ಫ್ಯಾಕ್ಟ್ಚೆಕ್ : ಉದ್ದವ್ ಠಾಕ್ರೆ ಕಚೇರಿಯಲ್ಲಿ ಮೊದಲಿನಿಂದಲೂ ಶಿವಾಜಿ ಮತ್ತು ಬಾಳ್ ಠಾಕ್ರೆ ಫೋಟೋಗಳು ಇದ್ದವು
ಸಾಮಾಜಿಕ ಮಾಧ್ಯಮದಲ್ಲಿ ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಈ ಮೊದಲು ಉದ್ದವ್ ಠಾಕ್ರೆ ಕಚೇರಿಯಲ್ಲಿ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಅವರ ಫೋಟೋಗಳು ಕಾಣುತ್ತಿರಲಿಲ್ಲ. ಶಿವಸೇನೆ ಶಾಸಕರ ಬಂಡಾಯದ ನಂತರ ಉದ್ಧವ್ ಠಾಕ್ರೆ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಅವರನ್ನು ನೆನಪಿಸಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಎರಡು ಫೋಟೋಗಳ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಉದ್ದವ್ ಠಾಕ್ರೆ ಈ ಮೊದಲು ತಮ್ಮ ಕಚೇರಿಯಲ್ಲಿ ಶಿವಾಜಿ ಮಹಾರಾಜ್ ಮತ್ತು ಬಾಳ್ ಠಾಕ್ರೆ ಫೋಟೋವನ್ನು ಇರಿಸಿರಲಿಲ್ಲವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :
ಪೋಸ್ಟ್ನಲ್ಲಿರುವ ಎರಡು ಫೋಟೋಗಳ ವಿವರಗಳನ್ನು ತಿಳಿಯಲು ಉದ್ಧವ್ ಠಾಕ್ರೆ ಅವರ ಫೇಸ್ಬುಕ್ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ, ಎರಡು ಫೋಟೋಗಳನ್ನು ಅವರು ಪೋಸ್ಟ್ ಮಾಡಿದ ವೀಡಿಯೊಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದಿದೆ. ಮೊದಲ ಫೋಟೋವನ್ನು ಏಪ್ರಿಲ್ 2021 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ನೋಡಬಹುದು, ಆದರೆ ಎರಡನೇ ಫೋಟೋವನ್ನು 22 ಜೂನ್ 2022 ರಂತೆ ಪೋಸ್ಟ್ ಮಾಡಿದ ವೀಡಿಯೊದಿಂದ ನೋಡಬಹುದಾಗಿದೆ.
ಆದರೆ, ಪೋಸ್ಟ್ ಪ್ರಕಾರ, ಶಿವಸೇನೆ ಶಾಸಕರು ಬಂಡಾಯವೆದ್ದ ನಂತರವೇ ಉದ್ಧವ್ ಠಾಕ್ರೆ ಅವರು ತಮ್ಮ ಹಿಂದೆ ಶಿವಾಜಿ ಪ್ರತಿಮೆ ಮತ್ತು ಬಾಳ್ ಠಾಕ್ರೆ ಅವರ ಫೋಟೋವನ್ನು ಕಚೇರಿಯಲ್ಲಿ ಹಾಕಲಿಲ್ಲ. ಮೊದಲಿನಿಂದಲೂ ಅವರನ್ನು ಕಚೇರಿಯಲ್ಲಿ ಆ ಫೋಟೊಗಳಿದ್ದವು. ಅವರು ಜನವರಿ 2022 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಹ ಅವುಗಳನ್ನು ನೋಡಬಹುದು.

ಅಲ್ಲದೆ, 2020 ಮತ್ತು 2021 ರಲ್ಲಿ ವಿವಿಧ ಸಮಯಗಳಲ್ಲಿ ಅವರು ಇತರ ಶಿವಾಜಿ ಪ್ರತಿಮೆಗಳು ಮತ್ತು ಅವರ ಹಿಂದೆ ಬಾಳ್ ಠಾಕ್ರೆ ಅವರ ಫೋಟೋಗಳೊಂದಿಗೆ ಮಾತನಾಡಿದ್ದರು, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಶಿವಸೇನೆ ಶಾಸಕರು ಬಂಡಾಯ ಏಳುವ ಮುಂಚೆಯೂ ಉದ್ಧವ್ ಠಾಕ್ರೆ ಕಚೇರಿಯಲ್ಲಿ ಶಿವಾಜಿಯ ಪ್ರತಿಮೆಯನ್ನು ಮತ್ತು ಬಾಳ್ ಠಾಕ್ರೆ ಅವರ ಫೋಟೋವನ್ನು ಇಟಟ್ಟುಕೊಂಡಿದ್ದರು. ಅವರು ಜನವರಿ 2022 ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಹ ಅವುಗಳನ್ನು ನೋಡಬಹುದು. ಶಿವಸೇನಾ ಶಾಸಕರು ಬಂಡಾಯ ಎದ್ದ ಹಿನ್ನಲೆಯಲ್ಲಿ ಈ ರೀತಿಯ ಸುಳ್ಳು ಪೋಸ್ಟ್ಅನ್ನು ಹಂಚಿಕೊಂಡಿರಬಹುದು. ಹಾಗಾಗಿ ಪೋಸ್ಟ್fನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : RSS ಮುಖ್ಯಸ್ಥ ಭಾಗವತ್ ಜೊತೆ ದ್ರೌಪದಿ ಮುರ್ಮು ಫೋಟೋ ವೈರಲ್ ! ಫೋಟೋದ ಅಸಲಿಯತ್ತೇನು

