ಟೋಕಿಯೊ ಒಲಿಂಪಿಕ್ಸ್: ಉತ್ತಮ ಪ್ರದರ್ಶನ ನೀಡಿಯೂ ಪದಕ ಮಿಸ್‌ ಮಾಡಿಕೊಂಡ ಅದಿತಿ!

ಅದಿತಿ ಅಶೋಕ್ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಗಾಲ್ಫ್ ಆಟಗಾರ್ತಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನ ಗಾಲ್ಫ್‌ ಆಟದಲ್ಲಿ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಅದಿತಿ ಅವರು ನಾಲ್ಕು ಸುತ್ತುಗಳಲ್ಲಿಯೂ ಧನಾತ್ಮಕ ಸ್ಪರ್ಧೆಯಲ್ಲಿದ್ದರು, ಅವರ ಆಟವು ಚಿನ್ನ ಗೆಲ್ಲಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆದರೆ, ನಾಲ್ಕನೇ ಸುತ್ತು ಮುಗಿಯುವ ವೇಳೆಗೆ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದರು. ಗಾಲ್ಫ್‌ಬಲ್ಲಿ ಅಮೆರಿಕಾದ ನೆಲ್ಲಿ ಕೊರ್ಡಾ ಅವರು ಚಿನ್ನದ ಪದಕ ಗೆದ್ದುಕೊಂಡರು.

ಉಳಿದಂತೆ ಬೆಳ್ಳಿಗಾಗಿ ಜಪಾನ್‌ನ ಮೊನೆ ಇನಾಮಿ ಮತ್ತು ನ್ಯೂಜಿಲ್ಯಾಂಡ್‌ನ ಲಿಡಿಯಾ ಕೋ ಅವರು ಸಮಾನ ಅಂಕಗಳನ್ನು ಪಡೆದುಕೊಂಡಿದ್ದಾರೆ.

“ಇದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಒಲಿಂಪಿಕ್ಸ್‌ನಲ್ಲಿ ಟಾಪ್ 5 ಅಥವಾ ಟಾಪ್ 10ನಲ್ಲಿ ಬರುವುದು ನಿಜವಾಗಿಯೂ ಉತ್ತಮವಾದದು. ಏಕೆಂದರೆ, ಕ್ರೀಡೆ ಅಥವಾ ಆ ವ್ಯಕ್ತಿಗೆ ಪದಕದ ಅವಕಾಶ ಇದ್ದೇ ಇರುತ್ತದೆ. ಇದು ಆಟದ ಬೆಳವಣಿಗೆಗೆ ಸಹಾಯ ಮಾಡುತ್ತದೆ “ಎಂದು ಅದಿತಿಅಶೋಕ್‌ ಹೇಳಿದ್ದಾರೆ.

“ನಾನು ಗಾಲ್ಫ್ ಆಟವನ್ನು ಪ್ರಾರಂಭಿಸಿದಾಗ ನಾನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತೇನೆ ಎಂಬ ಕನಸನ್ನೂ ಕಂಡಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಅದಿತಿ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ಈವೆಂಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮೂರು ರೌಂಡ್‌ಗಳು ಮುಗಿಯುವವರೆಗೂ ಅವರು 2ನೇ ಸ್ಥಾನದಲ್ಲಿದ್ದರು. ನಾಲ್ಕನೇ ಸುತ್ತಿನಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದರು.

2016ರಲ್ಲಿ ರಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಅದಿತಿ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಆಗ ಅವರು 41ನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ: ಹಾಕಿ ತಂಡದಲ್ಲಿ ದಲಿತರು ಹೆಚ್ಚು ಇದ್ದದ್ದೇ ಸೋಲಿಗೆ ಕಾರಣ; ಜಾತಿ ನಿಂದನೆಗೆ ತುತ್ತಾದ ಸ್ಟಾರ್‌ ಆಟಗಾರ್ತಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights