ಫ್ಯಾಕ್ಟ್‌ಚೆಕ್: ಸಿನಿಮಾ ಹೀರೋ ಫೋಟೊವನ್ನು ರಾಹುಲ್ ಗಾಂಧಿ ಎಂದು ತಪ್ಪಾಗಿ ಹಂಚಿಕೆ

ರಾಹುಲ್ ಗಾಂಧಿ ಮತ್ತೆ ಸುದ್ದಿಯಲ್ಲಿದ್ದಾರೆ, ಇತ್ತೀಚೆಗೆ ನೇಪಾಳದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಯುವತಿಯೊಬ್ಬರ ಜೊತೆಯಿದ್ದ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಈಗ ಸಾಮಾಜಿಕ ಮಾಧ್ಯಮದಲ್ಲಿ ಇಂತಾದ್ದೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ ಅದೇನೆಂದರೆ, ರಾಹುಲ್ ಗಾಂಧಿ ಅವರು ಯುವತಿಯೊಬ್ಬಳನ್ನು ತಮ್ಮ ತೋಳುಗಳಲ್ಲಿ ಹೊತ್ತಿದ್ದಾರೆ ಎನ್ನುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಸುದ್ದಿಯ ಸತ್ಯಾಸತ್ಯತೆ ಏನೆಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್: 

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಅದೇ ಫೋಟೋ ‘ಅಲಾಮಿ’ ಸ್ಟಾಕ್ ಇಮೇಜಸ್ ವೆಬ್‌ಸೈಟ್‌ನಲ್ಲಿ ಕಂಡುಬಂದಿದೆ. ಫೋಟೋ ಈ ಕೆಳಗಿನ ವಿವರಣೆಯು ಇದೊಂದು ಸಿನಿಮಾದ ದೃಶ್ಯ ಎಂದು ತಿಳಿಸಿದೆ. “ಫಿಫ್ಟಿ ಶೇಡ್ಸ್ ಫ್ರೀಡ್” ನಲ್ಲಿ ಕ್ರಿಶ್ಚಿಯನ್ ಗ್ರೇ ಮತ್ತು ಅನಸ್ತಾಸಿಯಾ ಸ್ಟೀಲ್ ಇಬ್ಬರು “ಜೇಮಿ ಡೋರ್ನನ್ ಮತ್ತು ಡಕೋಟಾ ಜಾನ್ಸನ್ ಆಗಿ ಹಿಂತಿರುಗುತ್ತಾರೆ” ಎಂದು ಬರೆಯಲಾಗಿದೆ. “ಫಿಫ್ಟಿ ಶೇಡ್ಸ್” ಸಿನಿಮಾ ರೊಮ್ಯಾಂಟಿಕ್ ಫೀಚರ್ಸ್ ಆಧರಿಸಿದ ಅಧ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ಮಹಿಳೆಯನ್ನು ತನ್ನ ತೋಳುಗಳಲ್ಲಿ ಹೊತ್ತಿರುವ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ, ಅವರು ನಟ ಜೇಮಿ ಡೋರ್ನನ್. ಫೋಟೋದಲ್ಲಿರುವ ಮಹಿಳೆ ನಟಿ ಡಕೋಟಾ ಜಾನ್ಸನ್. ಈ ಫೋಟೋ ‘ಫಿಫ್ಟಿ ಶೇಡ್ಸ್ ಫ್ರೀಡ್’ ಸಿನಿಮಾದ ದೃಶ್ಯವೊಂದಕ್ಕೆ ಸಂಬಂಧಿಸಿದ್ದು.  ಇದೇ ಫೋಟೋವನ್ನು ‘ಫಿಫ್ಟಿ ಶೇಡ್ಸ್ ಫ್ರೀಡ್’ ಚಲನಚಿತ್ರದ ಬಗ್ಗೆ ಬರೆದ ಹಲವಾರು ಲೇಖನಗಳಿದ್ದು, ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ಮಾಡಿದ ಫೋಟೋದಲ್ಲಿ ಮಹಿಳೆಯನ್ನು ತನ್ನ ತೋಳುಗಳಲ್ಲಿ ಹಿಡಿದಿರುವ ವ್ಯಕ್ತಿ ನಟ ಜೇಮಿ ಡೋರ್ನನ್, ರಾಹುಲ್ ಗಾಂಧಿ ಅಲ್ಲ.  ಫೋಟೋದಲ್ಲಿರುವ ನಟ ಜೇಮಿ ಡೋರ್ನನ್ ಸ್ವಲ್ಪ ರಾಹುಲ್ ಗಾಂಧಿಯನ್ನು ಹೋಲುವಂತಿದ್ದಾರೆ ಹಾಗಾಗಿ ಅವರು ನಟಿಸಿದ ‘Fifty Shades’ ಸಿನಿಮಾದ  ದೃಶ್ಯವೊಂದರ ಫೋಟೊವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹರಡಿದ್ದಾರೆ. ಇಂತಹ ಅನೇಕ ಸುಳ್ಳುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ ಇವುಗಳ ಬಗ್ಗೆ ಎಚ್ಚರವಿರಲಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಕ್ ಧ್ವಜದ ಬಣ್ಣದಿಂದ ಅಲಂಕಾರ ಮಾಡಿದೆ ಎಂದು ಸುಳ್ಳು ಹೇಳಿದ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.