ಫ್ಯಾಕ್ಟ್‌ಚೆಕ್: ಬಡವರಿಗೆ ಕೇಂದ್ರ ಸರ್ಕಾರ ರೂ 30,628 ನೀಡುತ್ತದೆ ಎಂಬ ಸಂದೇಶ ನಕಲಿ

ದೇಶದ ಪ್ರತಿಯೊಬ್ಬ ಪ್ರಜೆಗೂ 30,628 ರೂಪಾಯಿ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ Ensuddi.com ವಾಟ್ಸಾಪ್‌ಗೂ  ವಿನಂತಿಗಳು ಬಂದಿವೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಎಲ್ಲ ಬಡವರಿಗೂ ಹಣ ನೀಡುತ್ತದೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

“ಭಾರತದ ಜನರು ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಗಣನೆಗೆ ತೆಗೆದುಕೊಂಡ ನಂತರ, ಬಿಕ್ಕಟ್ಟಿನ ತೀವ್ರತೆಯನ್ನು ಕಡಿಮೆ ಮಾಡಲು ಪ್ರತಿ ನಾಗರಿಕರಿಗೆ (INR 30,628 ) ಮೊತ್ತವನ್ನು ನೀಡಲು ಹಣಕಾಸು ಸಚಿವಾಲಯ ನಿರ್ಧರಿಸಿದೆ” ಎಂದು ಬ್ಲಾಗ್‌ನ ಸಂದೇಶದಲ್ಲಿ ಹೇಳಲಾಗಿದೆ.

30,628 ಮೊತ್ತವನ್ನು ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಲು ಬ್ಲಾಗ್ ಬಳಕೆದಾರರನ್ನು ಕೇಳುತ್ತದೆ. ಆರ್ಥಿಕ ಬೆಂಬಲ ಕಾರ್ಯಕ್ರಮದ ಭಾಗವಾಗಲು ಜನರನ್ನು ಪ್ರೋತ್ಸಾಹಿಸಲು ಐದು WhatsApp ಗುಂಪುಗಳಲ್ಲಿ 15 ಸ್ನೇಹಿತರಿಗೆ ಸಂದೇಶವನ್ನು ರವಾನಿಸಲು ಅದು ಬಳಕೆದಾರರನ್ನು ಕೇಳುತ್ತದೆ.

ಕೆಳಗಿನ ಸೂಚನೆಗಳನ್ನು ಅನುಸರಿಸಿದ ನಂತರ ಮೊತ್ತವು ತಕ್ಷಣವೇ ಲಭ್ಯವಾಗುತ್ತದೆ

1- ಕೆಳಗಿನ “ಆಹ್ವಾನ” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು WhatsApp ನಲ್ಲಿ 15 ಸ್ನೇಹಿತರು ಅಥವಾ 5 ಗುಂಪುಗಳಿಗೆ ಸಂದೇಶವನ್ನು ಕಳುಹಿಸಿ, ಇದರಿಂದ ಅವರು ಆರ್ಥಿಕ ಬೆಂಬಲ ಕಾರ್ಯಕ್ರಮದಿಂದ ಪ್ರಯೋಜನ ಪಡೆಯಬಹುದು.

2- ಗ್ರೀನ್ ವೆರಿಫಿಕೇಶನ್ ಬಾರ್ ತುಂಬಿದ ತಕ್ಷಣ ವಾಪಸಾತಿ ಕೋಡ್ ಕಾಣಿಸಿಕೊಳ್ಳುತ್ತದೆ.

ಆದರೆ, ಕೇಂದ್ರವು ಅಂತಹ ಯಾವುದೇ ನೆರವನ್ನು ಘೋಷಿಸಿಲ್ಲ ಮತ್ತು ಇದು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸಲು ಆನ್‌ಲೈನ್‌ನಲ್ಲಿ ಕಿಡಿಗೇಡಿಗಳು ಹರಡಿದ ಮತ್ತೊಂದು ನಕಲಿ ಸುದ್ದಿಯಾಗಿದೆ. press information Bureau ಕೂಡ ಇದೊಂದು ನಕಲಿ ಸಂದೇಶ ಎಂದು ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವಾಟ್ಸಾಪ್ ಮತ್ತು ಇತರೆ ವೇದಿಕೆಗಳಲ್ಲಿ ಹರಿದಾಡುತ್ತಿರುವ ಕೇಂದ್ರದಿಂದ 30,628 ರೂ ಸಾಹಾಯ ಎಂಬ ಸುದ್ದಿ ನಕಲಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಫ್ಯಾಕ್ಟ್‌ಚೆಕ್ ಮೂಲಕ ದೃಢಪಡಿಸಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿಲ್ಲ ಮತ್ತು ಅದು ಸಂಪೂರ್ಣವಾಗಿ ನಕಲಿ ಎಂದು ತಿಳಿದುಬಂದಿದೆ. “ಈ ಸಂದೇಶವು ನಕಲಿಯಾಗಿದೆ, ಅಂತಹ ಯಾವುದೇ ಸಹಾಯವನ್ನು @FinMinIndia ಘೋಷಿಸಿಲ್ಲ” ಎಂದು PIB ಟ್ವೀಟ್ ನಲ್ಲಿ ತಿಳಿಸಿದೆ. ಇಂತಹ ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡಬೇಡಿ ಮತ್ತು ಇಂತಹ ಸಂಶಯಾಸ್ಪದ ಸುದ್ದಿಗಳನ್ನು ನಂಬಬೇಡಿ ಎಂದು ಪಿಐಬಿ ಸಾರ್ವಜನಿಕರನ್ನು ವಿನಂತಿಸಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಸ್ಸಾಂ ಮಳೆಗೆ ಕೊಚ್ಚಿ ಹೋದ ಸೇತುವೆ ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.