ರಾಜ್ಯದಲ್ಲಿ ಹೊಸದಾಗಿ 7,883 ಕೊರೊನಾ ಕೇಸ್: 113 ಮಂದಿ ಬಲಿ!
ಕರ್ನಾಟಕದಲ್ಲಿ ಇಂದು ಕೊರೋನಾ ರೌದ್ರಾವತಾರ ಮುಂದುವರೆಸಿದ್ದ ಇಂದು ದಾಖಲೆಯ 7,883 ಪ್ರಕರಣ ಪತ್ತೆಯಾಗಿದ್ದು 113 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 3,510ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯದ ಇಲಾಖೆ ಬಿಡುಗಡೆ ಮಾಡಿದ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 7,883 ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,96,494ಕ್ಕೆ ಏರಿಕೆಯಾಗಿದೆ.
ಇನ್ನು ರಾಜ್ಯದಲ್ಲಿ ಒಟ್ಟು 80,343 ಸಕ್ರಿಯ ಪ್ರಕರಣಗಳಿವೆ.ಬುಧವಾರ ದಾಖಲೆಯ 7,034 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ 1,12,633ಕ್ಕೆ ಏರಿದೆ. ಇನ್ನು ರಾಜಧಾನಿಯಲ್ಲಿ ಸೋಂಕು ಹೆಚ್ಚಾಗಿದೆ. ಬುಧವಾರ 2,802 ಹೊಸ ಕೇಸ್ ಪತ್ತೆಯಾಗಿದೆ. ಈವರೆಗೂ ನಗರದಲ್ಲಿ ಸೋಂಕಿತರ ಸಂಖ್ಯೆ 79,840ಕ್ಕೆ ಏರಿದೆ. 23 ಮಂದಿ ಕ್ರೂರಿ ಕೊರೊನಾಗೆ ಬಲಿಯಾಗಿದ್ದು ನಗರದಲ್ಲಿ ಕೋವಿಡ್ಗೆ ಮೃತರಾದವರ ಸಂಖ್ಯೆ 1,316ಕ್ಕೆ ಏರಿದೆ. ಬುಧವಾರ 2,360 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 45,034ಕ್ಕೆ ಏರಿದೆ.
ಇಂದಿನ 12/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/pg6s4m7ijR pic.twitter.com/nPWly7uWYr
— K'taka Health Dept (@DHFWKA) August 12, 2020

