ಕೊರೊನಾ ಸೋಂಕಿಗೆ ತಮಿಳುನಾಡಿನ ಡಿಎಂಕೆ ಶಾಸಕ ಅನ್ಬಳಗನ್ ಸಾವು..!

ಕೊರೊನಾ ಸೋಂಕಿಗೆ ತಮಿಳುನಾಡಿನ ಡಿಎಂಕೆ ಶಾಸಕ ಅನ್ಬಳಗನ್ ಬಲಿಯಾಗಿದ್ದಾರೆ. ಸಿಎಂ ಪಳನಿಸ್ವಾಮಿ ಅನ್ಬಳಗನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕೊರೊನಾ ವೈರಸ್ ಗೆ ಒಳಗಾದ ಡಿಎಂಕೆ ಶಾಸಕ ಜೆ ಅನ್ಬಳಗನ್ ಅವರು (62) ಚೆನ್ನೈನಲ್ಲಿ ಬುಧವಾರ ನಿಧನರಾದರು. ಅವರು ತಮ್ಮ 62 ನೇ ಹುಟ್ಟುಹಬ್ಬದಂದೇ ನಿಧನರಾಗಿದ್ದು ಕುಟುಂಬಸ್ಥರಲ್ಲಿ ಭಾರೀ ಅಘಾತವನ್ನುಟುಮಾಡಿದೆ.

ಅನ್ಬಳಗನ್ ಅವರು ಕೋವಿಡ್ -19 ಗೆ ಚೆನ್ನೈನ ಕ್ರೋಮ್‌ಪೇಟೆಯಲ್ಲಿರುವ ಡಾ. ರೇಲಾ ಸಂಸ್ಥೆ ಮತ್ತು ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್-19 ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಅವರನ್ನು ಜೂನ್ 2 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.

“ತೀವ್ರ ನ್ಯುಮೋನಿಯಾದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅನ್ಬಳಗನ್ ಅವರ ಆರೋಗ್ಯ ಇಂದು ಮುಂಜಾನೆ ಹೆಚ್ಚು ಹದಗೆಟ್ಟಿತ್ತು. ಹೀಗಾಗಿ  ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ” ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಶಾಸಕರ ನಿಧನದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ದುಃಖ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸಿದ್ದಾರೆ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕೂಡ ಅನ್ಬಳಗನ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಅವರಿಗೆ ಗೌರವ ಸಲ್ಲಿಸಿದರು.

ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಶಾಸಕರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು ಮತ್ತು ಅವರ ಸಾವು ದೊಡ್ಡ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/VNarayanasami/status/1270560910986248192

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights