರಲ್ ಆದಾಗ ಕೇರಳದ ಪೊಲೀಸ್‌ ಅಧಿಕಾರಿಗಳು ಫೋಸ್ಟ್‌ಗಳ ಬಗ್ಗೆ ಮಾಹಿತಿ ನೀಡಿ ”ಅಂತಹ ಯಾವುದೇ ಲುಕ್ ಔಟ್ ನೋಟಿಸ್ ನಮ್ಮ ಇಲಾಖೆ ಗಮನಕ್ಕೆ ಬಂದಿಲ್ಲ. ಆದರೆ, ರಾಜ್ಯದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕೇಂದ್ರೀಕೃತ ವ್ಯವಸ್ಥೆ ಇಲ್ಲದಿರುವುದರಿಂದ ಬೇರೆ ಯಾವ ಪೊಲೀಸ್ ಠಾಣೆಯಲ್ಲಿ ಇಂತಹ ಲುಕ್‌ಔಟ್ ನೋಟಿಸ್ ಜಾರಿಯಾಗಿದೆಯೇ ಎಂಬ ಮಾಹಿತಿಯನ್ನು ಪಡೆಯಲಾಗುವುದು ಎಂದರು.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರಕ್ಕೆ ಹಲವರು ಕಮೆಂಟ್ ಮಾಡಿದ್ದು, “ಈಗ ಪೋಸ್ಟ್‌ನಲ್ಲಿ ಈ ವ್ಯಕ್ತಿಯ ಬಗ್ಗೆ ಹೇಳುವ ಬದಲು ಈ ಪೋಟೋ ತೆಗೆಯುವ ಸಂದರ್ಭದಲ್ಲೆ ಈತನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಅಲ್ಲವೆ” ಎಂದು ಮತ್ತೊಬ್ಬರು ಕೆಲವು ಸಾಲ ಕೊಡುವ ಮೊಬೈಲ್ ಆಪ್‌ಗಳು ಸಾಲವನ್ನು ನೀಡಿ ನಂತರ ಹಣ ಹಿಂತಿರುಗಿಸದ ಸಂದರ್ಭದಲ್ಲಿ ಹೀಗೆ ಪೋಟೋವನ್ನು ಹಂಚಿಕೊಳ್ಳುವ ಜಾಲವು ಇದೆ ದಯವಿಟ್ಟು ಪರಿಶೀಲಿಸಿ ಎಂದು ಕಮೆಂಟ್ ಮಾಡಿದ್ದಾರೆ.

ಫೋಟೊದಲ್ಲಿ ಇರುವ ವ್ಯಕ್ತಿ ಮಕ್ಕಳ ಕಳ್ಳನಲ್ಲ, ಆತ ಬೆಡ್‌ಶೀಟ್ ಮಾರಾಟ ಮಾಡುವ ಬಂಗಾಳೀ ಹುಡುಗ. ಅವನ ಬದುಕಿನೊಂದಿಗೆ ಆಟವಾಡಬೇಡಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಕಂಡುಬರುವ ಯುವಕನ ಕುರಿತು ನಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ, ಈ ಪೋಸ್ಟ್ ವರ್ಷಗಳಷ್ಟು ಹಳೆಯದಾಗಿದ್ದು, ಈ ಬಗ್ಗೆ ಕೇರಳ ಅಥವಾ ಕರ್ನಾಟಕ ಪೊಲೀಸರು ಇತ್ತೀಚೆಗೆ ಯಾವುದೇ ರೀತಿಯ ಲುಕ್ ಔಟ್ ನೋಟಿಸ್ ಹೊರಡಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  ಫ್ಯಾಕ್ಟ್‌ಚೆಕ್: ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights