ಮುಸ್ಲೀಂ ವಿರೋಧಿ ಅನಿವಾಸಿ ಭಾರತೀಯರನ್ನು ಮನೆಗೆ ಕಳಿಸುತ್ತಿವೆ ಕೆನಡಾ, ಗಲ್ಫ್ ರಾಷ್ಟ್ರಗಳು

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇಸ್ಲಮಾಫೋಬಿಯಾ ಮತ್ತು ಮುಸ್ಲೀಮರ ವಿರುದ್ದದ ದ್ವೇಷವು ಎಗ್ಗಿಲ್ಲದೆ ಬೆಳೆಯುತ್ತಿದೆ. ಇದು ವಿದೇಶಿಗರಲ್ಲಿ ಭಾರತೀಯರೆಂದರೆ ಧರ್ಮಾಂಧತೆ ತುಂಬಿದವರು ಎಂದು ಕೆರೆಸಿಕೊಳ್ಳುವ ಹಂತಕ್ಕೆ ತಲುಪಿದೆ. ಭಾರತದ ಆಡಳಿತಾ ರೂಢ ಬಿಜೆಪಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಸದರು ಮತ್ತು ಸದಸ್ಯರ ನೇರ ಮತ್ತು ಪರೋಕ್ಷ ಬೆಂಬಲದೊಂದಿಗೆ ಮುಸ್ಲೀಂ ವಿರೋಧಿ ದ್ವೇಷವು ಮತ್ತಷ್ಟು ಪುಷ್ಠಿ ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಗಲ್ಫ್ ಮತ್ತು ಕೆನಡಾದಂತಹ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಧರ್ಮಾಂದತೆಯು ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ.

ಗಲ್ಫ್ ರಾಷ್ಟ್ರಗಳಲ್ಲಿನ ಭಾರತೀಯ ವಲಸಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಮಾಫೋಬಿಕ್‌ ಪೋಸ್ಟ್‌ಗಳನ್ನು ಹಂಚಿಕೊಂಡ ಕಾರಣಕ್ಕಾಗಿ ಉದ್ಯೋಗಗಳಿಂದ ವಜಾಗೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಅದೇ ದಾರಿಯಲ್ಲಿ ಈಗ ಕೆನಡಾ ಕೂಡ ಮುನ್ನಡೆಯಲು ಶುರುಮಾಡಿದೆ.

ಒಂಟಾರಿಯೊ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ರವಿ ಹೂಡಾ, ಬ್ರಾಂಪ್ಟನ್‌ನ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ನಗರದಲ್ಲಿ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಬೈಲಾದಲ್ಲಿ ಮುಸ್ಲೀಮರು ಅಜಾನ್‌ ಕೂಗುವುದಕ್ಕೆ ವಿನಾಯಿತಿ ನೀಡಿ ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಅನ್ನು ಒಂಟಾರಿಯೊ ಮೂಲದ ರಿಯಲ್‌ ಎಸ್ಟೇಟ್‌ ಏಜೆಂಟ್‌ ರವಿ ಹೂಡಾ ವಿರೋಧಿಸಿದ್ದರು.

“ಮುಂದೇನು? ಒಂಟೆ ಮತ್ತು ಮೇಕೆ ಸವಾರರಿಗಾಗಿ ಪ್ರತ್ಯೇಕ ರಸ್ತೆಗಳು, ತ್ಯಾಗದ ಹೆಸರಿನಲ್ಲಿ ಮನೆಯಲ್ಲಿ ಪ್ರಾಣಿಗಳನ್ನು ಹತ್ಯೆ ಮಾಡಲು ಅವಕಾಶ ಮಾಡಿಕೊಡುವುದು, ಎಲ್ಲಾ ಮಹಿಳೆಯರು ತಲೆಯಿಂದ ಪಾದದವರೆಗೆ ತಮ್ಮನ್ನು ತಾವು ಮುಚ್ಚಿಕೊಳ್ಳಬೇಕು ಎಂದು ಬೈಲಾದಲ್ಲಿ ಸೂಚಿಸುವುದು. ಮತ ನೀಡಿದ್ದಕ್ಕಾಗಿ ಅವರನ್ನು ಮೂರ್ಖರನ್ನಾಗಿಸುತ್ತದೆ” ಎಂದು ರವಿ ಹೂಡಾ ಟ್ವಿಟರ್‌ನಲ್ಲಿ ರಿಪ್ಲೈ ಮಾಡಿದ್ದಾರೆ.

ಅಜಾನ್‌ ಮಾಡಲು ನೀಡಿದ್ದ ವಿನಾಯಿತಿಯು, ಅದಕ್ಕೂ ಮೊದಲು ಚರ್ಚ್‌ಗಳಲ್ಲಿ ಗಂಟೆ ಬಾರಿಸಲು ನೀಡಲಾಗಿತ್ತು. ಈಗ ಅದನ್ನು ಎಲ್ಲಾ ಧರ್ಮಗಳಿಗೂ ವಿಸ್ತರಿಸಲಾಗುತ್ತಿದೆ. ಅದು ತಿಳಿದ್ದರೂ ಹೂಡ ವ್ಯಂಗ್ಯದ ಕಮೆಂಟ್‌ ಮಾಡಿದ್ದರು.

ಬಹುಶಃ, ಅವರು ಇರುವುದು ಕೆನಾಡಲ್ಲಿ ಭಾರತದಲ್ಲಿ ಅಲ್ಲ ಎಂಬುದನ್ನು ಮರೆತಿದ್ದರು ಅನ್ನಿಸುತ್ತದೆ. ಅವರ ಕಮೆಂಟ್‌ನ ಕಾರಣಕ್ಕಾಗಿ ಅವರೊಂದಿಗೆ  ವ್ಯವಹಾರ ಸಂಪರ್ಕ ಹೊಂದಿದ್ದ ರಿಯಲ್ ಎಸ್ಟೇಟ್‌ ಕಂಪನಿಯು ಹೂಡಾ ಜೊತೆಗಿನ ವ್ಯವಹಾರವನ್ನು ರದ್ದುಗೊಳಿಸಿದೆ. ಅಲ್ಲದೆ, ಮ್ಯಾಕ್ವಿಲ್ಲೆ ಪಬ್ಲಿಕ್‌ ಸ್ಕೂಲ್‌ ಅವರನ್ನು ಸ್ಕೂಲ್‌ ಕೌನ್ಸಿಲ್ ಚೇರ್‌ನಿಂದ ತೆಗೆದು ಹಾಕಿದೆ.

ಕೊರೊನಾ ಹರಡುವಿಕೆಗೆ ಮುಸ್ಲೀಮರನ್ನು ಗುರಿಯಾಗಿಕೊಂಡು ಇಸ್ಲಾಂ ವಿರುದ್ಧ ದ್ವೇಷ ಭಿತ್ತುತ್ತಿದ್ದ ಕಾರಣಕ್ಕಾಗಿ ಭಾರತೀಯ ವಲಸಿರನ್ನು ಕೊಲ್ಲಿ ರಾಷ್ಟ್ರಗಳು ಉದ್ಯೋಗದಿಂದ ವಜಾಗೊಳಿಸುತ್ತಿದ್ದವು. ಈಗ ಅದೇ ಕೆಲಸವನ್ನು ಕೆನಡಾ ಆರಂಭಿಸಿದೆ. ಇದಕ್ಕಾಗಿ ಕೆನಡ ಹಲವು ದೇಶಗಳಿಂದ ಪ್ರಶಂಸೆಯನ್ನು ಪಡೆದುಕೊಂಡಿದೆ.

ಮುಸ್ಲೀಂ ವಿರೋಧಿ ದ್ವೇಷ ಭಿತ್ತುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೊಲ್ಲಿ ರಾಷ್ಟ್ರಗಳು ಈ ಮೊದಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದವು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ, ಈ ನಡೆಯನ್ನು ಅನುಸರಿಸುತ್ತಿವೆ ಎಂದು ಆ ರಾಷ್ಟ್ರಗಳು ತಿಳಿಸಿವೆ.

ಭಾರತದಲ್ಲಿ ರೂಢಿಯಲ್ಲಿರುವುದರಿಂದ ಎಲ್ಲೆಡೆ ಪಸರಿಸುತ್ತಿದೆ

ಕಳೆದ ಕೆಲವು ವರ್ಷಗಳಿಂದ ಮುಸ್ಲೀಂ ವಿರೋಧಿ ದ್ವೇಷ ಮತ್ತು ಕೋಮು ಧ್ರುವೀಕರಣವು ಭಾರತದ ರಾಜಕೀಯ ವರ್ಗಕ್ಕೆ ಕಡಿಮೆ ಖರ್ಚಿನಲ್ಲಿ ಚುನಾವಣೆಯನ್ನು ಗೆಲ್ಲುವ ಸೂತ್ರವಾಗಿದೆ.

2014ರ ಲೋಕಸಭಾ ಚುನಾವಣೆಯ ನಂತರ ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಕೋಮು ವಿಭಜನೆ, ಕೋಮು ಪ್ರಚೋದನೆಯು ಅತಿಹೆಚ್ಚಾಗಿ ಹಬ್ಬುತ್ತಿದೆ. ಈ ರೀತಿಯ ಮುಸ್ಲೀಂ ವಿರುದ್ದದ ಕೋಮು ದ್ವೇಷ ಭಾರತದಲ್ಲಿ ಮನ್ನಣೆ ಪಡೆಯುತ್ತಿರುವ ಕಾರಣದಿಂದಾಗಿ ಧರ್ಮಾಂಧತೆ ಸಾಮಾನ್ಯವಾಗಿದೆ.

ಇದು, ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿರುವ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುವ ಮತ್ತು ವಾಸಿಸುವ ಅನೇಕ ಭಾರತೀಯರು ಅಲ್ಲಿದ್ದುಕೊಂಡೇ ಇಂತಹ ಕೋಮು ದ್ವೇಷದ ಪೋಸ್ಟ್‌ ಹಾಕುವ ಸಾಹಸಕ್ಕೆ ಮುಂದಾಗುವಷ್ಟು ಪ್ರಭಾವ ಬೀರಿದೆ. ಆ ಕಾರಣಕ್ಕಾಗಿ ಅವರು ಅದರ ಪರಿಣಾಮವನ್ನು ಎದುರಿಸುತ್ತಿದ್ದಾರೆ.

ಕರೋನಾ ಜಿಹಾದ್ ಎಂಬ ಫೇಕ್ – ಭಾರತೀಯ ಅನಿವಾಸಿಗಳ ಮೇಲೆ ಪರಿಣಾಮ

ಬಹುಸಂಖ್ಯಾತ ಭಾರತೀಯರ ಮುಸ್ಲೀಂ ವಿರೊಧಿ ಧೋರಣೆಯು ದೇಶವನ್ನು ಆಳವಾಗಿ ಧ್ರುವೀಕರಿಸುವುದಷ್ಟೇ ಅಲ್ಲದೆ, ಜಗತ್ತಿನಲ್ಲಿರುವ ಸಾಮಾಜಿಕ ಒಗ್ಗಟ್ಟನ್ನು ರದ್ದುಗೊಳಿಸುವ ಅಪಾಯವನ್ನುಂಟುಮಾಡುತ್ತದೆ. ಇದರಿಂದಾಗಿ ವಿದೇಶಗಳಲ್ಲಿರುವ ಭಾರತೀಯ ವಲಸೆ ನಾಗರಿಕರಿಗೆ ಸಿಗುವ ಆರ್ಥಿಕ ಲಾಭವನ್ನೂ ಕಳೆದುಕೊಳ್ಳುತ್ತದೆ.

ಮುಸ್ಲೀಂ ವಿರೋಧಿ ದ್ವೇಷವನ್ನು ಕಡಿಮೆ ಮಾಡುವಲ್ಲಿ ಇಂದು ಎದುರಿಸುತ್ತಿರುವ ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿಯು ಸಹ ನಿಷ್ಪರಿಣಾಮಕಾರಿಯಾಗಿದೆ. ಬದಲಾಗಿ ಈ ಪರಿಸ್ಥಿತಿಯನ್ನು ಮತ್ತಷ್ಟು ದ್ವೇಷ ಹರಡಲು ಸಾಧನವಾಗಿ ಬಳಸಿಕೊಳ್ಳಲಾಗಿದೆ.

ಮಾರ್ಚ್ 28 ಮತ್ತು ಏಪ್ರಿಲ್ 3 ರ ನಡುವೆ, ‘ಕರೋನಾ ಜಿಹಾದ್’ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಮೂರು ಲಕ್ಷ ಬಾರಿ ಕಾಣಿಸಿಕೊಂಡಿದ್ದು, ಸುಮಾರು 30 ಕೋಟಿ ಜನರು ದ್ವೇಷಕ್ಕೆ ಗುರಿಯಾಗಿದ್ದಾರೆ ಎಂದು ವರದಿಯಾಗಿದೆ. ಇದು, ದೆಹಲಿಯ ತಬ್ಲೀಘಿ ಜಮಾಅತ್ ಸಭೆ ಮತ್ತು ನಂತರದ ಮುಸ್ಲಿಂ ಸಮುದಾಯವನ್ನು ವಿಲ್ಲನ್‌ಗಳನ್ನಾಗಿ ಬಿಂಬಿಸುವುದು ಮತ್ತು ಅಲ್ಪಸಂಖ್ಯಾತರನ್ನು ಹೇಗೆ ಗುರಿಯಾಗಿಸುವುದು ಎಂಬುದನ್ನು ಸಾಬೀತು ಪಡಿಸಿದೆ.

ಬಹುಶಃ ಅರಬ್ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಬಹಿರಂಗ ಪಡಿಸಿಕೊಳ್ಳಲು ಇಷ್ಟವಿಲ್ಲದ ಪ್ರಧಾನಿ ಮೋದಿ, ತಡವಾಗಿ ಈ ಬಗ್ಗೆ ತುಟಿ ಬಿಚ್ಚಿದರು ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಏಕತೆಯ ಕರೆ ನೀಡಿದರು.

ಒಟ್ಟಾರೆಯಾಗಿ, ಮುಸ್ಲಿಮರು ಹಿಂಸಾತ್ಮಕವಾಗಿ ಹಲ್ಲೆಗೊಳಗಾದಾಗ ಅಥವಾ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಒಳಗಾದ ಘಟನೆಗಳು ಭಾರತದಾದ್ಯಂತ ವರದಿ ಮಾಡಲು ಪ್ರಾರಂಭಿಸಿದಾಗಲೂ ಇದನ್ನು ಯಾವ ದೇಶವೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಆದರೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಂದರ್ಭದಲ್ಲೂ ದ್ವೇಷಬಿತ್ತುವ ಧೋರಣೆ ಮುಂದುರೆದಿರುವ ಈಗಿನ ಸಂದರ್ಭದಲ್ಲಿ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಅಲ್ಲದೆ, ಅನ್ಯ ದೇಶದಲ್ಲಿದ್ದುಕೊಂಡು ದ್ವೇಷದ ಕ್ರೌರ್ಯ ಹೊಂದಿರುವವರನ್ನು ಗುರುತಿಸಿ, ಅದರ ಪರಿಣಾಮವನ್ನು ಅನುಭವಿಸುವಂತೆ ಮಾಡುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights