ಫ್ಯಾಕ್ಟ್‌ಚೆಕ್ : ಮಗುವಿನ ಅಪಹರಣ ವಿಡಿಯೋ ಹಿಂದಿನ ರಹಸ್ಯವೇನು?

ಮಗುವಿನ ಅಪಹರಣವನ್ನು ಸೆರೆಹಿಡಿಯುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ತಾಯಿ ಆಟೋರಿಕ್ಷಾ ಚಾಲಕನೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದಾಗ ಮಹಿಳೆಯೊಬ್ಬರು ಮಗುವನ್ನು ಅಪಹರಿಸುವ ದೃಶ್ಯಗಳ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗಿದೆ.

ಮಗುವಿನ ತಾಯಿ ಆಟೋ ಡ್ರೈವರ್ ಜೊತೆ ಮಾತನಾಡುತ್ತಿರುವ ವೇಳೆ ತನ್ನ ಮಗುವನ್ನು ಅಲ್ಲೆ ನಿಂತಿದ್ದ ಅಪರಚಿತ ಮಹಿಳೆಯಬ್ಬಳು ಮಾತು ಬಾರದ ಮಗುವನ್ನು ಹೊತ್ತೊಯ್ಯುತ್ತಾಳೆ. ಅಪಹರಣ ದೃಶ್ಯವನ್ನು ಸೆರೆಹಿಡಿಯುವ ವ್ಯಕ್ತಿಗಳು ಮಗುವಿನ ಎಚ್ಚರಿಸುವಷ್ಟರಲ್ಲಿ ಅಪಹರಣಕಾರ ಮಗುವಿನೊಂದಿಗೆ ಪರಾರಿಯಾಗಿರುತ್ತಾಳೆ, ದೃಶ್ಯಗಳನ್ನು ಚಿತ್ರೀಕರಿಸುವ ಯುವಕರು ಅವಳನ್ನು ಬೆನ್ನಟ್ಟಿ, ಆಕೆಯ ಕೆನ್ನೆಗೆ ಹೊಡೆದು ಮಗುವನ್ನ ಮತ್ತೆ ತಾಯಿಗೆ ಒಪ್ಪಿಸುತ್ತಾರೆ.

ವಿಕಾಸ್ ನ್ಯೂಸ್ ಆನಂದ್ ಹೆಸರಿನ ಫೇಸ್‌ಬುಕ್ ಪುಟದಿಂದ ಪೋಸ್ಟ್ ಮಾಡಲಾದ ಐದು ನಿಮಿಷಗಳ ಅವಧಿಯ ವೀಡಿಯೊವನ್ನು 50 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 11 ಸಾವಿರಕ್ಕೂ ಹೆಚ್ಚು ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ಗುಜರಾತಿ ಭಾಷೆಯಲ್ಲಿ ಶೀರ್ಷಿಕೆಯನ್ನು ಹೊಂದಿದ್ದು, “ಮಕ್ಕಳ ಅಪಹರಣಕಾರಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ” ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಪೋಸ್ಟ್‌ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್ :

ವೀಡಿಯೊದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಅಂಕುರ್ ಜತುಸ್ಕರನ್ ಹೆಸರಿನ ಫೇಸ್‌ಬುಕ್ ಪೇಜ್ ಲಭ್ಯವಾಗಿದ್ದು.  ಜೂನ್ 7 ರಂದು ಪೋಸ್ಟ್ ಮಾಡಲಾದ ಅದೇ ವೀಡಿಯೋ ಅವರ ಪೇಜ್‌ನಲ್ಲಿ ಕಂಡುಬಂದಿದೆ. ಆದರೆ ಇದರ ಅವಧಿಯು ಸುಮಾರು ಎಂಟು ನಿಮಿಷಗಳು. “ಮೂಕ ತಾಯಿಯಿಂದ ಮಗುವಿನ ಅಪಹರಣ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೊವು 16-ಸೆಕೆಂಡಿನ ಹಕ್ಕು ನಿರಾಕರಣೆ ಹೊಂದಿದ್ದು, ಕೃತ್ಯವು ಸ್ಕ್ರಿಪ್ಟ್ ಆಗಿದೆ ಎಂದು ಸ್ಪಷ್ಟಪಡಿಸುತ್ತದೆ.


ಇನ್ನೂ ಕೆಲವು ಕೀವರ್ಡ್ ಸರ್ಚ್ ನಡೆಸಿದಾಗ ಅಂಕುರ್ ಜತುಸ್ಕರನ್ ಎಂಬ ದೃಢೀಕೃತ YouTube ಚಾನಲ್‌ ಲಭ್ಯವಾಗಿದ್ದು, ಅದು ಹಲವು ಹಾಸ್ಯ ಮತ್ತು ಸ್ಕ್ರಿಪ್ಟ್ ವೀಡಿಯೊಗಳನ್ನು ಹೊಂದಿದೆ. ವೈರಲ್ ವಿಡಿಯೋದ ಮೂಲ ವೀಡಿಯೊ ಇಲ್ಲಿ ಲಭ್ಯವಿಲ್ಲವಾದರೂ, ಮಗುವನ್ನು ರಕ್ಷಿಸಲು ಮುಂದಾದ ವ್ಯಕ್ತಿಯು ಇಲ್ಲಿ ಪ್ರಕಟಿಸಲಾದ ಇತರ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾನೆ. “ಈ ವೀಡಿಯೊವನ್ನು  ವಾಸ್ತವವಾಗಿ ಮನರಂಜನಾ ಉದ್ದೇಶಗಳಿಗಾಗಿ ಮಾತ್ರ  ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವೈರಲ್ ವಿಡಿಯೊ ನೈಜ ವಿಡಿಯೊ ಅಲ್ಲ ಅದೊಂದು ಸ್ಕ್ರಿಪ್ಟ್‌ ಮಾಡಲಾದ ಜಾಗೃತಿ ಮತ್ತು ಮನೋರಂಜನೆಯ ಉದ್ದೇಶಕ್ಕೆ ರಚಿಸಲಾದ ವಿಡಿಯೊ. ಆದರೆ ಇದನ್ನು ಮಗುವಿನ ಅಪಹರಣದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಆಂಧ್ರದಲ್ಲಿ ಕೆಸರು ನೀರು ಕುಡಿದ ಪೊಲೀಸರು! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights