ನಕಲಿ ಅಂಕಪತ್ರ: ವಿಧಾನಸಭೆಯಿಂದ ಬಿಜೆಪಿ ಶಾಸಕ ಅನರ್ಹ; ಐದು ವರ್ಷ ಜೈಲು!

ಉತ್ತರ ಪ್ರದೇಶದ ಅಯೋಧ್ಯೆಯ ಗೋಸಾಯಿಗಂಜ್ ಕ್ಷೇತ್ರದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ಅಲಿಯಾಸ್ ಖಬ್ಬು ತಿವಾರಿ ಕಾಲೇಜು ಪ್ರವೇಶ ಪಡೆಯುವಾಗ ನಕಲಿ ಅಂಕಪತ್ರ ಬಳಿಸಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು, 8,000 ರೂ ದಂಡದ ಜೊತೆಗೆ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಕ್ಟೋಬರ್ 18 ರಂದು ಅಯೋಧ್ಯೆ ಎಂಪಿ/ಎಂಎಲ್‌ಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಪೂಜಾ ಸಿಂಗ್ ಅವರ ತೀರ್ಪಿನ ಆಧಾರದಲ್ಲಿ ತಿವಾರಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಗಿದೆ.

ಬಿಜೆಪಿ ಶಾಸಕ ಇಂದ್ರ ಪ್ರತಾಪ್
ಬಿಜೆಪಿ ಶಾಸಕ ಇಂದ್ರ ಪ್ರತಾಪ್

ಇದು 28 ವರ್ಷಗಳ ಹಳೆಯ ಪ್ರಕರಣವಾಗಿದ್ದು, ತಿವಾರಿಯವರ ಐದು ವರ್ಷಗಳ ಶಾಸಕ ಸ್ಥಾನದ ಅಧಿಕಾರಾವಧಿಯು ಕೊನೆಗೊಳ್ಳುವ ಕೆಲವೇ ತಿಂಗಳುಗಳ ಮೊದಲು ಈ ಶಿಕ್ಷೆ ಸಂಭವಿಸಿದೆ. ಅಕ್ಟೋಬರ್ 18 ರಿಂದಲೇ ಅವರ ಅಧಿಕಾರವಧಿ ಕೊನೆಗೊಂಡಿದೆ ವಿಧಾನಸಭಾ ಪ್ರಿನ್ಸಿಪಲ್ ಸೆಕ್ರಟರಿ ವಿನೋದ್ ಕುಮಾರ್ ದುವೆ ನೋಟಿಸ್ ಹೊರಡಿಸಿದ್ದಾರೆ.

ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಯದುವಂಶ್ ರಾಮ್ ತ್ರಿಪಾಠಿ ಅವರು 1992ರಲ್ಲಿ ದಾಖಲಾತಿ ಪಡೆಯಲು ನಕಲಿ ಅಂಕಪತ್ರ ಬಳಸಿದ್ದಾರೆ ಎಂದು ಆರೋಪಿಸಿ ತಿವಾರಿ ವಿರುದ್ಧ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಿವಾರಿ ಅವರು ಮೊದಲ ವರ್ಷದ ನಕಲಿ ಅಂಕಪಟ್ಟಿ ತಯಾರಿಸಿ ಬಿಎಸ್ಸಿ ಎರಡನೇ ವರ್ಷಕ್ಕೆ ಪ್ರವೇಶ ಪಡೆದಿದ್ದರು ಎಂದು ತ್ರಿಪಾಠಿ ಆರೋಪಿಸಿದ್ದರು.

ನಕಲಿ ಅಂಕಪಟ್ಟಿ ಪ್ರಕರಣದಲ್ಲಿ, ತನಿಖಾಧಿಕಾರಿಯು 419 ಮತ್ತು 420 ಸೇರಿದಂತೆ ವಿವಿಧ IPC ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಕೆಳ ನ್ಯಾಯಾಲಯವು 2018 ರಲ್ಲಿ ವಿಚಾರಣೆಗಾಗಿ ಸೆಷನ್ ನ್ಯಾಯಾಲಯಕ್ಕೆ ವಿಷಯವನ್ನು ಉಲ್ಲೇಖಿಸಿತ್ತು. ಈ 28 ವರ್ಷಗಳ ಸುದೀರ್ಘ ವಿಚಾರಣೆಯಲ್ಲಿ, ಫಿರ್ಯಾದಿ ಪ್ರೊಫೆಸರ್ ಯದುವಂಶ್ ರಾಮ್ ತ್ರಿಪಾಠಿ ಕೂಡ ಸಾವನ್ನಪ್ಪಿದ್ದರು ಮತ್ತು ಇತರ ಅನೇಕ ಸಾಕ್ಷಿಗಳು ಸಹ ನಿಧನರಾದರು. ನಂತರ, ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ಇತರ ಸಾಕ್ಷಿಗಳನ್ನು ಹಾಜರುಪಡಿಸಿತ್ತು.

ಇಂದ್ರ ಪ್ರತಾಪ್ ತಿವಾರಿ ಅಲಿಯಾಸ್ ಖಬ್ಬು ತಿವಾರಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಅವರ ವಿರುದ್ಧ 302, 307,308, 420, 467, 471, 504, 506, 147, 148, 149, 307, 120 ಬಿ ಮುಂತಾದ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯವು ಅಪಹರಣ ಪ್ರಕರಣದಲ್ಲ ತಿವಾರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 8,000 ರೂ ದಂಡ ವಿಧಿಸಿದೆ.

ಇದನ್ನೂ ಓದಿ: ಲಂಚ ಪ್ರಕರಣಕ್ಕೆ ನೈತಿಕ ಅಧಃಪತನದ ಮುಖವಾಡ: ಲೋಕಾಯುಕ್ತದ ಶಿಫಾರಸ್ಸು ತಿರಸ್ಕರಿಸಿದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights