IPL 2021: ಹುಸಿಯಾಯ್ತು ಕಪ್ ಗೆಲ್ಲುವ ಭರವಸೆ; ಟೂರ್ನಿಯಿಂದ ಆರ್‌ಸಿಬಿ ಔಟ್!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಾದರೂ ಆರ್‌ಸಿಬಿ ಕಪ್ ಗೆಲ್ಲುತ್ತದೆ ಎಂದು ಭರವಸೆ ಇಟ್ಟಿದ್ದ ಅಭಿಮಾನಿಗಳ ಆಸೆಗೆ ಆರ್‌ಸಿಬಿ ತಂಡ ತಣ್ಣೀರು ಎರಚಿದೆ. ಸೋಮವಾರ ಕೆಕೆಆರ್ ವಿರುದ್ದ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲುಂಡಿದೆ.

ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 4 ವಿಕೆಟ್‌ಗಳಿಂದ ಸೋಲನುಭವಿಸಿದೆ.

ಶಾರ್ಜಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದು, 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಎರಡನೇ ಕ್ವಾಲಿಫೈಯರ್ ಗೆ ಲಗ್ಗೆಯಿಟ್ಟಿದೆ. ಕೆಕೆಆರ್ ಎದುರು ಮುಗ್ಗರಿಸಿದ ಆರ್ಸಿಬಿ ಟೂರ್ನಿಯಿಂದ ಹೊರಬಿದ್ದಿದೆ.

ಆರ್ಸಿಬಿ ಪರವಾಗಿ ದೇವದತ್ ಪಡಿಕಲ್ 21, ವಿರಾಟ್ ಕೊಹ್ಲಿ 39, ಮ್ಯಾಕ್ಸ್ವೆಲ್ 15 ರನ್ ಗಳಿಸಿದರು. ಕೆಕೆಆರ್ ಪರ ಸುನಿಲ್ ನರೈನ್ 4, ಲೂಕಿ ಫರ್ಗುಸನ್ 2 ವಿಕೆಟ್ ಪಡೆದರು. ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಶುಭಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ಸುನೀಲ್ ನರೈನ್ 26 ರನ್ ಗಳಿಸಿದ್ದು, ಆರ್ಸಿಬಿ ಪರ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights